ಪುರೋಹಿತರನ್ನು ಕರೆಯಿಸಿ ಲಕ್ಷ್ಮೀ ಪೂಜೆ ನಡೆಸಿ ಸೌಹಾರ್ದತೆ ಸಂದೇಶ ನೀಡಿದ ಮುಸ್ಲಿಂ ಯುವಕ !

Written by malnadtimes.com

Published on:

RIPPONPETE ; ಯುವಕ ಹಿಂದೂಗಳ ಪವಿತ್ರ ದೀಪಾವಳಿ ಹಬ್ಬದ ಪ್ರಯುಕ್ತ ಹಿಂದೂ ಸಾಂಪ್ರದಾಯದಂತೆ ಲಕ್ಷ್ಮೀ ಪೂಜೆ ನಡೆಸುವ ಮೂಲಕ ಮುಸ್ಲಿಂ ಯುವಕನೊಬ್ಬ ಸೌಹಾರ್ದತೆ ಸಂದೇಶ ನೀಡಿದ್ದಾರೆ.

WhatsApp Group Join Now
Telegram Group Join Now
Instagram Group Join Now

ಹೌದು, ಸೌಹಾರ್ದತೆ ಸಾರುವ ಉದ್ದೇಶದಿಂದ ಮುಸ್ಲಿಮರ ಹಬ್ಬಗಳಲ್ಲಿ ಹಿಂದೂಗಳು, ಹಿಂದೂಗಳ ಹಬ್ಬವನ್ನು ಮುಸ್ಲಿಮರ ಆಚರಿಸುವುದನ್ನು ನೋಡುತ್ತೇವೆ. ಅಂತಹದ್ದೇ ಘಟನೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ರಿಪ್ಪನ್‌ಪೇಟೆಯ ವಿನಾಯಕ ವೃತ್ತದಲ್ಲಿರುವ ತನ್ವಿ ಮೊಬೈಲ್ ಅಂಗಡಿ ಮಾಲೀಕ ತನ್ವಿ ಅರಸಾಳು ಎಂಬ ಯುವಕ ಲಕ್ಷ್ಮೀ ಪೂಜೆ ಮಾಡಿದ್ದಾರೆ. ಅಂದಹಾಗೆ ಈ ರೀತಿ ಹಿಂದೂಗಳ ಹಬ್ಬ ಮಾಡುತ್ತಿರುವುದು ಇದೇ ಮೊದಲಲ್ಲ, ಕಳೆದ 5 ವರ್ಷಗಳಿಂದಲೂ ಪ್ರತಿವರ್ಷ ದೀಪಾವಳಿ ಸಮಯದಲ್ಲಿ ಲಕ್ಷ್ಮೀ ಪೂಜೆ ನಡೆಸಿಕೊಂಡು ಬಂದಿದ್ದಾರೆ.

ಹಲವು ವರ್ಷಗಳಿಂದ ತನ್ವಿ ಮೊಬೈಲ್ ವರ್ಲ್ಡ್ ಎಂಬ ಹೆಸರಿನಲ್ಲಿ ಮೊಬೈಲ್ ಮಾರಾಟ ಬ್ಯುಸಿನೆಸ್ ಮಾಡುತ್ತಿರುವ ಈ ಯುವಕ. ಪ್ರತಿ ವರ್ಷದಂತೆ ಈ ಬಾರಿಯೂ ದೀಪಾವಳಿಗೆ ಹಿಂದೂ ಸಂಪ್ರದಾಯದಂತೆ ಕಳಸ ಇರಿಸಿ, ಹಣ್ಣು-ಕಾಯಿ ನೈವೇದ್ಯ ಅರ್ಪಿಸುವ ಮೂಲಕ ಪೂಜಾ ಕಾರ್ಯ ನೆರವೇರಿಸಿದ್ದಾರೆ.

ದೀಪಾವಳಿ ಹಬ್ಬದ ಪ್ರಯುಕ್ತ ಮೊಬೈಲ್ ಅಂಗಡಿ ಸಿಂಗರಿಸಿ, ಪುರೋಹಿತರಾದ ಕೋಡೂರಿನ ಪ್ರಮೋದ್ ಜೋಯಿಸ್‌ರನ್ನ ಕರೆತಂದು ಪೂಜೆ ಮಾಡಿಸಿರುವ ಯುವಕ. ಈ ವೇಳೆ ಆತನ ಮುಸ್ಲಿಂ ಸ್ನೇಹಿತರು ಸಾಥ್ ನೀಡಿರುವುದು ವಿಶೇಷವಾಗಿದೆ.

ಅದೇ ರೀತಿ ಇಲ್ಲಿ ಮುಸ್ಲಿಂ ಸಂಪ್ರದಾಯದಾಯಂತೆ ಕೂಡ ಧರ್ಮಗುರುಗಳಿಂದಲೂ ಪೂಜೆ ನೆರವೇರಿಸಲಾಗಿದೆ.

ಹಬ್ಬಗಳು ಸಂಬಂಧಗಳನ್ನು ಗಟ್ಟಿಗೊಳಸಿಬೇಕು. ಜಾತಿ- ಧರ್ಮ ನೆಪ ಮಾತ್ರ. ಎಲ್ಲರೂ ಒಗ್ಗಟ್ಟಿನಿಂದ ಕೂಡಿ ಹಬ್ಬಗಳನ್ನು ಆಚರಿಸೋಣ. ಸೌಹಾರ್ಧತೆ ಸಾರೋಣ.
– ತನ್ವಿ ಅರಸಾಳು, ರಿಪ್ಪನ್‌ಪೇಟೆ

Leave a Comment