ಜಸ್ಟ್ ಮಿಸ್ಸಾಯ್ತು ಹೈಪ್ರೊಫೈಲ್ ಕೊ*ಲೆ, MLA ಪುತ್ರನ ಕೊ*ಲೆಗೆ ಸ್ಕೆಚ್ ಬಹಿರಂಗ, ಆರೋಪಿಗಳು ಅಂದರ್ !

Written by Mahesha Hindlemane

Published on:

SHIVAMOGGA | ಭದ್ರಾವತಿ ಶಾಸಕ ಬಿ.ಕೆ. ಸಂಗಮೇಶ್ವರ್ ಪುತ್ರನ ಹತ್ಯೆಗೆ ಸಂಚು ರೂಪಿಸಲಾಗಿದೆ. ಈ ವಿಚಾರ ಬೆಳಕಿಗೆ ಬರುತ್ತಲೇ, ಇಡೀ ಭದ್ರಾವತಿ ಪಟ್ಟಣದಲ್ಲಿ ತಲ್ಲಣ ಸೃಷ್ಟಿಯಾಗಿದ್ದು, ಪೊಲೀಸರು ತಕ್ಷಣವೇ ಆರೋಪಿಗಳ ಹೆಡೆಮುರಿ ಕಟ್ಟಿದ್ದಾರೆ. ಆರೋಪಿಗಳ ವಿರುದ್ಧ ಎಫ್ ಐ ಆರ್ ದಾಖಲಿಸಿ ತನಿಖೆ ನಡೆಸಿದ್ದಾರೆ. ಈ ನಡುವೆ ಎಂ.ಎಲ್.ಎ. ಪುತ್ರನ ಕೊಲೆ ಸ್ಕೆಚ್ ಗೆ ಓಸಿ, ಮಟ್ಕಾ, ಕರಾಳ ನೆರಳು ಕಂಡು ಬರ್ತಿದೆ.

WhatsApp Group Join Now
Telegram Group Join Now
Instagram Group Join Now
📢 Stay Updated! Join our WhatsApp Channel Now →

ಭದ್ರಾವತಿ ಶಾಸಕ ಬಿ.ಕೆ. ಸಂಗಮೇಶ್ ಪುತ್ರನ ಕೊಲೆಗೆ ಸ್ಕೆಚ್ ರೂಪಿಸಲಾಗಿದ್ದು, ಈ ವಿಚಾರ ಇದೀಗ ಬೆಳಕಿಗೆ ಬರುತ್ತಲೇ ರೌಡಿ ಪಟಾಲಂಗಳ ವಿರುದ್ಧ ಕೇಸ್ ಬುಕ್ ಆಗಿದೆ. ಅದ್ರಲ್ಲೂ ಶಿವಮೊಗ್ಗ ಕಾರಾಗೃಹದಲ್ಲಿ ಕೂತು ಈ ಸ್ಕೆಚ್ ಹಾಕಲಾಗಿರುವುದು ಮತ್ತಷ್ಟು ಆತಂಕಕ್ಕೆ ಕಾರಣವಾಗಿದೆ.

ಹೌದು, ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲೂಕಿನ ಶಾಸಕ ಬಿ.ಕೆ. ಸಂಗಮೇಶ್ ಪುತ್ರ ಬಸವರಾಜ್, ಸ್ವಲ್ಪದರಲ್ಲೇ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಭದ್ರಾವತಿ ಶಾಸಕ ಬಿ.ಕೆ. ಸಂಗಮೇಶ್ವರ್ ಪುತ್ರ ಬಸವರಾಜು ಹತ್ಯೆಗೆ ಸಂಚು ರೂಪಿಸಿರುವ ಬಗ್ಗೆ ಭದ್ರಾವತಿ ಹಳೆ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಎಫ್.ಐ.ಆರ್ ದಾಖಲಾಗಿದೆ. ಡಿಚ್ಚಿ ಮುಬಾರಕ್‌, ಟಿಪ್ಪು ಹಾಗೂ ಇತರೆ ನಾಲ್ವರ ವಿರುದ್ಧ ಪ್ರಕರಣ ದಾಖಲಾಗಿದೆ.

ಜೈಲಿನಿಂದಲೇ ಸ್ಕೆಚ್‌ ರೂಪಿಸಿದ್ದ ಆರೋಪಿ ಮುಬಾರಕ್, ಅಲಿಯಾಸ್‌ ಡಿಚ್ಚಿ ಮುಬಾರಕ್‌ ಎಂಬಾತ ಜೈಲಿನಿಂದ ಭದ್ರಾವತಿಯ ಟಿಪ್ಪು ಎಂಬಾತನಿಗೆ ಕರೆ ಮಾಡಿ ಸುಫಾರಿ ನೀಡಿದ್ದನಂತೆ. ಭದ್ರಾವತಿ ಗಾಂಧಿ ಸರ್ಕಲ್‌ ಬಳಿ ಬಸವರಾಜನನ್ನ ಹತ್ಯೆ ಮಾಡುವಂತೆ ಟಿಪ್ಪು ಮತ್ತು ಇತರೆ ನಾಲ್ವರನ್ನು ಕಳುಹಿಸಲು ಯೋಜನೆ ರೂಪಿಸಲಾಗಿದ್ದು, ಇದು ಶಿವಮೊಗ್ಗ ಪೊಲೀಸರ ನಿದ್ದೆಗೆಡಿಸಿದೆ. ಈ ಸಂಬಂಧ ಟಿಪ್ಪುನನ್ನ ಬಂಧಿಸಿರುವ ಭದ್ರಾವತಿ ಹಳೆನಗರ ಪೊಲೀಸರು, ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ಒಟ್ಟಾರೆ, ಎಂ.ಎಲ್.ಎ. ಮಗನ ಕೊಲೆ ಸಂಚೊಂದು ಬಹಿರಂಗವಾಗಿದ್ದು, ಇದು ಭದ್ರಾವತಿ ಪಟ್ಟಣದಲ್ಲಿ ಭಾರಿ ಸಂಚಲನ ಮೂಡಿಸಿದೆ. ಇನ್ನು ಈ ಸಂಬಂಧ ಗುತ್ತಿಗೆದಾರ ಸುನಿಲ್‌ ಎಂಬುವವರು ದೂರು ದಾಖಲಿಸಿದ್ದು, ಟಿಪ್ಪುವನ್ನು ಗುತ್ತಿಗೆದಾರ ಸುನಿಲ್‌ ಭೇಟಿಯಾದಾಗ ಆತನಿಗೆ ಡಿಚ್ಚಿ ಮುಬಾರಕ್‌ ಕರೆ ಮಾಡಿದ್ದು, ಕಾರು ಮತ್ತು ನಾಲ್ವರನ್ನು ಕಳುಹಿಸುತ್ತಿರುವುದಾಗಿ ಮುಬಾರಕ್ ಹೇಳಿರುವುದರಿಂದ ವಿಷಯ ಬಹಿರಂಗಗೊಂಡಿದಂತಾಗಿದೆ.

ಏನೇಯಾಗ್ಲೀ ಶಿವಮೊಗ್ಗದಲ್ಲಿ ಹೈಪ್ರೊಫೈಲ್ ಮರ್ಡರ್ ಕೇಸೋಂದು ನಡೆಯೋದು ಕೂದಲೆಳೆ ಅಂತರದಲ್ಲಿ ಪಾರಾದಂತಾಗಿದೆ.

Read More

Post Office Scholarship:ಈ ವಿದ್ಯಾರ್ಥಿಗಳಿಗೆ ಸಿಗಲಿದೆ 6,000 ವಿದ್ಯಾರ್ಥಿವೇತನ !

HOSANAGARA | ನರೇಗಾ ಯೋಜನೆಯಡಿ ತೋಟಗಾರಿಕೆ ಬೆಳೆ ಬೆಳೆಯಲು ಅರ್ಜಿ ಆಹ್ವಾನ

Leave a Comment