Ripponpete

ಗಾಳಿಬೈಲು – ರಿಪ್ಪನ್‌ಪೇಟೆಯಲ್ಲಿ ಸಂಭ್ರಮದ ರಂಜಾನ್ ಹಬ್ಬ ಆಚರಣೆ

ರಿಪ್ಪನ್‌ಪೇಟೆ ; ಪವಿತ್ರ ರಂಜಾನ್ ಹಬ್ಬವನ್ನು ಮುಸ್ಲಿಂ ಭಾಂದವರು ಸಂಭ್ರಮ ಸಡಗರದೊಂದಿಗೆ ಆಚರಿಸಿದರು.

WhatsApp Group Join Now
Telegram Group Join Now
Instagram Group Join Now

ಗಾಳಿಬೈಲು ಗ್ರಾಮದ ಮತ್ತು ರಿಪ್ಪನ್‌ಪೇಟೆಯ ಹೊಸನಗರ ರಸ್ತೆಯ ತಿಲಕ್ ನಗರ ಮಸೀದಿಯಿಂದ ಮುಸ್ಲಿಂ ಧರ್ಮಗುರುಗಳ ನೇತೃತ್ವದಲ್ಲಿ ಮೆರವಣಿಗೆ ಹೊರಟು ಸಾಗರ ರಸ್ತೆಯಲ್ಲಿನ ಈದ್ಗಾ ಮೈದಾನದಲ್ಲಿ ಮುಸ್ಲಿಂ ಸಮುದಾಯದವರು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿ ನಂತರ ಪರಸ್ಪರ ಹಬ್ಬದ ಶುಭಾಶಯವನ್ನು ವಿನಮಯ ಮಾಡಿಕೊಂಡರು.

ರಿಪ್ಪನ್‌ಪೇಟೆ ಜುಮ್ಮಾ ಮಸೀದಿಯ ಧರ್ಮಗುರುಗಳು, ಮೆಕ್ಕಾ ಮಸೀದಿಯ ಧರ್ಮಗುರುಗಳು ಗಾಳಿಬೈಲು ಮಸೀದಿಯ ಧರ್ಮಗುರುಗಳು ಮೆರವಣಿಗೆಯಲ್ಲಿ ಪಾಲ್ಗೊಂಡು ಮಹಮದ್ ಪೈಗಂಬರ್ ಜೀವನದ ಅದರ್ಶಗಳನ್ನು ಇಂದಿನ ಯುವ ಸಮೂಹ ಪಾಲಿಸುವಂತಾಗ ಬೇಕು ಎಂದರು.

Malnad Times App ಡೌನ್‌ಲೋಡ್ ಮಾಡಿಶಿವಮೊಗ್ಗ ಮತ್ತು ಮಲೆನಾಡಿನ ಸುದ್ದಿಗಳನ್ನು ತಕ್ಷಣ ಪಡೆಯಿರಿ.
GET IT ONGoogle Play

ಈ ಸಂದರ್ಭದಲ್ಲಿ ಜುಮ್ಮಾ ಮಸೀದಿ ಅಧ್ಯಕ್ಷ ಹಸನಬ್, ಮುಸ್ಲಿಂ ಸಮುದಾಯದ ಹಿರಿಯರಾದ ಆರ್.ಎ.ಚಾಬುಸಾಬ್, ಅಮೀರ್ ಹಂಜಾ, ಆಸಿಫ್‌ಭಾಷಾ, ಉಬೇದುಲ್ಲಾ ಷರೀಫ್, ಮಹಮ್ಮದ್ ಷರೀಫ್, ಖಲಿಲ್ ಷರೀಫ್, ಆರ್.ಎಸ್.ಶಂಶುದ್ದೀನ್, ಸಮಾಜದ ಇನ್ನಿತರ ಹಿರಿಯರು ಪಾಲ್ಗೊಂಡಿದ್ದರು.

ಮಾಹಿತಿ ಮತ್ತು ಮೂಲ: ಈ ವರದಿಯನ್ನು Malnad Times ಸಂಪಾದಕೀಯ ತಂಡವು ಲಭ್ಯ ಮಾಹಿತಿಯ ಆಧಾರದಲ್ಲಿ ಪರಿಶೀಲಿಸಿದೆ.

Mahesha Hindlemane

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್‌ಸೈಟ್‌ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 8 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್‌ಸೈಟ್‌ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ 'ಮಲ್ನಾಡ್ ಟೈಮ್ಸ್' ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ. ಇ-ಮೇಲ್ : [email protected]

error: Content is protected !!