ಮಾ.7 ರಂದು ಹರತಾಳು ಹಾಲಪ್ಪ ಹುಟ್ಟುಹಬ್ಬದ ಪ್ರಯುಕ್ತ ಗೋಶಾಲೆಗಳಿಗೆ ಮೇವು ವಿತರಣೆ & ರಕ್ತದಾನ ಶಿಬಿರ

Written by Mahesha Hindlemane

Published on:

ಹೊಸನಗರ ; ಮಾಜಿ ಸಚಿವ ಹರತಾಳು ಹಾಲಪ್ಪರ ಜನ್ಮದಿನದ ಅಂಗವಾಗಿ ಮಾರ್ಚ್ 7ರಂದು ಸಾಗರದ ಉಪವಿಭಾಗೀಯ ಆಸ್ಪತ್ರೆಯಲ್ಲಿ ರಕ್ತದಾನ ಶಿಬಿರ ಹಾಗೂ ಹೊಸನಗರ ರಾಮಚಂದ್ರಪುರದ ಗೋ ಶಾಲೆಗೆ ಒಣ ಹುಲ್ಲುಗಳ ವಿತರಣೆ ಹಾಗೂ ಹತ್ತು ಹಲವು ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದು ಬಿಜೆಪಿ ಮುಖಂಡ ಮಂಡಾನಿ ಮೋಹನ್ ತಿಳಿಸಿದ್ದಾರೆ.

WhatsApp Group Join Now
Telegram Group Join Now
Instagram Group Join Now
📢 Stay Updated! Join our WhatsApp Channel Now →

ಅವರು ಇಲ್ಲಿನ ಬಿಜೆಪಿ ಕಾರ್ಯಲಯದಲ್ಲಿ ಬುಧವಾರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿ, ಸಾಮಾಜಿಕ ಕ್ಷೇತ್ರದಲ್ಲಿ ಇರುವವರು ಇತರರಿಗೆ ಮಾದರಿಯಾಗಿ ಬಾಳಬೇಕು ಎನ್ನುವ ಉದ್ದೇಶದಿಂದ ಹಾಲಪ್ಪ ಅವರು ತಮ್ಮ ಹುಟ್ಟುಹಬ್ಬವನ್ನು ಸರಳವಾಗಿ ಹಾಗೂ ಸಾಮಾಜಿಕ ಕಳಕಳಿಯ ಕೆಲಸಗಳನ್ನು ಮೂಡುವ ಮೂಲಕ ಆಚರಿಸಿಕೊಳ್ಳಲು ಮುಂದಾಗಿದ್ದಾರೆ. ಮಾ.7ರಂದು ಹಾಲಪ್ಪ ಅವರ ಹುಟ್ಟುಹಬ್ಬ ಆಚರಣೆಯನ್ನು ವಿಭಿನ್ನವಾಗಿ ಆಚರಿಸಲು ಬಿಜೆಪಿ ಕಾರ್ಯಕರ್ತರು ಹಾಗೂ ಅವರ ಅಭಿಮಾನಿ ಬಳಗದವರು ನಿರ್ಧರಿಸಿದ್ದಾರೆ. ಅಂದು ಬೆಳಿಗ್ಗೆ 6 ಗಂಟೆಗೆ ಸಾಗರದ ಗಣಪತಿ ದೇವಸ್ಥಾನ ಕೆರೆ ಸ್ವಚ್ಚತಾ ಕಾರ್ಯ ಮದ್ಯಾಹ್ನ ಚಂದ್ರಗುತ್ತಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಬಳಿಕ ರಾಮಚಂದ್ರಾಪುರ ಮಠದ ಗೋಶಾಲೆ ಹಾಗೂ ಪಟ್ಟಣದ ನಂದಗೋಕುಲ, ದುರ್ಗಾಂಬಾ ಹಾಗೂ ಗರ್ತಿಕೆರೆಯ ಗೋಶಾಲೆಗಳಿಗೆ ಮೇವು ವಿತರಣೆ ನಡೆಯಲಿದೆ. ರಿಪ್ಪನ್‌ಪೇಟೆಯಲ್ಲಿ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರ ಸಮ್ಮುಖದಲ್ಲಿ ಹುಟ್ಟುಹಬ್ಬ ಆಚರಿಸಲಾಗುವುದು. ರಾತ್ರಿ 10 ಗಂಟೆಗೆ ಆವಿನಹಳ್ಳಿಯಲ್ಲಿ ಬಳೆ ಕೋಲಾಟ ಪ್ರದರ್ಶನ ಆಯೋಜಿಸಲಾಗಿದೆ ಎಂದರು.

ಹುಟ್ಟು ಹಬ್ಬ ಆಚರಣೆ ಇನ್ನೊಬ್ಬರಿಗೆ ಮಾದರಿಯಾಗಿರಬೇಕು ; ಹಾಲಗದ್ದೆ ಉಮೇಶ್

ಬಿಜೆಪಿ ಮುಖಂಡ ಹಾಲಗದ್ದೆ ಉಮೇಶ್ ಮಾತನಾಡಿ, ನಾವು ಹಂತ-ಹಂತವಾಗಿ ಬೆಳೆಯಬೇಕಾದರೆ ನಮ್ಮ ಹಿಂದಿನ ಕಾರ್ಯಕರ್ತರ ಹಾಗೂ ಅಭಿಮಾನಿಗಳ ಪರಿಶ್ರಮದಿಂದ ಒಂದು ಉನ್ನತ ಸ್ಥಾನಕ್ಕೆ ಹೋಗಿರುತ್ತೇವೆ. ಮೇಲ್ಮಟ್ಟಕ್ಕೆ ಹೋದಾಗ ನಾವು ಹುಟ್ಟು ಹಬ್ಬದಂತಹ ಕಾರ್ಯಕ್ರಮಗಳ ಮೂಲಕ ರಕ್ತದಾನ ಶಿಬಿರಾಗಳನ್ನು ಏರ್ಪಡಿಸುವುದು ಉತ್ತಮ. ಇದರ ಜೊತೆಗೆ ಹುಟ್ಟು ಹಬ್ಬದ ಸಂದರ್ಭದಲ್ಲಿ ಹೊಸನಗರ ತಾಲ್ಲೂಕಿನಲ್ಲಿರುವ ಬಸ್ ಸ್ಟ್ಯಾಂಡ್‌ಗಳಿಗೆ ಸುಣ್ಣ-ಬಣ್ಣಗಳನ್ನು ಹೊಡೆಯುವುದರ ಜೊತೆಗೆ ಸುತ್ತ-ಮುತ್ತಲಿನ ಪ್ರದೇಶಗಳನ್ನು ಸ್ವಚ್ಛ ಮಾಡಲಾಗುವುದು ಇದರಿಂದ ಜನರಿಗೆ ಉತ್ತಮ ಸಂದೇಶ ನೀಡಿದಂತಾಗುತ್ತದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಬಿ.ಯುವರಾಜ್, ಮನೋಧರ, ಹರೀಶ್, ಚಿಕ್ಕಮಣತಿ ದೇವರಾಜ್, ಕಾವೇರಿ ವಿಜಯಕುಮಾರ್, ಸತ್ಯನಾರಾಯಣ, ಮಂಜುನಾಥ್ ಸಂಜೀವ, ಮಹೇಂದ್ರ, ಗ್ರಾಮ ಪಂಚಾಯತಿ ಸದಸ್ಯರಾದ ಓಂಕೇಶ ಗೌಡ, ಶ್ರೀಧರ, ಆಶಾ ರವೀಂದ್ರ, ಅಬ್ಬಿ ಕಿರಣ್, ಗಣೇಶ್, ಸುಮಾ ಸುರೇಶ್, ಉಮೇಶ್, ಮತ್ತಿತರರು ಉಪಸ್ಥಿತರಿದ್ದರು.

Leave a Comment