ಹೊಸನಗರ ; ಕೋಡೂರು ಸರ್ಕಾರಿ ಪ್ರೌಢಶಾಲೆಯಲ್ಲಿ ಎಸ್.ಎಸ್.ಎಲ್.ಸಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ಅಮೂಲ್ಯ ಶೇ. 98 ರಷ್ಟು ಅಂಕ ಗಳಿಸಿದ್ದಾರೆ.
ಕೂಲಿ ಕಾರ್ಮಿಕರಾದ ಕೋಡೂರಿನ ರಾಘವೇಂದ್ರ ಮತ್ತು ಸುಮಿತ್ರಾ ದಂಪತಿಗಳ ಪುತ್ರಿ ಅಮೂಲ್ಯ. ಕೂಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಾ ತಮ್ಮ ಮಗಳನ್ನು ಕೋಡೂರು ಸರ್ಕಾರಿ ಪ್ರೌಢಶಾಲೆಗೆ ಸೇರಿಸಿದ್ದು ಶೇ. 98 ರಷ್ಟು (611/625) ಅಂಕ ಗಳಿಸುವ ಮೂಲಕ ತಂದೆ ತಾಯಿಯವರ ಶ್ರಮದ ಪ್ರೋತ್ಸಾಹಕ್ಕೆ ಸಾಕ್ಷಿಯಾಗಿ ಊರಿಗೆ ಕೀರ್ತಿ ತಂದಿದ್ದಾರೆ.
ಕನ್ನಡದಲ್ಲಿ 125ಕ್ಕೆ 125, ಇಂಗ್ಲೀಷ್‌ನಲ್ಲಿ 100ಕ್ಕೆ 96 ಅಂಕ, ಹಿಂದಿಯಲ್ಲಿ 100ಕ್ಕೆ 100 ಅಂಕ, ಗಣಿತದಲ್ಲಿ 100ಕ್ಕೆ 98 ಅಂಕ, ವಿಜ್ಞಾನದಲ್ಲಿ 100ಕ್ಕೆ 95 ಅಂಕ ಒಟ್ಟು 625ಕ್ಕೆ 611 ಅಂಕಗಳನ್ನು ಗಳಿಸಿದ್ದಾರೆ.
ಸುದ್ದಿ ತಿಳಿಯುತ್ತಿದ್ದಂತೆ ಹೊಸನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮತ್ತು ತಾಲ್ಲೂಕು ಪಂಚಾಯಿತ್ ಮಾಜಿ ಸದಸ್ಯ ಬಿ.ಜಿ.ಚಂದ್ರಮೌಳಿ ವಿದ್ಯಾರ್ಥಿನಿಯ ಮನೆಗೆ ಭೇಟಿ ನೀಡಿ ಸಾಧನೆ ಮೆರೆದ ವಿದ್ಯಾರ್ಥಿ ಅಮೂಲ್ಯಳನ್ನು ಸನ್ಮಾನಿಸಿ ಗೌರವಿಸಿ ಅಭಿನಂದಿಸಿದರು.
ಈ ಸಂದರ್ಭದಲ್ಲಿ ಕೋಡೂರು ಗ್ರಾಮ ಪಂಚಾಯಿತ್ ಉಪಾಧ್ಯಕ್ಷ ಸುಧಾಕರಗೌಡ, ರಂಜಿತ್, ವೀರಭದ್ರಪ್ಪಗೌಡ, ಕುಮಾರಸ್ವಾಮಿ, ಸುಬ್ಬಣ್ಣ ಕಾರಕ್ಕಿ, ಶಶಿಧರರಾವ್, ಕೋಡೂರು ಪತ್ತಿನ ಸಹಕಾರ ಸಂಘದ ಅಧ್ಯಕ್ಷ ರಾಜು ಹಾಜರಿದ್ದರು.
ರಿಪ್ಪನ್‌ಪೇಟೆ ಸರ್ಕಾರಿ ಪ್ರೌಢಶಾಲೆಗೆ ಶೇ. 71 ಫಲಿತಾಂಶ
ರಿಪ್ಪನ್‌ಪೇಟೆ ; ಇಲ್ಲಿನ ಸರ್ಕಾರಿ ಪ್ರೌಢಶಾಲೆಗೆ ಎಸ್ಎಸ್ಎಲ್ಸಿಯಲ್ಲಿ ಶೇ. 71 ರಷ್ಟು ಫಲಿತಾಂಶ ಬಂದಿದೆ ಎಂದು ಉಪಪ್ರಾಚಾರ್ಯ ಕೆಸವಿನಮನೆ ರತ್ನಾಕರ್ ತಿಳಿಸಿದ್ದಾರೆ.
ಪರೀಕ್ಷೆಗೆ 207 ವಿದ್ಯಾರ್ಥಿಗಳು ಕುಳಿತ್ತಿದ್ದು 146 ವಿದ್ಯಾರ್ಥಿಗಳು ತೇರ್ಗಡೆಯಾಗುವ ಮೂಲಕ ಶೇ. 71 ರಷ್ಟು ಫಲಿತಾಂಶ ಬಂದಿದೆ ಎಂದರು.
ಕಲ್ಲುಹಳ್ಳ ಮಲೆನಾಡ ಪ್ರೌಢಶಾಲೆಗೆ ಶೇ. 95 ಫಲಿತಾಂಶ
ರಿಪ್ಪನ್‌ಪೇಟೆ ; ಬೆಳ್ಳೂರು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಕಲ್ಲಹಳ್ಳ ಮಲೆನಾಡು ಪ್ರೌಢ ಶಾಲೆಗೆ ಎಸ್ಎಸ್ಎಲ್ಸಿಯಲ್ಲಿ ಶೇ. 95 ಫಲಿತಾಂಶ ಬಂದಿದೆ ಎಂದು ಶಾಲಾ ಮುಖ್ಯೋಪಾಧ್ಯಾಯರು ತಿಳಿಸಿದ್ದಾರೆ.
21 ವಿದ್ಯಾರ್ಥಿಗಳು ಪರೀಕ್ಷಗೆ ಹಾಜರಾಗಿದ್ದು 20 ವಿದ್ಯಾರ್ಥಿಗಳು ಉತ್ತೀರ್ಣಾರಾಗುವುದರೊಂದಿಗೆ ಶೇ. 95 ಫಲಿತಾಂಶ ಬಂದಿದೆ. ಗ್ರಾಮೀಣ ಪ್ರದೇಶದ ಮಕ್ಕಳ ಈ ಸಾಧನೆಗೆ ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷ ರಾವಣಕಟ್ಟೆ ನಾಗಪ್ಪ ಇನ್ನಿತರ ಪದಾಧಿಕಾರಿಗಳು, ಶಿಕ್ಷಕರು ಹಾಗೂ ಪೋಷಕರು ಅಭಿನಂದಿಸಿದ್ದಾರೆ.