RIPPONPETE ; ಕರ್ನಾಟಕದಲ್ಲಿ ನಡೆದ ಮೂರು ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಭರ್ಜರಿ ಗೆಲುವು ಸಾಧಿಸಿರುವ ಸುದ್ದಿ ತಿಳಿಯುತ್ತಿದ್ದಂತೆ ಹುಂಚದಲ್ಲಿ ಹೋಬಳಿ ಘಟಕದ ಕಾಂಗ್ರೆಸ್ ಅಧ್ಯಕ್ಷ ಗುರುರಾಜ ಸುಣ್ಣಕಲ್ಲು ನೇತೃತ್ವದಲ್ಲಿ ಕಾರ್ಯಕರ್ತರು ಪಟಾಕಿ ಸಿಡಿಸಿ ಸಂಭ್ರಮಾಚರಣೆ ನಡೆಸಿ ಸಿದ್ದರಾಮಯ್ಯ ಡಿ.ಕೆ.ಶಿವಕುಮಾರ ಪರಘೋಷಣೆ ಮೊಳಗಿಸಿದರು.
ಈ ಸಂದರ್ಭದಲ್ಲಿ ಕೇಶವಮೂರ್ತಿ, ರಾಘವೇಂದ್ರ ತೋಟದಕಟ್ಟು, ಯಶಸ್ವತಿ ವೃಷಭರಾಜ ಜೈನ್, ನಾಗರಾಜರೆಡ್ಡಿ, ಗುರುಭಂಡಾರಿ, ಉಲ್ಲಾಸ್ ಭಟ್, ಚೇತನ್ ಕುಮಾರ್, ದಿನೇಶ್ ಇನ್ನಿತರರು ಇದ್ದರು.
ಜಂಬಳ್ಳಿಯಲ್ಲಿ ಮಣ್ಣಿನ ಮಹತ್ವದ ಕುರಿತು ಕಾರ್ಯಾಗಾರ
RIPPONPETE ; ಅತಿಯಾದ ಮಳೆಯಿಂದಾಗಿ ಮಲೆನಾಡಿನಲ್ಲಿ ಪ್ರದೇಶದಲ್ಲಿ ಜಮೀನಿನಲ್ಲಿ ಮಣ್ಣು ಹುಳಿಯಾಗುತ್ತದೆ. ಇದರಿಂದ ಬೆಳೆಯಲ್ಲಿ ಇಳುವರಿ ಕುಂಠಿತವಾಗುವುದು. ಆದ್ದರಿಂದ ರೈತರು ಮಳೆಗಾಲ ಮುಗಿದು ಆಕ್ಟೋಬರ್ನಲ್ಲಿ ಮಣ್ಣಿಗೆ ಸುಣ್ಣವನ್ನು ಹಾಕಿ ನಂತರ ತಿಂಗಳಿಗೆ ಗೊಬ್ಬರ ಕೊಡಬೇಕು ಆಗ ಭೂಮಿಯ ಫಲವತ್ತತೆ ಹೆಚ್ಚಾಗುವ ಮೂಲಕ ಬೆಳೆಯಲ್ಲಿ ಇಳುವರಿ ಸಹ ವೃದ್ದಿಯಾಗುವುದೆಂದು ತೋಟಗಾರಿಕಾ ಇಲಾಖೆಯ ಸಹಾಯಕ ಅಧಿಕಾರಿ ಕರಿಬಸಪ್ಪ ಹೇಳಿದರು.
ಜಂಬಳ್ಳಿ ಗ್ರಾಮದ ಪ್ರಗತಿಪರ ರೈತ ಜೆ.ಎಂ.ಶಾಂತಕುಮಾರ ಜಮೀನಿನಲ್ಲಿ ಆಯೋಜಿಸಲಾದ ಮಣ್ಣಿನ ಮಹತ್ವದ ಕುರಿತು ರೈತರಿಗೆ ಮಾಹಿತಿ ಕಾರ್ಯಾಗಾರದಲ್ಲಿ ಭಾಗವಹಿಸಿ ಮಾತನಾಡಿ, ಎಲೆಚುಕ್ಕಿ ಮತ್ತು ಬೇಸಾಯ ಪದ್ದತಿಯನ್ನು ಅಡಿಕೆ ಮರಕ್ಕೆ ಎಷ್ಟು ಗೊಬ್ಬರವನ್ನು ಹಾಕಬೇಕು ಕಾಲಕಾಲಕ್ಕೆ ಹವಾಮಾನಕ್ಕೆ ಅನುಗುಣವಾಗಿ ಗೊಬ್ಬರ ಔಷಧಿಯನ್ನು ಹಾಕಬೇಕು ಎಂಬುದರ ಕುರಿತು ಸವಿಸ್ತಾರವಾಗಿ ಮಾಹಿತಿ ನೀಡಿದರು.
ಕೃಷಿ ಇಲಾಖೆಯ ಸಹಾಯಕ ನಿರ್ದೇಶಕರಾದ ರವಿಕುಮಾರ್ ಮಾತನಾಡಿ, ಭತ್ತದ ಕಂದುಜಿಗಿ ಮತ್ತು ನಾಟಿ ಮಾಡಿದ ಮೇಲೆ ಸ್ಪಲ್ಪ ಅಂತರ ಬಿಟ್ಟು ನಾಟಿ ಮಾಡುವುದರಿಂದ ರೋಗಬಾಧೆಯನ್ನು ದೂರ ಮಾಡಬಹುದು ಮತ್ತು ಡ್ರಮ್ ಸೀಡರ್ ಬಿತ್ತನೆಯಿಂದ ಭತ್ತದ ಬೆಳೆಯಲ್ಲಿ ರೋಗ ತಡೆಗಟ್ಟುವುದರೊಂದಿಗೆ ಹೆಚ್ಚು ಇಳುವರಿ ಪಡೆಯಲು ಸಾಧ್ಯವೆಂದರು.
ತರಬೇತಿ ಕಾರ್ಯಾಗಾರದಲ್ಲಿ ರೈತರಾದ ಜೆ.ಜೆ.ಶಿವಪ್ಪಗೌಡ, ಜೆ.ಎಂ.ರಕ್ಷಿತ್, ಜೆ.ಜಿ.ಸದಾನಂದ, ಜೆ.ಎನ್.ನಾಗಭೂಷಣ, ನಾಗೇಂದ್ರಪ್ಪ, ಜಗದೀಶ್, ಕಮಲಾಕ್ಷಪ್ಪ, ಶಶಿಕುಮಾರ್, ಕಮಲಾಕ್ಷ, ಶಿವಲಿಂಗೇಶ್ವರ, ನಟರಾಜ, ಓಂಪ್ರಕಾಶ, ಲಾಲ್ಬಹದ್ದೂರು, ಶರತ್, ಶಮ್ಮನ್, ಸುಧಾಕರ್, ವಿನಾಯಕ, ಇನ್ನಿತರರಿದ್ದರು.
ರವಿಕುಮಾರ್ ಸ್ವಾಗತಿಸಿದರು. ಸಹನಾ ಶಾಂತಕುಮಾರ್ ನಿರೂಪಿಸಿದರು. ಜೆ.ಎಂ.ಶಾಂತಕುಮಾರ್ ವಂದಿಸಿದರು.
ನ. 29 ರಂದು ಮೂಲೆಗದ್ದೆ ಮಠದಲ್ಲಿ ಲಿಂ.ಚನ್ನಬಸವ ಮಹಾಶಿವಯೋಗಿಗಳ ಪುಣ್ಯಸ್ಮರಣೆ ಹಾಗೂ ಕಾರ್ತಿಕ ದೀಪೋತ್ಸವ
RIPPONPETE ; ಸದಾನಂದ ಶಿವಯೋಗಾಶ್ರಮ ಮೂಲೆಗದ್ದೆ ಮಠದಲ್ಲಿ ನವಂಬರ್ 29 ರಂದು ಲಿಂ.ಚನ್ನಬಸವ ಮಹಾಶಿವಯೋಗಿಗಳ ಪುಣ್ಯಸ್ಮರಣೆ ಕಾರ್ತಿಕ ದೀಪೋತ್ಸವ ಹಾಗೂ ಧಾರ್ಮಿಕ ಕಾರ್ಯಕ್ರಮವನ್ನು ಮೂಲೆಗದ್ದೆ ಮಠದ ಅಭಿನವ ಚನ್ನಬಸವ ಮಹಾಸ್ವಾಮಿಜಿಯವರ ದಿವ್ಯಸಾನಿಧ್ಯದಲ್ಲಿ ಜರುಗಲಿದೆ.
ಸಕಲ ಭಕ್ತಾಭಿಮಾನನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ತಿಕ ದೀಪೋತ್ಸವದಲ್ಲಿ ಪಾಲ್ಗೊಂಡು ಲಿಂ.ಚನ್ನಬಸವ ಮಹಾಶಿವಯೋಗಿಗಳ ದರ್ಶನಾಶೀರ್ವಾದ ಪಡೆಯುವಂತೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.