ತೀರ್ಥಹಳ್ಳಿ ; ಹೊಸ ವರ್ಷ ಯುಗಾದಿ (Ugadi) ಹಬ್ಬದಂದೇ ಜಲ ಗಂಡಾಂತರ ಸಂಭವಿಸಿದ್ದು ತುಂಗಾ ನದಿಯಲ್ಲಿ ಈಜಲು ತೆರಳಿದ್ದ ಯುವಕ ಸಾವನ್ನಪ್ಪಿದ ಘಟನೆ ತೀರ್ಥಹಳ್ಳಿಯಲ್ಲಿ ನಡೆದಿದೆ.
ಕಿರಣ್ (20) ಮೃತಪಟ್ಟ ದುರ್ದೈವಿ. ಜಿಗಳಗೊಡು ಸಮೀಪದ ಕಿರಣ್ ಸೇರಿದಂತೆ ನಾಲ್ವರು ಯುವಕರು ರಾಮೇಶ್ವರ ದೇವಸ್ಥಾನದ ಹಿಂಭಾಗ ತುಂಗಾ ನದಿಯಲ್ಲಿ ಈಜಲು ತೆರಳಿದ್ದಾರೆ. ಈಜು ಬಾರದೆ ಕಿರಣ್ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾನೆ.

ಸ್ಥಳೀಯರ ಸಹಾಯದಿಂದ ಮೃತದೇಹವನ್ನು ಹೊರತೆಗೆಯಲಾಗಿದ್ದು ತೀರ್ಥಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.