Ripponpete ಶಿವಮೊಗ್ಗ

ಹಳ್ಳಿ ಮಕ್ಕಳ ರಂಗಹಬ್ಬಕ್ಕೆ ಮಕ್ಕಳಿಂದ ಅರ್ಜಿ ಆಹ್ವಾನ

ರಿಪ್ಪನ್‌ಪೇಟೆ ; ಮಸರೂರು ದಿ.ರೇಣುಕಪ್ಪಗೌಡ ಪ್ರತಿಷ್ಟಾನ ಶಿವಮೊಗ್ಗ, ಮಲೆನಾಡು ಕಲಾ ತಂಡ ಹಾಗೂ ವಿವಿಧ ಸಂಘ-ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ 5ನೇ ವರ್ಷದ ‘ಹಳ್ಳಿ ಮಕ್ಕಳ ರಂಗಹಬ್ಬ-2025’ ಮಕ್ಕಳ ತರಬೇತಿ ಶಿಬಿರವನ್ನು ಏಪ್ರಿಲ್ 11 ರಿಂದ 26 ರವರೆಗೆ 6 ರಿಂದ 16 ವಯಸ್ಸಿನ ಮಕ್ಕಳಿಗೆ ಇಲ್ಲಿನ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಲಾಗಿದೆ ಎಂದು ರಂಗಕರ್ಮಿ, ನಾಟಕ ಅಕಾಡೆಮಿ ಜಿಲ್ಲಾ ಸಂಚಾಲಕ ಶಿಬಿರ ನಿರ್ದೇಶಕ ಡಾ.ಗಣೇಶ ಆರ್ ಕೆಂಚನಾಲ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

img-20250403-wa00012876853783113986336.jpg

ಶಿಬಿರದಲ್ಲಿ ರಂಗಚಟುವಟಿಕೆ, ಜನಪದ ಮತ್ತು ಕಥಾ ವಿಹಾರ, ಹಾಡು-ಹಸೆ, ನೃತ್ಯಕಲೆ, ಚಿತ್ರಕಲೆ, ಕ್ರಾಫ್ಟ್, ವರ್ಕ್, ಮ್ಯಾಜಿಕ್, ಟೆಲಿಸ್ಕೋಪ್, ಮಕ್ಕಳ ಸಾಕ್ಷ್ಯಚಿತ್ರ, ಮೂಕಾಭಿನಯ, ಕೌಶಲ್ಯ ಆಟಗಳು, ಇತರೆ ವಿಸ್ಮಯಕಾರಿ ಕಲಿಕಾ ಶಿಬಿರದಲ್ಲಿ ಮಕ್ಕಳಿಗೆ ನಡೆಸಲಾಗುತ್ತಿದೆ.

ಈ ಶಿಬಿರದಲ್ಲಿ ಭಾಗವಹಿಸುವ 6 ರಿಂದ 16 ವರ್ಷದ ಮಕ್ಕಳಿಗೆ ಪ್ರವೇಶ ಆರಂಭವಾಗಿದ್ದು ಹೆಚ್ಚಿನ ಮಾಹಿತಿಗಾಗಿ 9902356019, 9481691337 ಸಂಪರ್ಕಿಸಲು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Comment