ಮಾ‌.13 ರಂದು ಹೊಸನಗರ ತಾಲೂಕಿನ ಈ ಗ್ರಾ.ಪಂ. ವ್ಯಾಪ್ತಿಗಳಲ್ಲಿ ಕರೆಂಟ್ ಇರಲ್ಲ !

Written by malnadtimes.com

Published on:

ಹೊಸನಗರ ; ಮಾ. 13ರ ಬೆಳಗ್ಗೆ 09:00 ಗಂಟೆಯಿಂದ ಸಂಜೆ 06:00 ಗಂಟೆವರೆಗೆ 110/11 ಕೆ.ವಿ ಹುಲಿಕಲ್ ಉಪವಿದ್ಯುತ್ ವಿತರಣಾ ಕೇಂದ್ರ ಇದರ ತ್ರೈ ಮಾಸಿಕ ನಿರ್ವಹಣಾ ಕಾರ್ಯದ ಪ್ರಯುಕ್ತ ಅಂಗಡದೋದೂರು, ಮೂಡಗೊಪ್ಪ (ನಗರ), ಯಡೂರು, ಸುಳಗೋಡು, ಕರಿಮನೆ, ಖೈರಗುಂದ, ಅರಮನಕೊಪ್ಪ ಮತ್ತು ನಾಗೋಡಿ (ನಿಟ್ಟೂರು) ಗ್ರಾಮ ಪಂಚಾಯಿತಿ ಪ್ರದೇಶಗಳಿಗೆ ವಿದ್ಯುತ್ ಸರಬರಾಜು ಇರುವುದಿಲ್ಲ. ಆದ್ದರಿಂದ ಈ ಭಾಗದ ಗ್ರಾಹಕರು ಸಹಕರಿಸುವಂತೆ ಹೊಸನಗರ ಮೆಸ್ಕಾಂ ಉಪ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಚಂದ್ರಶೇಖರ್ ಪತ್ರಿಕಾ ಪ್ರಕಟಣೆ ಮೂಲಕ ತಿಳಿಸಿದ್ದಾರೆ.

WhatsApp Group Join Now
Telegram Group Join Now
Instagram Group Join Now

Leave a Comment