ಕ್ರೀಡೆ ದೈಹಿಕ ಆರೋಗ್ಯ ಸುಧಾರಿಸಿ ಕಾಪಾಡುತ್ತದೆ ; ಡಾ. ಲಿಂಗರಾಜ್

Written by malnadtimes.com

Published on:

HOSANAGARA ; ಕ್ರೀಡೆಯಲ್ಲಿ ಸ್ಥರವಾಗಿ ತೊಡಗಿಸಿಕೊಳ್ಳುವಿಕೆಯು ಯಾವಾಗಲೂ ದೈಹಿಕ ಆರೋಗ್ಯವನ್ನು ಸುಧಾರಿಸಿಕೊಳ್ಳುತ್ತದೆ ಮತ್ತು ಕಾಪಾಡುತ್ತದೆ ಎಂಬುದು ಇತ್ತಿಚಿನ ವರ್ಷಗಳಲ್ಲಿ ಸಾಬೀತಾಗಿದೆ ಎಂದು ಹೊಸನಗರ ಸಾರ್ವಜನಿಕ ಆಸ್ಪತ್ರೆಯ ಹಿರಿಯ ವೈದ್ಯಾಧಿಕಾರಿ ಡಾ. ಲಿಂಗರಾಜ್‌ ಹೇಳಿದರು.

WhatsApp Group Join Now
Telegram Group Join Now
Instagram Group Join Now

ಇಲ್ಲಿನ ಜಿಮ್ಮಿಜಾರ್ಜ್ ವಾಲಿಬಾಲ್ ಸಂಸ್ಥೆ ಆಯೋಜಿಸಲಾಗಿರುವ ಉಚಿತ ವಾಲಿಬಾಲ್ ತರಬೇತಿ ಶಿಬಿರದಲ್ಲಿ ಆರೋಗ್ಯ ಮತ್ತು ಕ್ರೀಡೆ ಕುರಿತಾಗಿ ತರಬೇತಿ ಪಡೆಯುತ್ತಿರುವ ಕ್ರೀಡಾಪಟುಗಳನ್ನು ಉದ್ದೇಶಿಸಿ ಮಾತನಾಡಿದರು.

ಕ್ರೀಡೆಯಲ್ಲಿ ನಿಯಮಿತ ಭಾಗವಹಿಸುವಿಕೆಯು ಆರೋಗ್ಯಕರ ತೂಕವನ್ನು ಕಾಪಾಡಿಕೊಳ್ಳಲು ಸ್ನಾಯುಗಳನ್ನು ಸ್ಥರವಾಗಿರಿಸಲು ಮತ್ತು ಹೃದಯ ರಕ್ತನಾಳದ ಪಿಟ್ನೆಸ್ ಹೆಚ್ಚಿಸಿಕೊಳ್ಳಲು ಸಹಾಯ ಮಾಡುತ್ತದೆ. ಕ್ರೀಡೆಯು ನಮ್ಮ ಜೀವನದಲ್ಲಿ ಬಹುಮುಖ ಮತ್ತು ಅವಿಭಾಜ್ಯ ಪಾತ್ರವನ್ನು ವಹಿಸುತ್ತದೆ.

ವಿವಿಧ ಸಂಸ್ಕೃತಿಗಳ ನಡುವೆ ಸಾಮಾನ್ಯ ಭಾವನೆಯನ್ನು ಹಣೆಯುವ ಶಕ್ತಿಯನ್ನು ಕ್ರೀಡೆ ಹೊಂದಿದೆ. ಕ್ರೀಡೆ ಕೇವಲ ಆರೋಗ್ಯವನ್ನಲ್ಲದೇ ಶಿಸ್ತು, ಸಮಯ ಪಾಲನೆ, ಸ್ನೇಹ ದೈಹಿಕ ದೃಡತೆ ಎಲ್ಲವನ್ನು ಸಹ ಕಲಿಸುವಂತಹ ಒಂದು ಉತ್ತಮವಾದ ಸಾಧನವಾಗಿದೆ. ತರಬೇತಿಯನ್ನು ಪಡೆಯುತ್ತಿರುವ ನೀವೆಲ್ಲರೂ ಇಲ್ಲಿ ಕಲಿಸಿರುವ ಎಲ್ಲ ವಿಚಾರವನ್ನು ಮನಗೊಂಡು ಅವುಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಹಾಗೇಯೇ ದಶ್ಚಟಗಳಿಂದ ದೂರ ಉಳಿಯಬೇಕು ಎಂದರು.

ಈ ಸಂದರ್ಭದಲ್ಲಿ ಜಿಮ್ಮಿಜಾರ್ಜ್ ವಾಲಿಬಾಲ್ ಸಂಸ್ಥೆಯ ಅಧ್ಯಕ್ಷ ಎಂ.ಎನ್ ಸುಧಾಕರ್, ಸದಸ್ಯರಾದ ದ್ಯಾವರ್ಸ ನಾಗೇಶ್, ವೇಣುಗೋಪಾಲ್, ದೈಹಿಕ ಶಿಕ್ಷಕ ಸುಹಾಸ್, ಜಿ.ಕೆ ಸತೀಶ್, ರವಿ, ರಮೆಶ್‌ಶೆಟ್ಟಿ, ಧನಂಜಯ, ಗಣೇಶ, ಗುರುರಾಜ್ ಇನ್ನೂ ಮುಂತಾದವರು ಉಪಸ್ಥಿತರಿದ್ದರು.

Leave a Comment