RIPPONPETE | ಸ್ಥಳೀಯ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಗವಟೂರು ಬಳಿಯ ಅರಕಟ್ಟೆ-ಅರಮನೆ ಹೊಳೆ ಸಂಪರ್ಕದ ಅಂಗನವಾಡಿ, ಶಾಲಾ-ಕಾಲೇಜ್ ವಿದ್ಯಾರ್ಥಿಗಳು ಸೇರಿದಂತೆ ನಾಗರೀಕರು ಮಳೆಗಾಲ ಬಂತೆಂದರೆ ಹೊಳೆ ನೀರಿನಲ್ಲೇ ದಾಟುವಂತಾಗಿದ್ದು ಯಾವ ಜನಪ್ರತಿನಿಧಿಗಳ ಗಮನಕ್ಕೆ ಬಂದರೂ ನಿರ್ಲಕ್ಷ್ಯ ವಹಿಸಿದ್ದಾರೆಂಬುದಕ್ಕೆ ಕಳೆದ ಐದಾರು ದಿನಗಳಿಂದ ಸುರಿಯುತ್ತಿರುವ ಭಾರಿ ಸಾಕ್ಷಿಯಾಗಿದೆ. ಮಳೆಯಿಂದಾಗಿ ಶರ್ಮಿಣ್ಯಾವತಿ ನದಿ ನೀರು ಅಪಾಯದ ಮಟ್ಟದಲ್ಲಿ ಹರಿಯುತ್ತಿದ್ದರು ಈ ಹಳ್ಳಿಯ ನಾಗರೀಕರು ಜೀವಭಯದಲ್ಲಿ ಹೊಳೆ ದಾಟುವಂತಾಗಿದೆ.
Malenadu Rain | ಕಳೆದ 24 ಗಂಟೆಗಳಲ್ಲಿ ಹೊಸನಗರ ತಾಲೂಕಿನ ಎಲ್ಲೆಲ್ಲಿ ಎಷ್ಟಾಗಿದೆ ಮಳೆ ?
ಕಳೆದ ಐದಾರು ದಶಕಗಳಿಂದ ಈ ಭಾಗದಲ್ಲಿ ವಾಸ ಮಾಡುತ್ತಿರುವ ಸುಮಾರು 50-60 ಬಡ ಕೂಲಿ ಕುಟುಂಬಗಳು ವಾಸ ಮಾಡುತ್ತಿದ್ದು ನಿತ್ಯ ಶಾಲಾ-ಕಾಲೇಜ್ ವಿದ್ಯಾರ್ಥಿಗಳು ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಅನಾರೋಗ್ಯಕ್ಕೆ ಒಳಗಾದವರು, ಗರ್ಭಿಣಿಯರು ಹೀಗೆ ರಿಪ್ಪನ್ಪೇಟೆ ಮತ್ತು ಹೊಸನಗರ, ಶಿವಮೊಗ್ಗಕ್ಕೆ ಹೋಗಿಬರಬೇಕಾರುವ ಸಂಪರ್ಕದ ರಸ್ತೆಗೆ ಇಲ್ಲಿ ಮಳೆಗಾಲ ಆರಂಭವಾಯಿತೆಂದರೆ ಕೊಂಕಣ ಸುತ್ತಿ ಮೈಲಾರಕ್ಕೆ ಬರಬೇಕಾಗಿದ್ದು ಅರಮನೆ-ಅರೆಕಟ್ಟೆ ಸಂಪರ್ಕದ ಶರ್ಮಿಣ್ಯಾವತಿ ಹೊಳೆಯಲ್ಲಿ ಇಳಿದು ದಡ ಸೇರಬೇಕಾಗಿದೆ. ಆಕಸ್ಮಿಕವಾಗಿ ಬಿದ್ದರೆ ದೇವರೆ ಗತಿ ಎಂದು ಹಿರಿಯರಾದ ಅಂಗನವಾಡಿ ಕಾರ್ಯಕರ್ತೆ ವಿನೋಧ, ರತ್ನಮ್ಮ, ಗಣೇಶ, ಶೇಖರ, ಮಂಜಪ್ಪ, ಜಯಲಕ್ಷ್ಮಿ, ಶರಾವತಿ, ಭೂಮಿಕ, ಮುಕುಂದ, ನಾಗೇಶ, ವಿಮಲ, ಷಣ್ಮುಖ, ಇಂಪನಾ, ಸುಮ, ಮಲ್ಲಮ್ಮ ಮಂಜುನಾಥ, ಕೃಷ್ಣಪ್ಪ, ವಾಸುಶೆಟ್ಟಿ ಇನ್ನಿತರರು ಸ್ಥಳಕ್ಕೆ ಭೇಟಿ ನೀಡಿದ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿ, ನಾವು ಸಾಕಷ್ಟು ಬಾರಿ ಜನಪ್ರತಿನಿಧಿಗಳ ಗಮನಕ್ಕೆ ತರಲಾದರೂ ಕೂಡಾ ಬರಿ ಆಶ್ವಾಸನೆಯಲ್ಲಿ ಕಾಲಕಳೆಯುತ್ತಿದ್ದಾರೆ. ಆದರೆ ಸಮಸ್ಯೆಗೆ ಪರಿಹಾರ ಮಾತ್ರ ದೊರಕಿಸಿಲ್ಲ ಎಂದು ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.
SORABA :ಮೀನು ಹಿಡಿಯಲು ಹೋದ ವ್ಯಕ್ತಿ ನಾಪತ್ತೆ !
ಇದು ನಿನ್ನೆ ಮೊನ್ನೆಯ ಸಮಸ್ಯೆಯಲ್ಲ. ಅಲ್ಲದೆ ಗ್ರಾಮ ಪಂಚಾಯ್ತಿಗೆ ಬರುವ ಅನುದಾನದಲ್ಲಿ ಈ ಹೊಳೆ ಸಂಪರ್ಕಕ್ಕೆ ಸೇತುವೆ ಮಾಡುವಷ್ಟು ಅನುದಾನ ಇರುವುದಿಲ್ಲ. ಆದ್ದರಿಂದ ಜಿಲ್ಲಾ ಪಂಚಾಯ್ತಿ ಅಥವಾ ಸರ್ಕಾರ ಗಮನಹರಿಸುವಂತೆ ನಾವು ಸಾಕಷ್ಟು ಬಾರಿ ಜನರ ಪರವಾಗಿ ಮನವಿ ಪತ್ರದ ಮೂಲಕ ಒತ್ತಾಯಿಸಲಾಗಿದೆ.
– ಜಿ.ಡಿ.ಮಲ್ಲಿಕಾರ್ಜುನ ಮತ್ತು ಮಂಜುಳಾ ಕೇತಾರ್ಜಿರಾವ್, ಗ್ರಾಪಂ ಸದಸ್ಯರು