ಹೊಸನಗರ

36 ವರ್ಷಗಳ ಸಾರ್ಥಕ ಸೇವೆಯ ನೆನಪು ; ಆದರ್ಶ ಶಿಕ್ಷಕಿ ಲಿಲ್ಲಿ ಡಿಸೋಜರಿಗೆ ಗೌರವ ಪೂರ್ವಕ ಸೇವಾ ನಿವೃತ್ತಿ ಬೀಳ್ಕೊಡುಗೆ

36 ವರ್ಷಗಳ ಸಾರ್ಥಕ ಸೇವೆಯ ನೆನಪು ; ಆದರ್ಶ ಶಿಕ್ಷಕಿ ಲಿಲ್ಲಿ ಡಿಸೋಜರಿಗೆ ಗೌರವ ಪೂರ್ವಕ ಸೇವಾ ನಿವೃತ್ತಿ ಬೀಳ್ಕೊಡುಗೆ – InShot 20260731 1953456…

ಹೊಸನಗರ : ಸುಮಾರು 36 ವರ್ಷಗಳ ಸುದೀರ್ಘ ಕಾಲ ಶಿಕ್ಷಕಿಯಾಗಿ ಸೇವೆ ಸಲ್ಲಿಸಿದ ಹೊಸನಗರದ ಸರ್ಕಾರಿ ಪ್ರಾಥಮಿಕ ಬಾಲಕರ ಪಾಠ ಶಾಲೆಯ ಮುಖ್ಯ ಶಿಕ್ಷಕಿ ಲಿಲ್ಲಿ ಡಿಸೋಜರನ್ನು ಅದ್ದೂರಿಯಾಗಿ ಆತ್ಮ ಸಂತೋಷದಿಂದ ಸೇವಾ ನಿವೃತ್ತಿ ಬೀಳ್ಕೊಡುಗೆ ಸಮಾರಂಭವನ್ನು ಏರ್ಪಡಿಸಿ ಶಿಕ್ಷಣ ಇಲಾಖೆ, ಶಾಲೆಯ ಶಿಕ್ಷಕ ವರ್ಗದವರು, ಎಸ್‌ಡಿಎಂಸಿ ಅಧ್ಯಕ್ಷ, ಸದಸ್ಯರಿಂದ ಹಾಗೂ ಬಡ್ತಿ ಮುಖ್ಯ ಶಿಕ್ಷಕರ ಸಂಘದಿಂದ ಹಾಗೂ ವಿವಿಧ ಶಾಲೆಯ ಶಿಕ್ಷಕರ ವರ್ಗದವರಿಂದ ಸನ್ಮಾನಿಸಿ ನೆನಪಿನ ಕಾಣಿಕೆ ನೀಡಿ ಗೌರವಿಸಲಾಯಿತು.

WhatsApp Group Join Now
Telegram Group Join Now
Instagram Group Join Now

ಈ ಸಂದರ್ಭದಲ್ಲಿ ನಿವೃತ್ತ ಕ್ಷೇತ್ರ ಶಿಕ್ಷಣಾಧಿಕಾರಿ ವೀರಭದ್ರಪ್ಪ ಮಾತನಾಡಿ, ಶಿಕ್ಷಣ ಕ್ಷೇತ್ರದಲ್ಲಿ ಕೆಲವು ವ್ಯಕ್ತಿತ್ವಗಳು ತಮ್ಮ ಜ್ಞಾನ ಸೇವಾ ಮನೋಭಾವ ಮತ್ತು ಮಾನವೀಯ ಗುಣಗಳಿಂದ ಸದಾ ಸ್ಮರಣೀಯರಾಗಿರುತ್ತಾರೆ. ಅಂತಹ ಅಪರೂಪದ ಶಿಕ್ಷಕಿಯರಲ್ಲಿ ಲಿಲ್ಲಿ ಡಿಸೋಜರವರು ಒಬ್ಬರು. ವಿದ್ಯಾರ್ಥಿಗಳ ಬದುಕಿಗೆ ಜ್ಞಾನ ಬೆಳಕು ನೀಡುತ್ತಾ ಅವರ ಭವಿಷ್ಯ ರೂಪಿಸುವುದರಲ್ಲಿ ಮಹತ್ವದ ಪಾತ್ರ ವಹಿಸಿದ ಲಿಲ್ಲಿ ಡಿಸೋಜರವರು ಇವರ ಶಿಕ್ಷಕ ವೃತ್ತಿಯ ಪ್ರಯಾಣ ನಿಜಕ್ಕೂ ಸಾರ್ಥಕವಾಗಿದೆ ಎಂದರು.

ಹೊಸನಗರ ಬಿಇಒ ಗಣೇಶ್ ವೈ. ಮಾತನಾಡಿ, ಶಿಕ್ಷಕರಾಗಿ ಮುಖ್ಯ ಶಿಕ್ಷಕಿಯಾಗಿ ಜ್ಞಾನದಾನದ ಪುಣ್ಯಪ್ರದ ಸೇವೆಯಲ್ಲಿ 36 ವರ್ಷಗಳ ಸಾರ್ಥಕ ಸೇವೆ ಸಲ್ಲಿಸಿ ಒಲವ ತೈಲದಿಂದ ಜ್ಞಾನದ ದೀವಿಗೆ ಬೆಳಗಿ ವಿದ್ಯಾರ್ಥಿಗಳ ಬದುಕಿಗೆ ಬೆಳಕಾಗಿ ಶಿಕ್ಷಕ ಅಥವಾ ಶಿಕ್ಷಕಿ ಕೇವಲ ಪಾಠಗಳನ್ನು ಕಲಿಸುವುದಲ್ಲ. ಮೌಲ್ಯಗಳನ್ನು ಬಿತ್ತುತ್ತಾರೆ, ವ್ಯಕ್ತಿತ್ವ ಮತ್ತು ಸಮಾಜದ ಭವಿಷ್ಯವನ್ನು ರೂಪಿಸುತ್ತಾರೆ. ಶುಭ ಘಳಿಗೆಯಲ್ಲಿ ಗೌರವ ಪೂರ್ವಕವಾಗಿ ಸಮರ್ಪಿಸುತ್ತಿರುವ ಸೇವಾಭಿಮಾನ ಪತ್ರ ನೀಡುವುದು ನಮ್ಮ ಇಲಾಖೆಯ ಆದ್ಯ ಕರ್ತವ್ಯವಾಗಿದೆ. ಇವರ ಮುಂದಿನ ಜೀವನ ಸುಖಕರವಾಗಿರಲಿ ಎಂದು ಹಾರೈಸಿದರು.

Malnad Times App ಡೌನ್‌ಲೋಡ್ ಮಾಡಿಶಿವಮೊಗ್ಗ ಮತ್ತು ಮಲೆನಾಡಿನ ಸುದ್ದಿಗಳನ್ನು ತಕ್ಷಣ ಪಡೆಯಿರಿ.
GET IT ONGoogle Play

ಶಿಕ್ಷಕಿಯ ವೃತ್ತಿ ಆತ್ಮ ಗೌರವ ಹೆಚ್ಚಿಸಿದೆ ; ಲಿಲ್ಲಿ ಡಿಸೋಜ

ನಾನು ಸುದೀರ್ಘ 36 ವರ್ಷಗಳ ಕಾಲ ಹೊಸನಗರ ತಾಲ್ಲೂಕಿನ ಸುತ್ತ-ಮುತ್ತಲಿನ ಪ್ರಾಥಮಿಕ ಶಾಲೆಯ ಶಿಕ್ಷಕಿಯಾಗಿ, ಬಡ್ತಿ ಮುಖ್ಯ ಶಿಕ್ಷಕಿಯಾಗಿ ಸೇವೆ ಸಲ್ಲಿಸಿ ಮಕ್ಕಳ ಭವಿಷ್ಯವನ್ನು ರೂಪಿಸಿದ್ದೇನೆ ಎಂಬ ಆತ್ಮ ಗೌರವ ನನಗಿದೆ. ವಿದ್ಯಾರ್ಥಿಗಳೊಂದಿಗೆ ಪೋಷಕರೊಂದಿಗೆ ಹಾಗೂ ಶಿಕ್ಷಣ ಕ್ಷೇತ್ರದ ಅಧಿಕಾರಿ ಸಿಬ್ಬಂದಿಗಳೊಂದಿಗೆ ಉತ್ತಮ ಬಾಂಧವ್ಯ ಹೊಂದಿರುವುದರಿಂದ ನೂರಾರು ಸಂಖ್ಯೆಯಲ್ಲಿ ಶಾಲೆಗೆ ಆಗಮಿಸಿ ನನಗೆ ಸೇವಾ ನಿವೃತ್ತಿ ಬೀಳ್ಕೊಡುತ್ತಿರುವುದು ಹೆಮ್ಮೆ ಎನಿಸುತ್ತಿದೆ. ಇಷ್ಟೆಲ್ಲ ಗೌರವ ನೀಡುವುದು ಶಿಕ್ಷಕರಾಗಿ ಸೇವೆ ಸಲ್ಲಿಸಿದಾಗ ಮಾತ್ರ ಎಂದೆನಿಸುತ್ತಿದ್ದೂ, ನಾನು ಶಿಕ್ಷಕಿಯಾಗಿ ಸುದೀರ್ಘ ಸೇವೆ ಸಲ್ಲಿಸಿದಕ್ಕೆ ಸಾರ್ಥಕವಾಯಿತು ಎಂದರು.

ಈ ಕಾರ್ಯಕ್ರಮದಲ್ಲಿ ಶಿಕ್ಷಕಿಯರಾದ ಈಶ್ವರ್ ಎಸ್ ಪಟ್ಕರ್, ಸುಮನಾ ಹೆಚ್.ಎಸ್, ಅನಿತಾ, ಇಂದೂಶ್ರೀ, ಸಿಬ್ಬಂದಿಯಾದ ಮಂಜುಳ, ಸುಲೋಚನ (ಆಶಾ) ಎಸ್‌ಡಿಎಂಸಿ ಅಧ್ಯಕ್ಷೆ ರೇಷ್ಮಾ ಉಪಾಧ್ಯಕ ಅರುಣ್‌ಕುಮಾರ್, ಗೋಪಾಲ್, ಅನುಸೂಯ, ಲಾರೇನ್ಸ್ ಡಿಸೋಜ, ಕರಿಬಸಪ್ಪ, ಕುಬೇಂದ್ರಪ್ಪ, ವೀರೇಶ್ ಕೆ, ರಂಗನಾಥ್ ಎಂ, ಶಿವಮೂರ್ತಿ ಎಸ್.ಎಂ, ಗಣೇಶ್, ಪುಟ್ಟಸ್ವಾಮಿ, ಇನ್ನೂ ಮುಂತಾದವರು ಉಪಸ್ಥಿತರಿದ್ದರು.

ಮಾಹಿತಿ ಮತ್ತು ಮೂಲ: ಈ ವರದಿಯನ್ನು Malnad Times ಸಂಪಾದಕೀಯ ತಂಡವು ಲಭ್ಯ ಮಾಹಿತಿಯ ಆಧಾರದಲ್ಲಿ ಪರಿಶೀಲಿಸಿದೆ.

Mahesha Hindlemane

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್‌ಸೈಟ್‌ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 8 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್‌ಸೈಟ್‌ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ 'ಮಲ್ನಾಡ್ ಟೈಮ್ಸ್' ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ. ಇ-ಮೇಲ್ : [email protected]