RIPPONPETE ; ಇಲ್ಲಿನ ಹೆಬ್ಬಾರ್ ಪಿಕಲ್ಸ್ ನ ಮಲೆನಾಡಿನ ಅಪ್ಪೆಮಿಡಿ ಉಪ್ಪಿನಕಾಯಿ ಖರೀದಿಗಾಗಿ ಚಿತ್ರನಟಿ ಜಯಮಾಲ ಭೇಟಿ ನೀಡಿ ಆಕರ್ಷಿತರಾದರು.
ಮಾವಿನಮಿಡಿ ಉಪ್ಪಿನಕಾಯಿ ಎಂದರೆ ಸಾಕು ಎಂತವರ ಬಾಯಲ್ಲಿ ನೀರು ಬರುತ್ತದೆ. ಇನ್ನೂ ರಿಪ್ಪನ್‌ಪೇಟೆಯ ಹೊಳೆಸಾಲಿನ ಜೀರಿಗೆ ಅಪ್ಪೆ ಮಾವಿನಮಿಡಿ ಉಪ್ಪಿನಕಾಯಿ ದೇಶ-ವಿದೇಶದಲ್ಲಿ ಪ್ರಖ್ಯಾತಿ ಪಡೆದಿದ್ದು ಜನವರಿ, ಫೆಬ್ರವರಿಯಲ್ಲಿ ಮಾವಿನ ಮರಗಳು ಚಿಗುರಿ ಕಾಯಿ ಬಿಡುವ ಸಂದರ್ಭದಲ್ಲಿ ಈ ಭಾಗದ ಮಾವಿನ ಮಿಡಿ ಖರೀದಿಗಾಗಿ ದೂರದೂರುಗಳಿಂದ ಜನಸಾಗರವೇ ಹರಿದು ಬರುತ್ತದೆ, ಅಷ್ಟು ಪ್ರಖ್ಯಾತಿ ಪಡೆದಿರುವ ಉಪ್ಪಿನಕಾಯಿಯ ಅಂಗಡಿಯಲ್ಲಿ ವರ್ಷದ ಎಲ್ಲ ದಿನಗಳಲ್ಲೂ ಮಾವಿನಕಾಯಿ ಉಪ್ಪಿನಕಾಯಿ ಸೇರಿದಂತೆ ಬಗೆಬಗೆಯ ಉಪ್ಪಿನಕಾಯಿಗಳಾದ ನಿಂಬೆಹಣ್ಣು, ದೊಡ್ಲಿಕಾಯಿ, ನೆಲ್ಲಿಕಾಯಿ, ತರಹವಾರಿ ಉಪ್ಪಿನಕಾಯಿ ಮಾರಾಟವಾಗುತ್ತಿದ್ದು ನಿತ್ಯ ಸಹಸ್ರ ಸಂಖ್ಯೆಯಲ್ಲಿ ಜನಖರೀದಿಗೆ ಬಂದು ಹೋಗುತ್ತಾರೆಂದು ಹೆಬ್ಬಾರ್ ಪಿಕಲ್ಸ್ ಮಾಲೀಕ ಸುಧೀಂದ್ರ ಹೆಬ್ಬಾರ್ ವಿವರಿಸಿದರು.
ಇಲ್ಲಿನ ಆರ್.ಆರ್.ಪಿಕಲ್ಸ್ ಮತ್ತು ಹೆಬ್ಬಾರ್ ಪಿಕಲ್ಸ್ ಮಾರಾಟ ಕೇಂದ್ರದಲ್ಲಿ ಸುಮಾರು 10-12 ಜನ ನಿರುದ್ಯೋಗಿಗಳಿಗೆ ಉದ್ಯೋಗ ಕಲ್ಪಿಸುವ ಮೂಲಕ ಜನಮೆಚ್ಚುಗೆಗೆ ಕಾರಣವಾಗಿದ್ದಾರೆ.
ಒಟ್ಟಾರೆಯಾಗಿ ರಿಪ್ಪನ್‌ಪೇಟೆಯ ಮಲೆನಾಡಿನ ಹೊಳೆಸಾಲಿನ ಅಪ್ಪೆಮಿಡಿ ಮಾವಿನ ಕಾಯಿ ಉಪ್ಪಿನಕಾಯಿ ಅಂತರಾಷ್ಟ್ರೀಯ ಮಟ್ಟದಲ್ಲಿ ಪ್ರಖ್ಯಾತಿ ಹೊಂದಿದ್ದು ನಮ್ಮ ರಾಜ್ಯದ ರಾಜಧಾನಿ ಸೇರಿದಂತೆ ಇತರ ಜಿಲ್ಲೆಗಳಿಂದ ಬೇಡಿಕೆ ಬರುತ್ತಿದೆ.
ಜನಪ್ರಿಯ ಚಿತ್ರನಟಿ ಜಯಮಾಲ ಹೆಬ್ಬಾರ್ ಪಿಕಲ್ಸ್ಗೆ ಭೇಟಿ ನೀಡಿ ಉಪ್ಪಿನಕಾಯಿ ಖರೀದಿ ಸಂದರ್ಭದಲ್ಲಿ ಮಾಲೀಕ ಸುಧೀಂದ್ರ ಹೆಬ್ಬಾರ್ ದೀಪಾ ಎಸ್.ಹೆಬ್ಬಾರ್ ಹಾಜರಿದ್ದರು.