ರಸ್ತೆ ನೆಪದಲ್ಲಿ ಲಕ್ಷಾಂತರ ರೂ. ಮೌಲ್ಯದ ಸಾಗುವಾನಿ ಮರಗಳ ಅಕ್ರಮ ಕಡಿತಲೆ, ನಾಲ್ವರ ವಿರುದ್ಧ ಪ್ರಕರಣ ದಾಖಲು

Written by malnadtimes.com

Updated on:

RIPPONPETE ; ಸಿರಿಗೆರೆ ವನ್ಯಜೀವಿ ವಲಯ ವ್ಯಾಪ್ತಿಯ ಹಾರೋಹಿತ್ತಲು ಗ್ರಾಮದ ಸರ್ವೇ ನಂ 7 ರಲ್ಲಿ ವನ್ಯಜೀವಿ ಅಭಯಾರಣ್ಯ ಪ್ರದೇಶದ ಮತ್ತಲಿಜಡ್ಡು ಬಳಿ ಸಂಪರ್ಕ ರಸ್ತೆ ನಿರ್ಮಾಣದ ನೆಪದಲ್ಲಿ ಅಕ್ರಮವಾಗಿ ಲಕ್ಷಾಂತರ ರೂ. ಮೌಲ್ಯದ ಸಾಗುವಾನಿ ಮರಗಳನ್ನು ಕಡಿಯಲಾಗಿದ್ದು ಆರೋಪಿಗಳ ವಿರುದ್ದ ಸಿರಿಗೆರೆ ವಲಯ ಅರಣ್ಯಾಧಿಕಾರಿಗಳು ದೂರು ದಾಖಲಿಸಿರುವ ಪ್ರಕರಣ ವರದಿಯಾಗಿದೆ.

WhatsApp Group Join Now
Telegram Group Join Now
Instagram Group Join Now

ಅಡ್ಡೇರಿಯಿಂದ ಮತ್ತಲಿಜಡ್ಡು ಗ್ರಾಮಕ್ಕೆ ಸಂಪರ್ಕಿಸುವ ಮಾರ್ಗದಲ್ಲಿದ್ದ ಸುಮಾರು 17 ಸಾಗುವಾನಿ ಮರಗಳನ್ನು ಅಕ್ರಮವಾಗಿ ಕಡಿಯಲಾಗಿದ್ದು ಈ ಸಂಬಂಧ ನಾಲ್ವರ ವಿರುದ್ದ ಕೇಸ್ ದಾಖಲಿಸಿರುವುದಾಗಿ ಆರ್.ಎಫ್.ಓ ಅರವಿಂದ್ ತಿಳಿಸಿದ್ದಾರೆ.

Leave a Comment