ಅಪರಾಧ ಸುದ್ದಿ

ಹಿಂಡ್ಲೆಮನೆ ಶಾಲೆಯ ವಿದ್ಯುತ್ ಪಂಪ್‌ಸೆಟ್, ಕೇಬಲ್ ಕಳ್ಳತನ

ಹಿಂಡ್ಲೆಮನೆ ಶಾಲೆಯ ವಿದ್ಯುತ್ ಪಂಪ್‌ಸೆಟ್, ಕೇಬಲ್ ಕಳ್ಳತನ – InShot 20260801 163821872

ಹೊಸನಗರ : ತಾಲೂಕಿನ ಕೋಡೂರು ಗ್ರಾ.ಪಂ. ವ್ಯಾಪ್ತಿಯ ಹಿಂಡ್ಲೆಮನೆ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಬಾವಿಗೆ ಅಳವಡಿಸಲಾಗಿದ್ದ ವಿದ್ಯುತ್ ಪಂಪ್‌ಸೆಟ್ ಮತ್ತು ಕೇಬಲ್ ಕಳ್ಳತನವಾಗಿರುವ ಘಟನೆ ತಡರಾತ್ರಿ ನಡೆದಿದೆ.

WhatsApp Group Join Now
Telegram Group Join Now
Instagram Group Join Now

ಘಟನಾ ವಿವರ :

ಶಾಲೆಯ ಕುಡಿಯುವ ನೀರಿನ ಬಳಕೆಗೆ ಬಾವಿಗೆ ಅಳವಡಿಸಲಾಗಿದ್ದ 1.5 ಹೆಚ್.ಪಿ. ಸಬ್ಮರ್ಸಿಬಲ್ ಪಂಪ್‌ಸೆಟ್‌ ಜು.30 ರಂದು ಸುಟ್ಟುಹೋಗಿದ್ದು ಇದನ್ನು ಎಲೆಕ್ಟ್ರಿಶಿಯನ್ ಸಹಾಯದಿಂದ ಮೇಲೆತ್ತಿ ಮೋಟಾರ್ ಅನ್ನು ದುರಸ್ತಿಗೆ ಕೊಡಲಾಗಿತ್ತು. ಪಂಪ್ ಮತ್ತು ಕೇಬಲ್ ಶಾಲೆಯ ಆವರಣದ ಬಾವಿಯ ಬಳಿಯಲ್ಲೇ ಇಡಲಾಗಿತ್ತು. ಇದೇ ಸರಿಯಾದ ಸಮಯ ಎಂದು ಕಾದ ಖದೀಮರು ಸುಮಾರು ₹ 4 ಸಾವಿರ ಮೌಲ್ಯದ ವಿದ್ಯುತ್ ಕೇಬಲ್ ಮತ್ತು ₹ 6 ಸಾವಿರ ಮೌಲ್ಯದ ವಿದ್ಯುತ್ ಮೋಟಾರ್‌ನ ಪಂಪ್‌ ಅನ್ನು ತಡರಾತ್ರಿ ಕಳವು ಮಾಡಿಕೊಂಡು ಹೋಗಲಾಗಿದೆ.

ಶಾಲಾ ಶಿಕ್ಷಕರರು ಮತ್ತು ಸಿಬ್ಬಂದಿಗಳು ಎಂದಿನಂತೆ ಶನಿವಾರ ಶಾಲೆಗೆ ಆಗಮಿಸಿದ ಸಂದರ್ಭದಲ್ಲಿ ಮೋಟಾರ್‌ ಕೇಬಲ್ ಮತ್ತು ಪಂಪ್‌ ಕಾಣೆಯಾಗಿರುವುದು ಗಮನಕ್ಕೆ ಬಂದಿದೆ. ಕೂಡಲೇ ಎಸ್‌ಡಿಎಂಸಿ, ಅಧಿಕಾರಿಗಳು ಮತ್ತು ಗ್ರಾಮಸ್ಥರ ಗಮನಕ್ಕೆ ತಂದಿದ್ದಾರೆ.

Malnad Times App ಡೌನ್‌ಲೋಡ್ ಮಾಡಿಶಿವಮೊಗ್ಗ ಮತ್ತು ಮಲೆನಾಡಿನ ಸುದ್ದಿಗಳನ್ನು ತಕ್ಷಣ ಪಡೆಯಿರಿ.
GET IT ONGoogle Play

ಘಟನೆ ಸಂಬಂಧ ರಿಪ್ಪನ್‌ಪೇಟೆ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಕಳ್ಳತನದ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ.

ಮಾಹಿತಿ ಮತ್ತು ಮೂಲ: ಈ ವರದಿಯನ್ನು Malnad Times ಸಂಪಾದಕೀಯ ತಂಡವು ಲಭ್ಯ ಮಾಹಿತಿಯ ಆಧಾರದಲ್ಲಿ ಪರಿಶೀಲಿಸಿದೆ.

Mahesha Hindlemane

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್‌ಸೈಟ್‌ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 8 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್‌ಸೈಟ್‌ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ 'ಮಲ್ನಾಡ್ ಟೈಮ್ಸ್' ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ. ಇ-ಮೇಲ್ : [email protected]