ಹೊಸನಗರ ; ಈ ಬಾರಿಯ ಎಸ್‌ಎಸ್‌ಎಲ್‌ಸಿ ಪರೀಕ್ಷಾ ಫಲಿತಾಂಶ ಪ್ರಕಟಗೊಂಡಿದ್ದು ತಾಲೂಕಿನ ಪಟ್ಟಣದ ಶ್ರೀ ರಾಮಕೃಷ್ಣ ವಿದ್ಯಾಸಂಸ್ಥೆಯ ವಿದ್ಯಾರ್ಥಿ ಹೆಚ್.ಡಿ.ಪ್ರಣವ್ 625ಕ್ಕೆ 622 ಅಂಕ ಗಳಿಸುವ ಮೂಲಕ ರಾಜ್ಯಕ್ಕೆ 4ನೇ ರ‍್ಯಾಂಕ್ ಗಳಿಸಿದ್ದಾನೆ.
ಈತ ಮೇಲಿನಬೆಸಿಗೆ ಗ್ರಾಮದ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ಡಿ.ಧರ್ಮಪ್ಪ ಹಾಗೂ ಶಿಕ್ಷಕಿ ಸಾವಿತ್ರಿ ದಂಪತಿಗಳ ಪುತ್ರ.