ಶಿವಮೊಗ್ಗ-ಹೊಸನಗರ ರಾಜ್ಯ ಹೆದ್ದಾರಿ ದುಸ್ಥಿತಿ | ವಾಹನ ಸವಾರರೇ ಇಲ್ಲಿ ಸ್ವಲ್ಪ ಮೈಮರೆತರೆ ಅಪಾಯ ಕಟ್ಟಿಟ್ಟ ಬುತ್ತಿ !

Written by malnadtimes.com

Published on:

RIPPONPETE ; ರಾಜ್ಯ ಹೆದ್ದಾರಿ 26ರಲ್ಲಿನ ಶಿವಮೊಗ್ಗ – ಕೊಲ್ಲೂರು – ಭಟ್ಕಳ ಮಾರ್ಗದ ರಿಪ್ಪನ್‌ಪೇಟೆ ಪೆಟ್ರೋಲ್ ಬಂಕ್ ಬಳಿ ಲೋಕೋಪಯೋಗಿ ಇಲಾಖೆಯ ರಸ್ತೆಯಂಚಿನಲ್ಲಿ ಆಳ ಉದ್ದದ ಬೃಹತ್ ಗಾತ್ರದ ಹೊಂಡ ಬಿದ್ದು ಅಪಾಯವನ್ನು ಆಹ್ವಾನಿಸುವತ್ತಾಗಿದ್ದರೂ ಕೂಡಾ ಇಲಾಖೆಯವರು ಗಮನಹರಿಸದೇ ನಿರ್ಲಕ್ಷ್ಯ ವಹಿಸಿದ್ದಾರೆಂದು ಸಾಮಾಜಿಕ ಹೋರಾಟಗಾರ ರೈತ ಮುಖಂಡ ಮುಡುಬ ಧರ್ಮಪ್ಪ ಆರೋಪಿಸಿದ್ದಾರೆ.

WhatsApp Group Join Now
Telegram Group Join Now
Instagram Group Join Now

ರಾಜ್ಯ ಹೆದ್ದಾರಿ ಈ ರಸ್ತೆ ಕಿರಿದಾಗಿದ್ದು ದೊಡ್ಡ ವಾಹನಗಳು ಎದುರು ಭಾಗದಿಂದ ಬಂದರೆ ಸೈಡ್ ಕೊಡಲು ಹೋದರೆ ವಾಹನ ಸವಾರರ ಜೀವಹಾನಿ ಗ್ಯಾರಂಟಿ ಅದರೂ ಕೂಡಾ ಜನಪ್ರತಿನಿಧಗಳಾಗಲಿ, ಅಧಿಕಾರಿಗಳಾಗಲಿ ಕಣ್ಣಿದ್ದು ಕುರುಡರಂತಾಗಿದ್ದಾರೆಂದು ಆಕ್ರೋಶ ವ್ಯಕ್ತಪಡಿಸಿದರು.

ನಿತ್ಯ ಈ ಮಾರ್ಗದಲ್ಲಿ ನೂರಾರು ವಾಹನಗಳು ಓಡಾಡುತ್ತಿದ್ದು ದ್ವಿಚಕ್ರ ವಾಹನ ಸವಾರರು ಸಾಕಷ್ಟು ಜನ ಆಕಸ್ಮಿಕವಾಗಿ ಗೊತ್ತಾಗದೇ ಹೊಂಡಕ್ಕೆ ಬಿದ್ದು ಕೈ ಕಾಲು ಮುರಿದುಕೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ಅಲ್ಲದೆ ಇತ್ತೀಚೆಗೆ ಸುರಿದ ಅಕಾಲಿಕ ಮಳೆಯಿಂದಾಗಿ ರಸ್ತೆಯಂಚಿನಲ್ಲಿ ಬಿದ್ದಿರುವ ಬೃಹತ್ ಗಾತ್ರದ ಹೊಂಡದಲ್ಲಿ ರಾಜಕಾಲುವೆಯ ನೀರು ತುಂಬಿಕೊಂಡಿದ್ದು ಗೊತ್ತಾಗದೇ ಯಾರಾದರೂ ವಾಹನಗಳಿಗೆ ಸೈಡ್ ಬಿಡಲು ಹೋದರೆ ಸಾಕು ಹೊಂಡಕ್ಕೆ ಬಿದ್ದು ಸಾವನ್ನಪ್ಪುವುದರಲ್ಲಿ ಸಂದೇಹವೇ ಇಲ್ಲ.

ಇನ್ನಾದರೂ ಸಂಬಂಧಪಟ್ಟ ಲೋಕೋಪಯೋಗಿ ಇಲಾಖೆಯವರು ಇತ್ತ ಗಮನಹರಿಸಿ ಮುಂದಾಗಬಹುದಾದ ಅನಾಹುತವನ್ನು ತಪ್ಪಿಸುವತ್ತಾ ಮುಂದಾಗುವರೇ ಕಾದುನೋಡಬೇಕಾಗಿದೆ.

Leave a Comment