ಹೆದ್ದಾರಿಗೆ ಅಡ್ಡಲಾಗಿ ಬಿದ್ದ ಬೃಹತ್ ಮರ ; ಬೈಕ್ ಸವಾರನಿಗೆ ಗಾಯ !

Written by malnadtimes.com

Published on:

ತೀರ್ಥಹಳ್ಳಿ ; ರಾಷ್ಟ್ರೀಯ ಹೆದ್ದಾರಿ ತೀರ್ಥಹಳ್ಳಿ – ಕೊಪ್ಪ ರಸ್ತೆ ಸಂಪರ್ಕಿಸುವ ರಸ್ತೆಯ ಮೇಲಿನಕುರುವಳ್ಳಿ ಸಮೀಪದ ಸೋಮೇಶ್ವರ ಬಳಿ ಗೋಳಿ ಜಾತಿಯ ಬೃಹತ್ ಮರವೊಂದು ಏಕಾಏಕಿ ರಸ್ತೆಗೆ ಅಡ್ಡಲಾಗಿ ಬಿದ್ದ ಘಟನೆ ಬುಧವಾರ ಸಂಜೆ ನಡೆದಿದೆ.

WhatsApp Group Join Now
Telegram Group Join Now
Instagram Group Join Now

ತೀರ್ಥಹಳ್ಳಿ ತಾಲೂಕಿನ ಮೇಲಿನಕುರುವಳ್ಳಿ ಸಮೀಪದ ಸೋಮೇಶ್ವರ ಬಳಿ ಮಧ್ಯ ರಸ್ತೆಗೆ ಮರ ಉರುಳಿ ಬಿದ್ದಿದೆ. ಇತ್ತೀಚಿಗೆ ರಸ್ತೆ ಕಾಮಗಾರಿ ವೇಳೆ ಸ್ವಲ್ಪ ಮಟ್ಟಿಗೆ ಮರದ ಬುಡವನ್ನು ತೆಗೆಯಲಾಗಿತ್ತು ಇದರಿಂದ ಇಂದು ಮರ ಬಿದ್ದಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ರಸ್ತೆಯಲ್ಲಿ ಬರುತ್ತಿದ್ದ ಬೈಕ್ ಸವಾರನ ಮೇಲೆಯೇ ಮರ ಬಿದ್ದಿದ್ದು ಆತನಿಗೆ ಗಾಯವಾಗಿದ್ದು ಆಸ್ಪತ್ರೆಗೆ ರವಾನೆ ಮಾಡಲಾಗಿದೆ.

ಮರದ ಕೆಳಗೆ ಬೈಕ್ ಸಿಲುಕಿದ್ದು ಅದನ್ನು ಹರಸಾಹಸ ಮಾಡಿ ತೆಗೆಯಲಾಗಿದೆ. ಕೆಲಕಾಲ ರಸ್ತೆ ಸಂಪೂರ್ಣ ಬಂದ್ ಆಗಿತ್ತು. ಪರ್ಯಾಯ ಮಾರ್ಗವಾಗಿ ಬುಕ್ಲಾಪುರ ಮೂಲಕ ವಾಹನಗಳು ಸಂಚರಿಸಿದವು.

Leave a Comment