ರಿಪ್ಪನ್‌ಪೇಟೆ ; 76ನೇ ಗಣರಾಜ್ಯೋತ್ಸವ ಕಾರ್ಯಕ್ರಮವು ಸಂಭ್ರಮ ಸಡಗರದೊಂದಿಗೆ ನೆರವೇರಿತು.
ಪೊಲೀಸ್ ಠಾಣೆಯಲ್ಲಿ ಪಿಎಸ್‌ಐ ಎಸ್.ಪಿ.ಪ್ರವೀಣ್ ಧ್ವಜಾರೋಹಣ ನೆರವೇರಿಸಿ ಧ್ವಜವಂದನೆ ಸ್ವೀಕರಿಸಿದರು. ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯಾಧಿಕಾರಿಗಳು, ಸರ್ಕಾರಿ ಹಿರಿಯ ಪ್ರಾಥಮಿಕ ಮಾದರಿ ಪಾಠಶಾಲೆಯಲ್ಲಿ ಎಸ್.ಡಿ.ಎಂ.ಸಿ. ಅಧ್ಯಕ್ಷ ಮಂಜಪ್ಪ, ಸಮಾಜ ಕಲ್ಯಾಣ ಇಲಾಖೆಯ ವಸತಿ ನಿಲಯದಲ್ಲಿ ಮೇಲ್ವಿಚಾರಕ ರಾಘವೇಂದ್ರ, ಬಿಸಿಎಂ ಬಾಲಕಿಯರ ವಿದ್ಯಾರ್ಥಿ ನಿಲಯದಲ್ಲಿ ಸುಮಿತ್ರ, ರೈತ ಸಂಪರ್ಕ ಕೇಂದ್ರದಲ್ಲಿ ಕೃಷಿ ಅಧಿಕಾರಿ, ಬರುವೆ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಯಲ್ಲಿ ಎಸ್.ಡಿ.ಎಂ.ಸಿ. ಅಧ್ಯಕ್ಷ ರಾಘವೇಂದ್ರ ಆರ್, ಶ್ರೀ ಗುರು ಬಸವೇಶ್ವರ ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲೆಯಲ್ಲಿ ಎಸ್.ಡಿ.ಎಂ.ಸಿ ಅಧ್ಯಕ್ಷ ಉಮೇಶ ಕಾಂಬ್ಲೆ, ಸರ್ಕಾರಿ ಪ್ರಥಮ ದರ್ಜೆ ಕಾಲೇಜ್‌ನಲ್ಲಿ ಪ್ರಾಚಾರ್ಯ ಪ್ರೋ. ವಿರೂಪಾಕ್ಷಪ್ಪ, ಸರ್ಕಾರಿ ಪದವಿ ಪೂರ್ವ ಕಾಲೇಜ್‌ನಲ್ಲಿ ಪ್ರಾಚಾರ್ಯರು ವಾಸುದೇವ, ಸರ್ಕಾರಿ ಪಶು ಆಸ್ಪತ್ರೆಯಲ್ಲಿ ಡಾ.ಸಂತೋಷಕುಮಾರ್, ಸರ್ಕಾರಿ ಪ್ರೌಢಶಾಲೆಯಲ್ಲಿ ಎಸ್.ಡಿ.ಎಂ.ಸಿ ಅಧ್ಯಕ್ಷ ಚಿಕ್ಕಜೇನಿ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಯಲ್ಲಿ ಎಸ್.ಡಿ.ಎಂ.ಸಿ. ಅಧ್ಯಕ್ಷ ನಿವೃತ್ತ ಸೇನಾನಿ ಎನ್.ಪಿ.ಗಂಗಾಧರ, ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಪಾಠಶಾಲೆಯಲ್ಲಿ ಶಾಲಾ ಎಸ್.ಡಿ.ಎಂ.ಸಿ. ಅಧ್ಯಕ್ಷ ಪಿ.ಕೆ.ಮೊಹಮ್ಮದ್ ಅಲಿ, ಕೋಡೂರು ಗ್ರಾಮ ಪಂಚಾಯತಿಯಲ್ಲಿ ಗ್ರಾ.ಪಂ. ಅಧ್ಯಕ್ಷ ಜಯಪ್ರಕಾಶ್ ಶೆಟ್ಟಿ, ವಿನಾಯಕ ನಗರದ ಸರ್ಕಾರಿ ಕಿರಿಯ ಪ್ರಾಥಮಿಕ ಪಾಠಶಾಲೆಯಲ್ಲಿ ಗ್ರಾಮ ಪಂಚಾಯ್ತಿ ಸದಸ್ಯ ಸುಂದರೇಶ್, ಮೇರಿಮಾತಾ ಪ್ರೌಢಶಾಲೆಯಲ್ಲಿ ಪ್ರಾಚಾರ್ಯ ಜಸ್ಲಿನ್, ಗುಡ್‌ಶಫಡ್ ಶಾಲೆಯಲ್ಲಿ ಪಾ.ಬಿನೋಯಿ, ಅರಸಾಳು ವಲಯ ಅರಣ್ಯಾಧಿಕಾರಿ ಕಛೇರಿಯಲ್ಲಿ ವಲಯ ಅರಣ್ಯಾಧಿಕಾರಿ ಶರಣಪ್ಪ, ಮೂಗುಡ್ತಿ ವನ್ಯಜೀವಿ ವಲಯ ಅರಣ್ಯಾಧಿಕಾರಿಗಳು, ಸಿರಿಗೆರೆ ವಲಯ ಅರಣ್ಯಾಧಿಕಾರಿ ಕಛೇರಿಯಲ್ಲಿ ಆರ್.ಎಫ್.ಓ.ಅರವಿಂದ, ಧ್ವಜಾರೋಹಣ ನೆರವೇರಿಸಿ ಧ್ವಜವಂದನೆ ಸ್ವೀಕರಿಸಿದರು.

ನಂತರ ಶಾಲಾ ಮಕ್ಕಳ ಪಥಸಂಚಲನ ಪ್ರಮುಖ ಬೀದಿಯಲ್ಲಿ ಸಂಚರಿಸಿತು. ಈ ಸಂದರ್ಭದಲ್ಲಿ ಚಿಕ್ಕಜೇನಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಎಸ್.ಡಿ.ಎಂ.ಸಿ. ಅಧ್ಯಕ್ಷ ಆಶೋಕ್, ಮುಖ್ಯ ಶಿಕ್ಷಕ ನಾಗರಾಜ್, ಅನಿತಾ ಉದಯಾಚಾರ್ಯ, ಪೊಲೀಸ್ ಠಾಣೆಯ ಎಎಸ್‌ಐ ಸಿಬ್ಬಂದಿವರ್ಗ, ಬಸವೇಶ್ವರ ಶಾಲೆಯ ಗುರುಬಸವೇಶ್ವರ ವಿದ್ಯಾಪೀಠದ ನಿರ್ದೇಶಕರು ಎಸ್.ಡಿ.ಎಂ.ಸಿ ನಿರ್ದೇಶಕರು ಹಾಜರಿದ್ದರು.

ರಾಷ್ಟ್ರೀಯ ಹಬ್ಬದಾಚರಣೆಗೆ ಸಾರ್ವಜನಿಕರ ಕೊರತೆ ನಿರುತ್ಸಾಹದ ಗಣರಾಜ್ಯೋತ್ಸವ ಸದಸ್ಯರ ಆಕ್ರೋಶ
ರಿಪ್ಪನ್‌ಪೇಟೆ ; 76ನೇ ಗಣರಾಜ್ಯೋತ್ಸವ ಸಮಾರಂಭವನ್ನು ಸಂಭ್ರಮದೊಂದಿಗೆ ಆಚರಿಸಬೇಕಾಗಿದ್ದು ಆದರೆ ಇಲ್ಲಿನ ಗ್ರಾಮಾಡಳಿತದಲ್ಲಿ ಮಾತ್ರ ಸಾರ್ವಜನಿಕರ ಕೊರತೆ ಎದ್ದು ಕಾಣುವಂತಾಗಿ ರಾಷ್ಟ್ರೀಯ ಹಬ್ಬ ನಿರುತ್ಸಾಹದಿಂದ ಕೂಡಿರುವ ಬಗ್ಗೆ ಕೆಲವು ಸದಸ್ಯರು ತಮ್ಮ ಅಸಮದಾನವನ್ನು ವ್ಯಕ್ತಪಡಿಸಿದರು.
ಕಾರಣ ಕೇಳಿದರೆ ಸರಿಯಾಗಿ ಸಾರ್ವಜನಿಕರಿಗೆ ಮಾಹಿತಿ ನೀಡದೆ ಇರುವುದು ಎಂದು ಹಲವರು ಹೇಳಿದರೆ ಪಂಚಾಯ್ತಿ ಕೆಲ ಸದಸ್ಯರು ಅರ್ಧದಲ್ಲಯೇ ಹೊರಹೋಗಿರುತ್ತಾರೆಂದು ಕೆಲವರು ಹೇಳುತ್ತಿದ್ದು ಒಟ್ಟಾರೆಯಾಗಿ 76ನೇ ಗಣರಾಜ್ಯೋತ್ಸವ ಮಾತ್ರ ಗೆಲುವಿಲ್ಲದೆ ಸಪ್ಪೆಯಾಗಿರುವುದು ಕಂಡುಬಂದಿತು.
ಆಡಳಿತ ಪಕ್ಷದ ಅಧ್ಯಕ್ಷೆಯ ವಿರುದ್ದ ಅವಿಶ್ವಾಸ ನಿರ್ಣಯ ಮಂಡಿಸುವ ಬೆಳವಣಿಗೆ ಮುನ್ಸೂಚನೆಯಂತೆ ಬಾಸವಾಗುವಂತಾಗಿತ್ತು.
ಈ ಯಾವುದನ್ನು ಲೆಕ್ಕಿಸದೇ ಗ್ರಾಮಾಧ್ಯಕ್ಷೆ ಧನಲಕ್ಷ್ಮಿ 76ನೇ ಗಣರಾಜ್ಯೋತ್ಸವದಲ್ಲಿ ಧ್ವಜಾರೋಹಣ ನೆರವೇರಿಸಿ ಧ್ವಜವಂದನೆ ಸ್ವೀಕರಿಸಿದರು.