ಪ್ರತಿಭಾ ಕಾರಂಜಿ ಕಲೋತ್ಸವ ; ರಾಜ್ಯ ಮಟ್ಟಕ್ಕೆ ಆಯ್ಕೆ

Written by malnadtimes.com

Published on:

RIPPONPETE ; ಶಿವಮೊಗ್ಗದಲ್ಲಿ ನಡೆದ ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿ ಕಲೋತ್ಸವ ಕಾರ್ಯಕ್ರಮದಲ್ಲಿ ಹೊಸನಗರ ಶ್ರೀ ಗುರೂಜಿ ಇಂಟರ್ ನ್ಯಾಷನಲ್ ಆಂಗ್ಲ ಮಾಧ್ಯಮ ರೆಸಿಡೆನ್ಸಿಯಲ್ ಪ್ರೌಢಶಾಲೆಯಲ್ಲಿ 9ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿನಿ ಕು. ಹೆಚ್.ಎಂ.ನಿತ್ಯಶ್ರೀ ಭಾಷಣ ಸ್ಪರ್ದೇಯಲ್ಲಿ ಪ್ರಥಮ ಸ್ಥಾನಗಳಿಸುವ ಮೂಲಕ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾಳೆ.

WhatsApp Group Join Now
Telegram Group Join Now
Instagram Group Join Now


ಹುಂಚ ಕ್ಲಸ್ಟರ್ ವ್ಯಾಪ್ತಿಯ ಹೊನ್ನೆಬೈಲು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಇಂದಿರಾ ಮಲ್ಲೇಶ್ವರಪ್ಪ ಶಿಕ್ಷಕ ದಂಪತಿಯವರ ಪುತ್ರಿಯಾಗಿರುವ ಕು.ಹೆಚ್.ಎಂ.ನಿತ್ಯಶ್ರೀಯ ಈ ಸಾಧನೆಯಿಂದ ಶಾಲೆಯ ಕೀರ್ತಿಯನ್ನು ಉತ್ತುಂಗ ಏರಿಸಿದ್ದಾಳೆಂದು ಹೊಸನಗರ ಶ್ರೀ ಗುರೂಜಿ ಇಂಟರ್ ನ್ಯಾಷನಲ್ ಆಂಗ್ಲ ಮಾಧ್ಯಮ ರೆಸಿಡೆನ್ಸಿಯಲ್ ಪ್ರೌಢಶಾಲೆಯ ಪ್ರಾಚಾರ್ಯರು ಮತ್ತು ಶಿಕ್ಷಕ ವೃಂದ ಅಭಿನಂದಿಸಿದ್ದಾರೆ.

ಕೀರ್ತನಾ

ಕೀರ್ತನ ರಾಜ್ಯ ಮಟ್ಟಕ್ಕೆ ಆಯ್ಕೆ :

ಹೊಸನಗರ ಶ್ರೀ ಗುರೂಜಿ ಇಂಟರ್ ನ್ಯಾಷನಲ್ ರೆಸಿಡೆನ್ಷಿಯಲ್ ಸ್ಕೂಲ್ ಶಾಲೆಯ ವಿದ್ಯಾರ್ಥಿನಿ ಕೀರ್ತನಾ ಗಜಲ್ ನಲ್ಲಿ ಜಿಲ್ಲಾ ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾಳೆ.

ಕೆ ಪಿ ಅನೂಪ್ ರಾಜ್ಯ ಮಟ್ಟಕ್ಕೆ ಆಯ್ಕೆ :

HOSANAGARA ; ಪಟ್ಟಣದ ಪ್ರತಿಷ್ಠಿತ ಶ್ರೀ ರಾಮಕೃಷ್ಣ ವಿದ್ಯಾಲಯದ 6ನೇ ತರಗತಿ ವಿದ್ಯಾರ್ಥಿ ಕೆ.ಪಿ ಅನೂಪ್ ಶಿವಮೊಗ್ಗದ ರಾಷ್ಟ್ರೀಯ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ಜಿಲ್ಲಾಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಯ ಹಿರಿಯ ಪ್ರಾಥಮಿಕ ವಿಭಾಗದ ಕಥೆ ಹೇಳುವ ಸ್ಪರ್ಧೆಯಲ್ಲಿ ಭಾಗವಹಿಸಿ ಪ್ರಥಮ ಸ್ಥಾನ ಗಳಿಸಿ ರಾಜ್ಯ ಮಟ್ಟಕ್ಕೆ ಆಯ್ಕೆಯಾಗುವ ಮೂಲಕ ಶಾಲೆಯ ಕೀರ್ತಿ ಪತಾಕೆಗೆ ಗರಿ ಮೂಡಿಸಿದ್ದಾನೆ.

ಅನೂಪ್ ಓದಿನೊಂದಿಗೆ ಕಥೆ ಕವನ ವಾಚನ ನಟನೆ ಸೇರಿದಂತೆ ಹಲವು ಸಾಂಸ್ಕೃತಿಕ ವಿಭಾಗಗಳಲ್ಲಿ ಹೆಚ್ಚಿನ ಆಸಕ್ತಿ ಹೊಂದಿದ್ದು ಈತ ಶಿಕ್ಷಣ ಇಲಾಖೆಯ ಎಚ್ ಕೆ ಪ್ರದೀಪ್ ಹಾಗೂ ಆರೋಗ್ಯ ಇಲಾಖೆಯ ಅನುಸೂಯ ದಂಪತಿಗಳ ಪುತ್ರನಾಗಿದ್ದಾನೆ.

ಅನೂಪ್

ಅನೂಪ್ ಸಾಧನೆಗೆ ಶಾಲಾ ಆಡಳಿತ ಮಂಡಳಿಯವರು ವಿದ್ಯಾರ್ಥಿವೃಂದದವರು ಬೋಧಕ ಹಾಗೂ ಬೋಧಕೇತರ ಸಿಬ್ಬಂದಿಗಳು ಶಾಲಾ ಅಭಿವೃದ್ಧಿ ಸಮಿತಿಯವರು ಅಭಿನಂದಿಸಿದ್ದಾರೆ.

Leave a Comment