ಆಟೋಟಗಳಲ್ಲಿ ಭಾಗವಹಿಸುವುದರಿಂದ ರೋಗಗಳು ದೂರ ; ಶಾಸಕ ಬೇಳೂರು ಗೋಪಾಲಕೃಷ್ಣ

Written by malnadtimes.com

Published on:

HOSANAGARA ; ಮಕ್ಕಳು ಆಟೋಟಗಳಲ್ಲಿ ಭಾಗವಹಿಸುವುದರಿಂದ ದೈಹಿಕವಾಗಿ ಮನಸಿಕವಾಗಿ ನೆಮ್ಮದಿ ಸಿಗುವುದರ ಜೊತೆಗೆ ರೋಗಗಳು ಕಡಿಮೆಯಾಗುತ್ತದೆ ನಿರ್ಮೂಲನೆ ಮಾಡುವ ಶಕ್ತಿ ಆಟೋಟಕ್ಕೆ ಇದೆ ಎಂದು ಹೊಸನಗರ-ಸಾಗರ ಕ್ಷೇತ್ರದ ಶಾಸಕ ಬೇಳೂರು ಗೋಪಾಲಕೃಷ್ಣರವರು ಹೇಳಿದರು.

WhatsApp Group Join Now
Telegram Group Join Now
Instagram Group Join Now

ಇಲ್ಲಿನ ನೆಹರು ಮೈದಾನದಲ್ಲಿ ತಾಲ್ಲೂಕು ಮಟ್ಟದ ಪ್ರೌಢಶಾಲಾ ಮಕ್ಕಳ ಕ್ರೀಡಾಕೂಟವನ್ನು ಶಾಲಾ ಶಿಕ್ಷಣ ಇಲಾಖೆ ಹಾಗೂ ಗುರೂಜಿ ಇಂಟರ್ ನ್ಯಾಷನಲ್ ರೆಸಿಡೆನ್ಸಿಯಲ್ ಸ್ಕೂಲ್ ಹೊಸನಗರ ಇವರ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಲಾಗಿದ್ದು ಈ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಹೊಸನಗರ ತಾಲೂಕಿನಲ್ಲಿ ಈ ಬಾರಿ ಎಸ್.ಎಸ್.ಎಲ್.ಸಿ.ಯಲ್ಲಿ ಶೇ‌. 93 ಪಡೆದು ತಾಲ್ಲೂಕಿಗೆ ಕೀರ್ತಿ ತಂದಿದ್ದಾರೆ. ಇದರ ಜೊತೆಗೆ ಆಟೋಟಗಳಲ್ಲಿ ಜಿಲ್ಲೆ, ವಲಯ, ರಾಜ್ಯ ರಾಷ್ಟ್ರ ಮಟ್ಟದವರೆಗೂ ಜಯ ಶಾಲಿಯಾಗಿ ಬಂದಲ್ಲಿ ನಮಗೂ ಹಾಗೂ ತಾಲ್ಲೂಕಿಗೂ ಕೀರ್ತಿ ತಂದ ಹಾಗೇ ಆಗುತ್ತದೆ. ಎಲ್ಲ ವಿದ್ಯಾರ್ಥಿಗಳು ಖುಷಿ ಖುಷಿಯಾಗಿ ಆಟವಾಡಬೇಕು ಆಗ ಮಾತ್ರ ಕ್ರೀಡಾಕೂಟಗಳಿಗೆ ಬೆಲೆ ಬರುವುದರ ಜೊತೆಗೆ ನಡೆಸಿದ ಶಿಕ್ಷಣ ಇಲಾಖೆಗೂ ಪ್ರಯೋಜಕರಿಗೂ ಉತ್ತಮ ಹೆಸರು ಬರುತ್ತದೆ ಎಂದರು.

ಸರ್ಕಾರಿ ಶಾಲೆಗಳು ಸುಣ್ಣ-ಬಣ್ಣದಲ್ಲಿ ಹಿಂದಿರಬಹುದು. ಆದರೆ ಓದಿನ ವಿಷಯದಲ್ಲಿ ತಾಲ್ಲೂಕಿನ ಕೀರ್ತಿ ಪತಾಕೆ ಹಾರಿಸಿದ್ದಾರೆ. ಮುಂದೆಯು ತಾಲ್ಲೂಕಿಗೆ ಕೀರ್ತಿ ತರುವ ಕೆಲಸ ನಮ್ಮ ಶಿಕ್ಷಕರು ಮಾಡಲಿದ್ದಾರೆ ಮುಂದಿನ ದಿನದಲ್ಲಿ ಈ ನೆಹರು ಮೈದಾನಕ್ಕೆ ದುರಸ್ಥಿಗಾಗಿ ಕಾರ್ಯ ಕೈಗೊಳ್ಳಲಾಗುವುದು ಶೌಚಾಲಯ ವ್ಯವಸ್ಥೆ ಮಾಡುವುದರ ಜೊತೆಗೆ ಕ್ರೀಡಾಂಗಣವನ್ನು ಒಂದು ಸುಸರ್ಜಿತ ಮೈದಾನ ಮಾಡುವುದಾಗಿ ಈ ಸಂದರ್ಭದಲ್ಲಿ ಭರವಸೆ ನೀಡಿದರು.

ಕ್ರೀಡಾಪಟುಗಳಿಗೆ ಊಟದ ವ್ಯವಸ್ಥೆಯನ್ನು ಗಣಪತಿ ದೇವಸ್ಥಾನದ ಆವರಣದಲ್ಲಿ ಗುರೂಜಿ ಶಾಲೆಯವರು ವ್ಯವಸ್ಥೆ ಅಚ್ಚುಕಟ್ಟಾಗಿ ಯಾವ ವಿದ್ಯಾರ್ಥಿಗಳಿಗೂ ಶಿಕ್ಷಕರಿಗೂ ತೊಂದರೆಯಾಗದಂತೆ ನಿರ್ವಹಿಸಿದರು.

ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗುರೂಜಿ ಶಾಲೆಯ ಮುಖ್ಯಸ್ಥರಾದ ಸುದೇಶ್‌ ಕಾಮತ್‌ರವರು ವಹಿಸಿದ್ದು ಮುಖ್ಯ ಅತಿಥಿಯಾಗಿ ಕ್ಷೇತ್ರ ಶಿಕ್ಷಣಾಧಿಕಾರಿ ಹೆಚ್.ಆರ್.ಕೃಷ್ಣಮೂರ್ತಿ ಕಾರ್ಯನಿರ್ವಹಣಾಧಿಕಾರಿ ನರೇಂದ್ರಕುಮಾರ್, ದೈಹಿಕ ಪರಿವೀಕ್ಷಕ ಬಾಲಚಂದ್ರರಾವ್, ಡಿ.ಎಂ. ಸದಾಶಿವ ಶ್ರೇಷ್ಠಿ, ಶಾಸಕರ ಆಪ್ತ ಕಾರ್ಯದರ್ಶಿ ಸಣ್ಣಕ್ಕಿ ಮಂಜು, ಕಾರ್ಯದರ್ಶಿ ಶಾಂತಮೂರ್ತಿ, ನಾಗೇಶ್, ಸಂತೋಷ್‌ಕಾಮತ್, ಭವಾನಿ, ಅಶ್ವಿನಿಕುಮಾರ್, ರೇಣುಕೇಶ್, ಜಯನಗರ ಗುರು, ಹೆಚ್. ಕೆ ಗುರುರಾಜ್, ಚಂದ್ರಕಲಾ ನಾಗರಾಜ್, ಚಿದಂಬರ ಇನ್ನೂ ಮುಂತಾದವರು ಉಪಸ್ಥಿತರಿದ್ದರು.

Leave a Comment