HOSANAGARA | ಲಿಂಗನಮಕ್ಕಿ ಜಲಾಶಯಕ್ಕೆ ನೀರುಣಿಸುವ ಪ್ರಧಾನ ಜಲಾನಯನ ಪ್ರದೇಶವಾದ ಹೊಸನಗರ ತಾಲೂಕಿನಾದ್ಯಂತ ರಾಜ್ಯದಲ್ಲೇ ದಾಖಲೆಯ ರಭಸದ ಮಳೆ ಬಿದ್ದಿದ್ದು ಶನಿವಾರ ಬೆಳಗ್ಗೆ 8:30ಕ್ಕೆ ಅಂತ್ಯಗೊಂಡಂತೆ ಕಳೆದ 24 ಗಂಟೆಗಳಲ್ಲಿ ಚಕ್ರಾನಗರದಲ್ಲಿ 325 ಮಿಲಿ ಮೀಟರ್ ಭಾರಿ ಮಳೆಯಾಗಿದೆ.
ಎಲ್ಲೆಲ್ಲಿ ಎಷ್ಟಾಗಿದೆ ಮಳೆ ?
- ಚಕ್ರಾನಗರ : 325 mm
- ಮಾಸ್ತಿಕಟ್ಟೆ : 205 mm
- ಯಡೂರು : 200 mm
- ಹುಲಿಕಲ್ : 186 mm
- ಮಾಣಿ : 185 mm
- ಸಾವೇಹಕ್ಲು : 139 mm
- ಕಾರ್ಗಲ್ (ಸಾಗರ) : 99 mm
- ಹುಂಚ : 83 mm
- ಹೊಸನಗರ : 70 mm
- ಅರಸಾಳು : 41 mm
ಲಿಂಗನಮಕ್ಕಿ ಜಲಾಶಯ :
1819 ಅಡಿ ಗರಿಷ್ಠ ಮಟ್ಟ ಹೊಂದಿರುವ ಲಿಂಗನಮಕ್ಕಿ ಜಲಾಶಯಕ್ಕೆ ಕಳೆದ 24 ಗಂಟೆಗಳಲ್ಲಿ 2.20 ಅಡಿ ನೀರು ಬಂದಿದ್ದು ಜಲಾಶಯದ ನೀರಿನ ಮಟ್ಟ 1807 ಅಡಿಗೆ ತಲುಪಿದೆ. ಜಲಾಶಯಕ್ಕೆ 74514 ಕ್ಯೂಸೆಕ್ ನೀರು ಹರಿದು ಬರುತ್ತಿದೆ. ಕಳೆದ ವರ್ಷ ಇದೆ ಅವಧಿಗೆ ಜಲಾಶಯದ ನೀರಿನ ಮಟ್ಟ 1784.40 ಅಡಿ ದಾಖಲಾಗಿತ್ತು.