ಅಪರಾಧ ಸುದ್ದಿ

ಪ್ರೀತಿ ವಿಚಾರಕ್ಕೆ ಗಲಾಟೆ ; ಅಪ್ರಾಪ್ತನ ತಲೆಯಲ್ಲೇ ಸಿಕ್ಕಿಕೊಂಡ ಮಚ್ಚು !

ಶಿವಮೊಗ್ಗ ; ಪ್ರೀತಿ ವಿಚಾರಕ್ಕೆ ಶುರುವಾದ ಜಗಳವೊಂದು ಕೊಲೆ ಯತ್ನದಲ್ಲಿ ಅಂತ್ಯವಾಗಿದ್ದು, 17 ವರ್ಷದ ಅಪ್ರಾಪ್ತ ಯುವಕನ ತಲೆಯನ್ನ ಮಚ್ಚಿನಿಂದ ಸೀಳಿ ವಿಕೃತಿ ಮೆರೆಯಲಾಗಿದ್ದು ಈ ಘಟನೆಯಲ್ಲಿ ತಲೆಯಲ್ಲೇ ಮಚ್ಚು ಸಿಲುಕಿಕೊಂಡ ಸ್ಥಿತಿಯಲ್ಲಿ ಯುವಕ ಆಸ್ಪತ್ರೆಗೆ ದಾಖಲಾಗಿದ್ದಾನೆ.

WhatsApp Group Join Now
Telegram Group Join Now
Instagram Group Join Now

ಏನಿದು ಘಟನೆ ?

ಶಿವಮೊಗ್ಗದ ವಾದಿ ಎ ಹುದಾ ಬಡಾವಣೆಯಲ್ಲಿ ಲವ್​​ ವಿಚಾರಕ್ಕೆ ಸಂಬಂಧಿಸಿದಂತೆ ನಿನ್ನೆ ರಾತ್ರಿ ಭೀಕರ ಘಟನೆಯೊಂದು ನಡೆದಿದೆ. ಆರೋಪಿ ಸೊಹೇಲ್ ಎಂಬಾತನಿಗೆ ಯುವತಿಯೊಬ್ಬಳ ಜೊತೆ ಮದುವೆ ನಿಶ್ಚಯವಾಗಿತ್ತು. ಆದರೆ, ತಾನು ಮದುವೆಯಾಗಲಿರುವ ಯುವತಿಯನ್ನು 17 ವರ್ಷದ ಅಪ್ರಾಪ್ತ ಯುವಕ ಪ್ರೀತಿಸುತ್ತಿದ್ದಾನೆ ಮತ್ತು ಆಕೆಯ ಸಂಪರ್ಕದಲ್ಲಿದ್ದಾನೆ ಎಂಬ ವಿಷಯ ಸೊಹೇಲ್​ಗೆ ತಿಳಿದು ಕೆಂಡಾಮಂಡಲವಾಗಿದ್ದ. ಇದೇ ಸೇಡಿನಿಂದ ಯುವಕನನ್ನು ಮುಗಿಸಲು ಸೊಹೇಲ್ ಸಂಚು ರೂಪಿಸಿದ್ದ.

ತಲೆಯಲ್ಲೇ ಸಿಕ್ಕಿಕೊಂಡ ಮಚ್ಚು !

ನಿನ್ನೆ ರಾತ್ರಿ ಸೊಹೇಲ್ ತನ್ನ ಐವರು ಸಹಚರರೊಂದಿಗೆ ಯುವಕನ ಮನೆ ಬಳಿ ಹೊಂಚು ಹಾಕಿ ಕುಳಿತ್ತಿದ್ದ. ಯುವಕ ಕಾಣಿಸಿಕೊಳ್ಳುತ್ತಿದ್ದಂತೆ ಏಕಾಏಕಿ ಮಾರಕಾಸ್ತ್ರಗಳಿಂದ ದಾಳಿ ಮಾಡಿದ್ದಾರೆ. ದಾಳಿಯ ತೀವ್ರತೆ ಎಷ್ಟಿತ್ತೆಂದರೆ, ಮಚ್ಚಿನಿಂದ ತಲೆಗೆ ಹೊಡೆದಾಗ ಆ ಮಚ್ಚು ತಲೆಯ ಒಳಗೇ ಸಿಲುಕಿಕೊಂಡಿದೆ. ನನ್ನವಳ ತಂಟೆಗೆ ಬಂದರೆ ಇದೇ ಗತಿ ಎಂಬಂತೆ ಮಚ್ಚನ್ನು ತಲೆಯಲ್ಲೇ ಬಿಟ್ಟು ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ.

Malnad Times App ಡೌನ್‌ಲೋಡ್ ಮಾಡಿಶಿವಮೊಗ್ಗ ಮತ್ತು ಮಲೆನಾಡಿನ ಸುದ್ದಿಗಳನ್ನು ತಕ್ಷಣ ಪಡೆಯಿರಿ.
GET IT ONGoogle Play

ಹಿಂದೆ-ಮುಂದೆ ನೋಡದೆ ಸೊಹೇಲ್​​ 17 ವರ್ಷದ ಯುವಕನ ಮೇಲೆ ಡೆಡ್ಲಿ ಅಟ್ಯಾಕ್ ಮಾಡಿದ್ದಾನೆ. ಇದರಿಂದ ಆತನ ಸ್ಥಿತಿ ಗಂಭೀರವಾಗಿದೆ. ವೈದ್ಯರು ಹರಸಾಹಸ ಪಟ್ಟು ತಲೆಯಲ್ಲಿದ್ದ ಮಚ್ಚನ್ನು ಹೊರ ತೆಗೆದಿದ್ದಾರೆ. ಸದ್ಯ ಯುವಕ ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾನೆ. ಈ ಘಟನೆಯಿಂದ ವಾದಿ ಎ ಹುದಾ ಬಡಾವಣೆ ಮತ್ತು ನಗರದ ಜನರು ಬೆಚ್ಚಿಬಿದ್ದಿದ್ದಾರೆ. ತುಂಗಾ ನಗರ ಪೊಲೀಸರು ಮರ್ಡರ್ ಕೇಸ್ ದಾಖಲಿಸಿಕೊಂಡು ತನಿಖೆಗೆ ಮುಂದಾಗಿದ್ದಾರೆ.

ಘಟನೆಯಲ್ಲಿ ಈಗಾಗಲೇ ಕೆಲವರನ್ನು ವಶಕ್ಕೆ ಕೂಡ ಪಡೆದುಕೊಂಡಿದ್ದಾರೆ. ಇನ್ನು ನಾಪತ್ತೆಯಾದ ಆರೋಪಿಗಳ ಪತ್ತೆಗೆ ಪೊಲೀಸರು ಬಲೆಬೀಸಿದ್ದಾರೆ.

ಮಾಹಿತಿ ಮತ್ತು ಮೂಲ: ಈ ವರದಿಯನ್ನು Malnad Times ಸಂಪಾದಕೀಯ ತಂಡವು ಲಭ್ಯ ಮಾಹಿತಿಯ ಆಧಾರದಲ್ಲಿ ಪರಿಶೀಲಿಸಿದೆ.

Mahesha Hindlemane

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್‌ಸೈಟ್‌ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 8 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್‌ಸೈಟ್‌ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ 'ಮಲ್ನಾಡ್ ಟೈಮ್ಸ್' ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ. ಇ-ಮೇಲ್ : [email protected]