ಅಮ್ಮನಘಟ್ಟ ಶ್ರೀ ಜೇನುಕಲ್ಲಮ್ಮ ದೇಗುಲಕ್ಕೆ ದೇಣಿಗೆ ನೀಡಿದ ಕುಮಾರ್ ಮಂಡಾನಿ | ಹೋಲಿ ರಿಡೀಮರ್ ಶಾಲೆಗೆ ಶೇ. 100 ಫಲಿತಾಂಶ

Written by malnadtimes.com

Published on:

ಹೊಸನಗರ ; ಇತಿಹಾಸ ಪ್ರಸಿದ್ಧ ತಾಲೂಕಿನ ಕೋಡೂರು ಸಮೀಪದ ಅಮ್ಮನಘಟ್ಟ ಶ್ರೀ ಜೇನುಕಲ್ಲಮ್ಮ ದೇವರ ನೂತನ ಶಿಲಾಮಯ ದೇವಸ್ಥಾನ ನಿರ್ಮಾಣ ಕಾರ್ಯ ಭರದಿಂದ ಸಾಗಿದ್ದು, ರಾಜ್ಯ ಕೆಜಿಐಡಿ ಇಲಾಖೆ ನಿವೃತ್ತ ಉಪ ನಿರ್ದೇಶಕ ಕುಮಾರ್ ಮಂಡಾನಿ ಅವರು ತಮ್ಮ ತಂದೆ ದಿ.‌ ಶೇಷನಾಯ್ಕರ ಸವಿನೆನಪಿಗಾಗಿ 50 ಸಾವಿರ ರೂ. ದೇಣಿಗೆ ಹಣವನ್ನು ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ, ಮಾಜಿ ಶಾಸಕ ಬಿ.ಸ್ವಾಮಿರಾವ್ ಅವರಿಗೆ ಹಸ್ತಾಂತರಿಸಿದರು.

WhatsApp Group Join Now
Telegram Group Join Now
Instagram Group Join Now

ಈ ವೇಳೆ ಸಮಿತಿ ಸದಸ್ಯರಾದ ಸದಸ್ಯರಾದ ಹರತಾಳು ರಾಮಚಂದ್ರ,ಸುಧೀರ್ ಭಟ್, ಕೋಡೂರು ವಿಜೇಂದ್ರರಾವ್, ಅರ್ಚಕ ಭಾಸ್ಕರ್ ಜೋಯಿಸ್, ವಕೀಲ ಗುರುಮೂರ್ತಿ ಮಂಡಾನಿ ಇದ್ದರು.


ಹೊಸನಗರ ಹೋಲಿ ರಿಡೀಮರ್ ಶಾಲೆಗೆ ಎಸ್‌ಎಸ್‌ಎಲ್‌ಸಿಯಲ್ಲಿ ಶೇ. 100 ಫಲಿತಾಂಶ

ಹೊಸನಗರ ; ಇಲ್ಲಿನ ಪ್ರತಿಷ್ಠಿತ ಖಾಸಗಿ ಶಾಲೆಗಳಲ್ಲಿ ಒಂದಾಗಿರುವ ಹೋಲಿ ರಿಡೀಮರ್ ಪ್ರೌಢ ಶಾಲೆಗೆ 2024-25ನೇ ಸಾಲಿನಲ್ಲಿ ಎಸ್‌ಎಸ್‌ಎಲ್‌ಸಿಯಲ್ಲಿ ಶೇ. 100 ಫಲಿತಾಂಶ ಬಂದಿದೆ.

625ಕ್ಕೆ 618 ಅಂಕ ಪಡೆದ ಭುವನವರ್ಧಿ ಜಿ.

ಈ ವರ್ಷ ಎಸ್‌ಎಸ್‌ಎಲ್‌ಸಿಯಲ್ಲಿ 51 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು ಅದರಲ್ಲಿ 28 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್ ಪಡೆದಿದ್ದು 23 ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ಉತೀರ್ಣರಾಗಿದ್ದಾರೆ.

625ಕ್ಕೆ 615ಅಂಕ ಪಡೆದಿರುವ ನಿಧಿ.

ಪರೀಕ್ಷೆ ಬರೆದ 51 ವಿದ್ಯಾರ್ಥಿಗಳು ಉತ್ತೀರ್ಣರಾಗಿ ಶಾಲೆಗೆ ಕೀರ್ತಿ ತಂದಿದ್ದು ಶಾಲೆಗೆ ಕೀರ್ತಿ ತರಲು ಸಹಕರಿಸಿದ ಶಾಲೆಯ ಉಪನ್ಯಾಸಕರ ವೃಂದಕ್ಕೆ ಹಾಗೂ ವಿದ್ಯಾರ್ಥಿಗಳಿಗೆ ಶಾಲೆಯ ಮುಖ್ಯ ಶಿಕ್ಷಕಿಯಾದ ವಿಲ್ಮಾಪಿಂಟೋ ಅಭಿನಂದಿಸಿದ್ದಾರೆ‌.

Leave a Comment