RIPPONPETE ; ಇತ್ತೀಚಿಗೆ ಚಿತ್ರದುರ್ಗದಲ್ಲಿ ನಡೆದ ರಾಜ್ಯ ಮಟ್ಟದ ಅಬಾಕಸ್ ಹಾಗೂ ವೇದಿಕ್ ಕಾಂಪಿಟೇಶನ್ ನಲ್ಲಿ ರಾಜ್ಯಾದ್ಯಂತ 1500 ವಿದ್ಯಾರ್ಥಿಗಳು ಭಾಗವಹಿಸಿದ್ದು, ಅದರಲ್ಲಿ ಐಡಿಯಲ್ ಪ್ಲೇ ಅಬಾಕಸ್ ರಿಪ್ಪನ್ಪೇಟೆಯ 05 ವಿದ್ಯಾರ್ಥಿಗಳು ಭಾಗವಹಿಸಿ ಬಹುಮಾನ ಪಡೆದಿದ್ದಾರೆ.
ಹನ್ಸಿನಿ ಕೆ.ಆರ್ ಪ್ರಥಮ ಸ್ಥಾನ, ರಾಶಿಕ್ ಕೆ.ಆರ್, ಅಲಿಜ, ಸೃಜನ್ ಜಿ ದ್ವೀತಿಯ ಸ್ಥಾನ ಹಾಗೂ ಮಹಮ್ಮದ್ ಅಫ್ಜಲ್ ತೃತೀಯ ಸ್ಥಾನ ಪಡೆದು ರಿಪ್ಪನ್ಪೇಟೆಗೆ ಕೀರ್ತಿ ತಂದು ಕೊಟ್ಟಿದ್ದಾರೆ.

ವಿದ್ಯಾರ್ಥಿಗಳಿಗೆ ತರಬೇತುದಾರರಾದ ಸಂತೋಷ್ ಕುಮಾರ್ ಮಕ್ಕಳನ್ನು ಅಭಿನಂದಿಸಿದ್ದಾರೆ.
ಐಡಿಯಲ್ ಪ್ಲೇ ಅಬಾಕಸ್ ರಿಪ್ಪನ್ಪೇಟೆ ಇದರ ಮುಖ್ಯಸ್ಥರಾದ ವಿದ್ಯಾ ಮಂಜುನಾಥ ಸಂಸ್ಥೆಗೆ ಪ್ರಥಮ ಸ್ಥಾನವನ್ನು ಗಳಿಸಿದ್ದಾರೆ. ಐಡಿಯಲ್ ಪ್ಲೇ ಅಬಾಕಸ್ ನ ಮ್ಯಾನೇಜಿಂಗ್ ಡೈರೆಕ್ಟರ್ ಶಾರದಾ ಶ್ರೀರಾಮ್ ಪ್ರಶಸ್ತಿ ಸಮಾರಂಭದಲ್ಲಿ ಹಾಜರಿದ್ದರು.

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್ಸೈಟ್ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 7 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್ಸೈಟ್ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ ‘ಮಲ್ನಾಡ್ ಟೈಮ್ಸ್’ ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ.