ರಿಪ್ಪನ್‌ಪೇಟೆ ; ಧ್ಯಾನ ಮತ್ತು ಶ್ರದ್ದೆಯಿಂದ ಆಚರಿಸುವ ಈಸ್ಟರ್ ಸಂಡೆ ಏಸು ಪುನರುತ್ಥಾನಗೊಂಡ ದಿನ ಒಂದು ಸಂತಸದ ದಿನವಾಗಿದ್ದರೆ, ಗುಡ್‌ಫ್ರೈಡೆ ಆತನ ತ್ಯಾಗವನ್ನು ನೆನಪಿಸುವ ದಿನವಾಗಿದೆ ಎಂದು ಗುಡ್‌ಶಫರ್ಡ್ ಚರ್ಚ್‌ನ ಧರ್ಮಗುರು ರೆ.ಪಾ.ಬಿನೋಯ್ ಹೇಳಿದರು.
ರಿಪ್ಪನ್‌ಪೇಟೆಯ ಗುರ್ಡ್ ಶಫರ್ಡ್ ಚರ್ಚ್‌ನವರು ಇಂದು ಆಯೋಜಿಸಲಾದ ಗುಡ್‌ಫ್ರೈಡೆ ಕಾರ್ಯಕ್ರಮದಲ್ಲಿ ತಮ್ಮ ಸಂದೇಶವನ್ನು ನೀಡಿ, ಕ್ರೈಸ್ತ ಧರ್ಮದಲ್ಲಿ ಬಹುಮುಖ್ಯವಾದ ಪವಿತ್ರ ದಿನವಾಗಿದ್ದು ಇದು ಯೇಸು ಕ್ರಿಸ್ತನು ಶಿಲುಬೆಗೇರಿಸ್ಪಟ್ಟ ದಿನವೆಂದು ನಂಬಲಾಗುತ್ತದೆ. ಈ ದಿನವನ್ನು ಈಸುವು (ಇಸ್ಟರ್) ಪೂರ್ವ ಶುಕ್ರವಾರವೆಂದು ಆಚರಿಸಲಾಗುತ್ತದೆ ಇದರ ಮಹತ್ವ ಮತ್ತು ಆಚರಣೆ ಯೆಸು ಕ್ರಿಸ್ತನ ಬಲಿದಾನ ಗುಡ್‌ಫ್ರೈಡೆ ಯೇಸು ಕ್ರಿಸ್ತನು ಮನುಷ್ಯರ ಪಾಪಗಳಿಗೆ ಪರಿಹಾರವಾಗಿ ತನ್ನ ಪ್ರಾಣತ್ಯಾಗ ಮಾಡಿದ ದಿನವೆಂದು ಧಾರ್ಮಿಕ ನಂಬಿಕೆಯಿದೆ. ಪಾಪಮುಚ್ಚಟನೆ ಈ ದಿನದ ಮೂಲಕ ಕ್ರಿಸ್ತನ ಅನುಯಾಯಿಗಳು ಈ ಶುಭ ಶುಕ್ರವಾರವನ್ನು ಶ್ರದ್ದಾಭಕ್ತಿಯಿಂದ ಸಂಭ್ರಮದೊಂದಿಗೆ ಆಚರಿಸಿದರು.

ಗುಡ್ ಶಫರ್ಡ್ ಚರ್ಚ್‌ನಿಂದ ಮೆರವಣಿಗೆ ಹೊರಟು ಜ್ಯೋತಿ ಮಾಂಗಲ್ಯ ಮಂದಿರದ ಹಿಂಭಾಗದ ರಸ್ತೆಯಲ್ಲಿ ಸಂಚರಿಸಿ ನಂತರ ಚರ್ಚ್‌ಗೆ ವಾಪಾಸ್ಸಾಯಿತು.
ಈ ಮೆರವಣಿಗೆಯಲ್ಲಿ ಶಿವಮೊಗ್ಗ ಜಿಲ್ಲೆಯ ವಿವಿಧೆಡೆಗಳಿಂದ ಕ್ರಿಶ್ಚಿಯನ್ ಧರ್ಮದವರು ಸಹಸ್ರಾರು ಭಕ್ತರು ಪಾಲ್ಗೊಂಡಿದ್ದರು.