RIPPONPETE ; ಪಟ್ಟಣದಲ್ಲಿ ಕಲಾಕೌಸ್ತುಭ ಕನ್ನಡ ಸಂಘದ 39ನೇ ವರ್ಷದ ವಾರ್ಷಿಕೋತ್ಸವ ಮತ್ತು 69ನೇ ವರ್ಷದ ಕನ್ನಡ ರಾಜ್ಯೋತ್ಸವವನ್ನು ನ. 28 ಮತ್ತು 29 ರಂದು ಎರಡು ದಿನಗಳ ಕಾಲ ಏರ್ಪಡಿಸಲಾಗಿದೆ ಎಂದು ಕಲಾಕೌಸ್ತುಭ ಕನ್ನಡ ಸಂಘದ ಆಧ್ಯಕ್ಷ ರವೀಂದ್ರ ಕೆರೆಹಳ್ಳಿ ತಿಳಿಸಿದ್ದಾರೆ.
ಇಂದು ಪಟ್ಟಣದ ಗ್ರಾಮ ಪಂಚಾಯಿತಿಯ ಕುವೆಂಪು ಸಭಾಂಗಣದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ನವಂಬರ್ 28 ರಂದು ಗುರುವಾರ ಬೆಳಗ್ಗೆ 9 ಗಂಟೆಗೆ ಕನ್ನಡ ಭುವನೇಶ್ವರ ಭಾವಚಿತ್ರದ ಮೆರವಣಿಗೆ ಮೆರವಣಿಗೆಯಲ್ಲಿ ಶಾಲಾ ಕಾಲೇಜ್ ವಿದ್ಯಾರ್ಥಿಗಳು ಮತ್ತು ಹೆಸರಾಂತ ಜಾನಪದ ಕಲಾತಂಡಗಳ ಭವ್ಯ ಮೆರವಣಿಗೆಯೊಂದಿಗೆ ಭವನೇಶ್ವರಿ ಸೇರಿದಂತೆ ವಿವಿಧ ವೇಷಭೂಷಣಗಳ ಸ್ಪರ್ಧೆಗಳನ್ನು ಆ ಯೋಜಿಸಲಾಗಿದೆ. ನಂತರ ಭೂಪಾಳಂ ಚಂದ್ರಶೇಖರಯ್ಯ ಸಭಾಭವನದಲ್ಲಿ ಸಮಾರಂಭದ ಉದ್ಘಾಟನೆ ಜರಯಗಲಿದೆ.
ರಾತ್ರಿ 8 ಗಂಟೆಗೆ ಅಂತರಾಷ್ಟ್ರಿಯ ಖ್ಯಾತಿಯ ಪಟ್ಲ ಸತೀಶ್‌ಶೆಟ್ಟಿ ಸಾರತ್ಯದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಪಾವೆಂಜೆ ಯಕ್ಷಗಾನ ಮೇಳದವರಿಂದ ಕಾಲಮಿತಿ ಯಕ್ಷಗಾನ “ತ್ರಿಜನ್ಮ ಮೋಕ್ಷ’’ ಪ್ರದರ್ಶನ ಜರುಗಲಿದೆ.
ನವಂಬರ್ 29 ರಂದು ಬೆಳಗ್ಗೆ 9 ಗಂಟೆಗೆ ತಾಲ್ಲೂಕ್ ಮಟ್ಟದ ಪುರುಷರಿಗಾಗಿ ಸೈಕಲ್ ಸ್ಪರ್ಧೆ ಹಾಗೂ 10 ಗಂಟೆಗೆ ಬಿಜು ಮಾರ್ಕೋಸ್ ಸ್ಮರಣಾರ್ಥ ಜಿಲ್ಲಾ ಮಟ್ಟದ ಆಹ್ವಾನಿತ ತಂಡಗಳ ವಾಲಿಬಾಲ್ ಪಂದ್ಯಾವಳಿ ಏರ್ಪಡಿಸಲಾಗಿದೆ.
ಸಂಜೆ 6 ರಿಂದ 7:30 ರವರೆಗೆ ರವಿ ಮುರೂರು ಇವರಿಂದ ಸಂಗೀತ ಕಾರ್ಯಕ್ರಮ ನಂತರ ರಾತ್ರಿ 8 ಗಂಟೆಗೆ ಸಮಾರೋಪ ಸಮಾರಂಭ ನಡೆಯಲಿದ್ದು ಲೋಕಸಭಾ ಸದಸ್ಯ ಬಿ ವೈ ರಾಘವೇಂದ್ರ, ಸಾಗರ ಹೊಸನಗರ ವಿಧಾನಸಭಾ ಕ್ಷೇತ್ರದ ಶಾಸಕ ಗೋಪಾಲಕೃಷ್ಣ ಬೇಳೂರು, ತೀರ್ಥಹಳ್ಳಿ ವಿಧಾನಸಭಾ ಕ್ಷೇತ್ರದ ಶಾಸಕ ಆರಗ ಜ್ಞಾನೇಂದ್ರ, ಶಿವಮೊಗ್ಗ ನಗರ ವಿಧಾನಸಭಾ ಕ್ಷೇತ್ರದ ಶಾಸಕ ಚನ್ನಬಸಪ್ಪ, ವಿಧಾನ ಪರಿಷತ್ ಸದಸ್ಯ ಅರುಣ್ ಡಿ.ಎಸ್, ರಾಜ್ಯ ಬಿಜೆಪಿ ಉಪಾಧ್ಯಕ್ಷ ಹಾಗೂ ಮಾಜಿ ಮಂತ್ರಿ ಹರತಾಳು ಹಾಲಪ್ಪ, ಶಿವಮೊಗ್ಗ ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ ಕಲಗೋಡು ರತ್ನಾಕರ ಸೇರಿದಂತೆ ಅನೇಕ ಗಣ್ಯರು ಈ ಕಾರ್ಯಕ್ರಮದಲ್ಲಿ ಭಾಗವಹಿತ ಸಲಿದ್ದಾರೆ ಹಾಗೂ ಮನು ಹಂದಾಡಿ ತಂಡದಿಂದ `ನಗೆ-ಸುಗ್ಗಿ’ ಕಾರ್ಯಕ್ರಮ ಜರುಗಲಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಕನ್ನಡ ಸಂಘದ ಪದಾಧಿಕಾರಿಗಳಾದ ಎನ್. ಸತೀಶ್, ಮುರುಳಿ ಕೆರೆಹಳ್ಳಿ, ರಾಮಚಂದ್ರ ಬಳೆಗಾರ, ಸುಧೀರ್ ಪಿ. ಸೀತಮ್ಮ, ಲಕ್ಷ್ಮಿ ಶ್ರೀನಿವಾಸ್, ಗಣೇಶ್ ಕುಕ್ಕಳಲೆ, ರೇಖಾ ರವಿ, ಪದ್ಮ ಸುರೇಶ್, ನಾಗರತ್ನ ದೇವರಾಜ್, ಶೈಲಾ ಪ್ರಭು, ದೇವೇಂದ್ರಪ್ಪ ಗೌಡ, ಆರ್ಟ್ ರಾಘವೇಂದ್ರ, ತ.ಮ. ನರಸಿಂಹ, ಉಮಾ ಸುರೇಶ್, ಸೇರಿದಂತೆ ಇನ್ನಿತರರಿದ್ದರು.