ಧಾರ್ಮಿಕ ಆಚರಣೆಯಿಂದ ನೆಮ್ಮದಿ ಬದುಕು ಸಾಧ್ಯ ; ಕೋಣಂದೂರು ಶ್ರೀಗಳು

Written by Mahesha Hindlemane

Published on:

ರಿಪ್ಪನ್‌ಪೇಟೆ ; ಇತ್ತೀಚಿನ ದಿನಗಳಲ್ಲಿ ನಮ್ಮ ಯುವ ಜನಾಂಗ ಒತ್ತಡದ ಬದುಕಿನಲ್ಲಿ ಧಾರ್ಮಿಕ ಆಚರಣೆಯಿಂದ ದೂರವಾಗುತ್ತಿದ್ದಾರೆಂದು ಕೋಣಂದೂರು ಬೃಹನ್ಮಠದ ಶ್ರೀಪತಿ ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳು ಕಳವಳ ವ್ಯಕ್ತಪಡಿಸಿದರು.

WhatsApp Group Join Now
Telegram Group Join Now
Instagram Group Join Now
📢 Stay Updated! Join our WhatsApp Channel Now →

ಜಳಬೈಲು ಶ್ರೀಮಲ್ಲಿಕಾರ್ಜುನ ಸ್ವಾಮಿ ದೇವಸ್ಥಾನದಲ್ಲಿ ಶ್ರೀಮಲ್ಲಿಕಾರ್ಜುನ ಸ್ವಾಮಿಯ ಪ್ರತಿಷ್ಠಾವರ್ಧಂತೋತ್ಸವ ಧರ್ಮ ಸಮಾರಂಭದಲ್ಲಿ ಶ್ರೀ ಸ್ವಾಮಿಗೆ ರುದ್ರಾಭಿಷೇಕ ನೇರವೇರಿಸಿ ಆಶೀರ್ವಚನ ನೀಡಿ, ಉದ್ಯೋಗದ ಒತ್ತಡದಲ್ಲಿ ಧಾರ್ಮಿಕ ಆಚರಣೆಗಳಲ್ಲಿ ಮತ್ತು ಪೋಷಕರ ಪಾಲನೆ ಪೋಷಣೆಯಲ್ಲಿ ನಮ್ಮ ಮಕ್ಕಳು ದೂರವಾಗುತ್ತಿದ್ದಾರೆ. ವರ್ಷದಲ್ಲಿ ಒಮ್ಮೆಯಾದರೂ ತಮ್ಮ ಮನೆ ದೇವರ ಮತ್ತು ಧರ್ಮಾಚರಣೆಯ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಂಡು ಭಗವಂತನ ಧ್ಯಾನ ಮಾಡಿದರೆ ಪುಣ್ಯ ಪ್ರಾಪ್ತಿಯಾಗುವ ಮೂಲಕ ನೆಮ್ಮದಿಯನ್ನು ಕಾಣಬಹುದಾಗಿದೆ ಎಂದರು.

ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಶ್ರೀಮಲ್ಲಿಕಾರ್ಜುನ ಸ್ವಾಮಿ ದೇವಸ್ಥಾನ ಸೇವಾ ಸಮಿತಿಯವರು ಮತ್ತು ಜಗಳಬೈಲು, ಮುನಿಯೂರು, ಹುಂಚದಕಟ್ಟೆ ಸುತ್ತಮುತ್ತಲಿನ ನೂರಾರು ಭಕ್ತರು ಪಾಲ್ಗೊಂಡಿದ್ದರು.

Leave a Comment