ರಿಪ್ಪನ್‌ಪೇಟೆ ; ಪವಿತ್ರ ರಂಜಾನ್ ಹಬ್ಬವನ್ನು ಮುಸ್ಲಿಂ ಭಾಂದವರು ಸಂಭ್ರಮ ಸಡಗರದೊಂದಿಗೆ ಆಚರಿಸಿದರು.
ಗಾಳಿಬೈಲು ಗ್ರಾಮದ ಮತ್ತು ರಿಪ್ಪನ್‌ಪೇಟೆಯ ಹೊಸನಗರ ರಸ್ತೆಯ ತಿಲಕ್ ನಗರ ಮಸೀದಿಯಿಂದ ಮುಸ್ಲಿಂ ಧರ್ಮಗುರುಗಳ ನೇತೃತ್ವದಲ್ಲಿ ಮೆರವಣಿಗೆ ಹೊರಟು ಸಾಗರ ರಸ್ತೆಯಲ್ಲಿನ ಈದ್ಗಾ ಮೈದಾನದಲ್ಲಿ ಮುಸ್ಲಿಂ ಸಮುದಾಯದವರು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿ ನಂತರ ಪರಸ್ಪರ ಹಬ್ಬದ ಶುಭಾಶಯವನ್ನು ವಿನಮಯ ಮಾಡಿಕೊಂಡರು.
ರಿಪ್ಪನ್‌ಪೇಟೆ ಜುಮ್ಮಾ ಮಸೀದಿಯ ಧರ್ಮಗುರುಗಳು, ಮೆಕ್ಕಾ ಮಸೀದಿಯ ಧರ್ಮಗುರುಗಳು ಗಾಳಿಬೈಲು ಮಸೀದಿಯ ಧರ್ಮಗುರುಗಳು ಮೆರವಣಿಗೆಯಲ್ಲಿ ಪಾಲ್ಗೊಂಡು ಮಹಮದ್ ಪೈಗಂಬರ್ ಜೀವನದ ಅದರ್ಶಗಳನ್ನು ಇಂದಿನ ಯುವ ಸಮೂಹ ಪಾಲಿಸುವಂತಾಗ ಬೇಕು ಎಂದರು.
ಈ ಸಂದರ್ಭದಲ್ಲಿ ಜುಮ್ಮಾ ಮಸೀದಿ ಅಧ್ಯಕ್ಷ ಹಸನಬ್, ಮುಸ್ಲಿಂ ಸಮುದಾಯದ ಹಿರಿಯರಾದ ಆರ್.ಎ.ಚಾಬುಸಾಬ್, ಅಮೀರ್ ಹಂಜಾ, ಆಸಿಫ್‌ಭಾಷಾ, ಉಬೇದುಲ್ಲಾ ಷರೀಫ್, ಮಹಮ್ಮದ್ ಷರೀಫ್, ಖಲಿಲ್ ಷರೀಫ್, ಆರ್.ಎಸ್.ಶಂಶುದ್ದೀನ್, ಸಮಾಜದ ಇನ್ನಿತರ ಹಿರಿಯರು ಪಾಲ್ಗೊಂಡಿದ್ದರು.