ರಿಪ್ಪನ್‌ಪೇಟೆ ; ವಿಜೃಂಭಣೆಯಿಂದ ಜರುಗಿದ ಸಿದ್ದಿವಿನಾಯಕ ಸ್ವಾಮಿ ಶ್ರೀಮನ್ಮಹಾರಥೋತ್ಸವ

Written by malnadtimes.com

Updated on:

ರಿಪ್ಪನ್‌ಪೇಟೆ ; ಇಲ್ಲಿನ ಶ್ರೀವರಸಿದ್ದಿವಿನಾಯಕ ಸ್ವಾಮಿಯ ಶ್ರೀಮನ್ಮಹಾರಥೋತ್ಸವವು ಸಂಭ್ರಮ ಸಡಗರದೊಂದಿಗೆ ವಿಜೃಂಭಣೆಯೊಂದಿಗೆ ನೆರವೇರಿತು.

WhatsApp Group Join Now
Telegram Group Join Now
Instagram Group Join Now

ಇಂದು ಅಪರಾಹ್ನ 12:45ಕ್ಕೆ ಸಿದ್ದಿವಿನಾಯಕ ಸ್ವಾಮಿ ರಥವನ್ನೇರುತ್ತಿದ್ದಂತೆ ಭಕ್ತರ ಜಯಘೋಷಣೆ ಮುಗಿಲು ಮುಟ್ಟಿತು. ಕೋಣಂದೂರು ಬೃಹನ್ಮಠದ ಶ್ರೀಪತಿ ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮೀಜಿ ಮತ್ತು ನಿಟ್ಟೂರು ನಾರಾಯಣಗುರು ಮಠದ ರೇಣುಕಾನಂದ ಮಹಾಸ್ವಾಮೀಜಿ ಮತ್ತು ಕ್ಷೇತ್ರದ ಶಾಸಕ ಗೋಪಾಲಕೃಷ್ಣ ಬೇಳೂರು, ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಧನಲಕ್ಷ್ಮಿ, ಉಪಾಧ್ಯಕ್ಷ ಸುಧೀಂದ್ರ ಪೂಜಾರಿ, ದೇವಸ್ಥಾನ ಸಮಿತಿ ಅಧ್ಯಕ್ಷ ಈಶ್ವರಶೆಟ್ಟಿ ಇವರು ಹಾಜರಿದ್ದು ರಥೋತ್ಸವಕ್ಕೆ ಚಾಲನೆ ನೀಡಿದರು.

ಜಾತ್ರಾ ಮಹೋತ್ಸವವು ಜನರಲ್ಲಿನ ಶ್ರದ್ಧಾ ಭಕ್ತಿಯ ಪರಾಕಾಷ್ಟತೆಯೊಂದಿಗೆ ಬೇಡಿದ ವರ ಕರುಣಿಸುವ ವಿನಾಯಕ ಸ್ವಾಮಿ ಮತ್ತು ಜಗನ್ಮಾತೆ ಶ್ರೀ ಅನ್ನಪೂರ್ಣೇಶ್ವರಿ ಅಮ್ಮನವರ ದೇವರುಗಳ ದರ್ಶನಕ್ಕೆ ಸುಡುಬಿಸಿಲನ್ನು ಲೆಕ್ಕಿಸದೇ ಜನರು ರಥೋತ್ಸವದಲ್ಲಿ ಪಾಲ್ಗೊಂಡು ಅಕ್ಕಿ, ಬಾಳೆಹಣ್ಣು, ಕಾಳುಮೆಣಸು, ಉತ್ತುತ್ತೆಯನ್ನು ರಥದತ್ತ ಎಸೆಯುತ್ತಾ ಜಯಘೋಷಣೆ ಕೂಗಿದರು.

ರಥೋತ್ಸವವು ದೇವಸ್ಥಾನದಿಂದ ಹೊರಟು ವಿನಾಯಕ ವೃತ್ತದವರೆ ಚಲಿಸಿ ನಂತರ ದೇವಸ್ಥಾನದ ಬಳಿ ವಾಪಾಸ್ ತರುವುದರೊಂದಿಗೆ ನೆಲೆ ನಿಂತಿತು.

ಶಿವಮೊಗ್ಗದ ಆಗಮ ಪ್ರವೀಣ ವಸಂತಭಟ್ ಮತ್ತು ವೃಂದ ಹಾಗೂ ರಿಪ್ಪನ್‌ಪೇಟೆ ಗಣಪತಿ ದೇವಸ್ಥಾನದ ಪ್ರಧಾನ ಆರ್ಚಕರಾದ ಚಂದ್ರಶೇಖರಭಟ್, ಗುರುರಾಜಭಟ್, ಸಿದ್ದಿವಿನಾಯಕ ದೇವಸ್ಥಾನ ಧರ್ಮದರ್ಶಿಗಳು ಸೇವಾಸಮಿತಿಯ ಅಧ್ಯಕ್ಷರು ಮತ್ತು ಸದಸ್ಯರು ಪಾಲ್ಗೊಂಡಿದ್ದರು.

ಈ ರಥೋತ್ಸವದಲ್ಲಿ ಠೇವಣಿ ಸಂಗ್ರಹಕಾರರು ಮತ್ತು ವಿವಿಧ ಸಂಘ ಸಂಸ್ಥೆಯವರು ಮಜ್ಜಿಗೆ ಸೇವೆ ಮತ್ತು ನೀರಿನ ಸೌಲಭ್ಯವನ್ನು ನೀಡಿದರು. ನಂತರ ಸಾಮೂಹಿಕ ಅನ್ನಸಂತರ್ಪಣೆ ನೆರವೇರಿತು.

Leave a Comment