Ripponpete

ಪೂಜಾರಗೊಪ್ಪ ಶ್ರೀವೀರಭದ್ರಸ್ವಾಮಿ ದೇವಸ್ಥಾನದ ಗೋಪುರ ನಿರ್ಮಾಣ ಕಾಮಗಾರಿಗೆ ಶಂಕುಸ್ಥಾಪನೆ

ರಿಪ್ಪನ್‌ಪೇಟೆ ; ಹಣವಂತ ಎನಿಸಿಕೊಳ್ಳಲು ಕೆಲವು ಸಮಯದಲ್ಲಿ ಚೆನ್ನಾಗಿ ದುಡಿದರೆ ಸಾಧ್ಯವಾಗುವುದು. ಆದರೆ ಗುಣವಂತನೆಂದು ಎನಿಸಿಕೊಳ್ಳು ಜೀವನ ಪರ್ಯಂತವೂ ಸಜ್ಜನನಾಗಿದ್ದು ಸಾಧಿಸುತ್ತಲೇ ಇರಬೇಕು ಎಂದು ಮಳಲಿಮಠದ ಡಾ.ಗುರುನಾಭೂಷಣ ಶಿವಾಚಾರ್ಯ ಮಹಾಸ್ವಾಮೀಜಿ ಹೇಳಿದರು.

WhatsApp Group Join Now
Telegram Group Join Now
Instagram Group Join Now

ಮಸರೂರು ಪೂಜಾರಗೊಪ್ಪ ಶ್ರೀವೀರಭದ್ರಸ್ವಾಮಿ ದೇವಸ್ಥಾನದ ಗೋಪುರ ನಿರ್ಮಾಣ ಕಾಮಗಾರಿಗೆ ಶಂಕುಸ್ಥಾಪನೆ ಮತ್ತು ಶ್ರೀ ಸ್ವಾಮಿಗೆ ರುದ್ರಾಭಿಷೇಕ ಮತ್ತು ಅರ್ಚನೆ ಧರ್ಮ ಸಮಾರಂಭದ ದಿವ್ಯಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿ, ಜ್ಞಾನದ ಸ್ವರೂಪವೇ ಶಿಖರ. ಪರಿಪಕ್ವತೆಯೆ ಜ್ಞಾನದ ಸಂಕೇತ. ನಿತ್ಯದಲ್ಲಿ ಸತ್ಯ ಕಾಯಕ ನಿಷ್ಟೆಯಿಂದ ನಡೆದುಕೊಂಡಾಗ ಮಾತ್ರ ಗುಣವಂತನಾಗಲು ಸಾಧ್ಯವೆಂದ ಶ್ರೀಗಳು, ಅನ್ನ, ನೀರು ಮನುಷ್ಯನಿಗೆ ಹೇಗೆ ಮುಖ್ಯವೋ ಹಾಗೇ ಚಿನ್ನಕ್ಕಿಂತ ಅನ್ನ ಶ್ರೇಷ್ಟವಾಗಿದೆ. ಸಕಲ ಜೀವಾತ್ಮಕ್ಕೆ ಅವಶ್ಯವಾಗಿ ಆಹಾರ ಬೇಕಾಗಿದೆ ಎಂದರು.

ಕಲಿಯುಗದಲ್ಲಿ ಸಹ ಪವಾಡ ನಡೆಯುತ್ತದೆ ಗುರು ಪಾದೋದಕ ಪ್ರಸಾದ ಕಾರಣೀಭೂತ ಶಕ ಪುರುಷ ವೀರಭದ್ರನ ಭಕ್ತಿ ಶಕ್ತಿಯಾಗಿದ್ದಾನೆಂದರು.

ದೇವಸ್ಥಾನ ಸೇವಾ ಸಮಿತಿಯ ಅಧ್ಯಕ್ಷ ಪುಟ್ಟಸ್ವಾಮಿಗೌಡ ಕಗ್ಗಲಿ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ತಿಥಿಗಳಾಗಿ ಎಂ.ಬಿ.ಗಣೇಶಗೌಡ ಮಸರೂರು, ರುದ್ರಪ್ಪ ಮೂಗುಡ್ತಿ, ನಾಗೇಂದ್ರಪ್ಪ,
ಕಮಲಾಕ್ಷಪ್ಪಗೌಡ, ಗಂಗಾಧರ, ಚಂದ್ರಶೇಖರ, ಬಸವರಾಜ ಬೆನವಳ್ಳಿ, ಸ್ನೇಹ ವೀರೇಶ, ಶಶಿಗೌಡ ಕೋಣೆಹೊಸೂರು, ಮುರುಗೇಶಪ್ಪಗೌಡ ಮಸರೂರು ಭಾಗವಹಿಸಿ ಮಾತನಾಡಿದರು.

Malnad Times App ಡೌನ್‌ಲೋಡ್ ಮಾಡಿಶಿವಮೊಗ್ಗ ಮತ್ತು ಮಲೆನಾಡಿನ ಸುದ್ದಿಗಳನ್ನು ತಕ್ಷಣ ಪಡೆಯಿರಿ.
GET IT ONGoogle Play

ಮಹೇಶಮೂರ್ತಿ ಪ್ರವೀಣ್ ವೇದಘೋಷ ಮಾಡಿದರು. ಶಿವಪ್ರಕಾಶ ಪಾಟೀಲ್ ಕಗ್ಗಲಿ ಸ್ವಾಗತಿಸಿದರು. ಗಣೇಶ ಕೆಂಚನಾಲ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂಧ್ಯಾ ಗಿರೀಶ್ ಮಸರೂರು ವಂದಿಸಿದರು.

ಬೆಳಗ್ಗೆ ಬ್ರಾಹ್ಮಿ ಮುಹೂರ್ತದಲ್ಲಿ ಆಲವಳ್ಳಿ ವಿರಕ್ತಮಠದ ಮಹೇಶಮೂರ್ತಿ ಪೌರೋಹಿತ್ಯದಲ್ಲಿ ಶ್ರೀವೀರಭದ್ರಸ್ವಾಮಿಗೆ ರುದ್ರಾಭಿಷೇಕ ಮತ್ತು ಅರ್ಚನೆ ಕಾರ್ಯವು ಜರುಗಿತು ನಂತರ ಪ್ರಧಾನ ಅರ್ಚಕ ರಾಚಪ್ಪ ಮತ್ತು ಎಸ್. ವೀರೇಶ ಇವರು ವೀರಭದ್ರಸ್ವಾಮಿಗೆ ವಿಶೇಷ ಪೂಜೆ ಅಲಂಕಾರ ಪೂಜೆಯೊಂದಿಗೆ ಮಹಾಮಂಗಳಾರತಿ ತೀರ್ಥ ಪ್ರಸಾದ ವಿತರಣೆ ನೆರವೇರಿಸಿದರು. ಸಾಮೂಹಿಕ ಅನ್ನಸಂತರ್ಪಣೆ ಜರುಗಿತು.

ಮಾಹಿತಿ ಮತ್ತು ಮೂಲ: ಈ ವರದಿಯನ್ನು Malnad Times ಸಂಪಾದಕೀಯ ತಂಡವು ಲಭ್ಯ ಮಾಹಿತಿಯ ಆಧಾರದಲ್ಲಿ ಪರಿಶೀಲಿಸಿದೆ.

Mahesha Hindlemane

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್‌ಸೈಟ್‌ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 8 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್‌ಸೈಟ್‌ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ 'ಮಲ್ನಾಡ್ ಟೈಮ್ಸ್' ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ. ಇ-ಮೇಲ್ : [email protected]

error: Content is protected !!