ವಿನಃ ಕಾರಣ ಆರೋಪಕ್ಕೆ ಹೆದರಲ್ಲ – ಎಲ್ಲಾ ರೀತಿಯ ತನಿಖೆಗೂ ಸದಾಸಿದ್ದ : ಜಿ.ಎನ್. ಪ್ರವೀಣ್ 

Written by Mahesha Hindlemane

Published on:

ಹೊಸನಗರ : ಆಶ್ರಯ ಹಾಗು ವಿವಿಧ ವಸತಿ ಯೋಜನೆ ಅಡಿಯಲ್ಲಿ ಮಂಜೂರಾದ ಮನೆಗಳಿಗೆ ವಿದ್ಯುತ್ ನಿರಾಕ್ಷೆಪಣ ಪತ್ರ ಹಾಗು ಸ್ವಾದಿನ ಪತ್ರ ನೀಡುವಂತೆ ಅಗ್ರಹಿಸಿ ತಾಲೂಕಿನ ಎಂ.ಗುಡ್ಡೆಕೊಪ್ಪ ಗ್ರಾಮ ಪಂಚಾಯತಿ ಅಧ್ಯಕ್ಷ ಜಿ.ಎನ್. ಪ್ರವೀಣ್ ಇಲ್ಲಿನ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಅವರಿಗೆ ಮನವಿ ಪತ್ರ ಸಲ್ಲಿಸಿದರು. 

WhatsApp Group Join Now
Telegram Group Join Now
Instagram Group Join Now
📢 Stay Updated! Join our WhatsApp Channel Now →

ನಂತರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ತಮ್ಮ ಅಧ್ಯಕ್ಷೀಯ ಅವಧಿಯಲ್ಲಿ ಭ್ರಷ್ಟಾಚಾರ ರಹಿತ ಆಡಳಿತಕ್ಕೆ ಹೆಚ್ಚು ಆದ್ಯತೆ ನೀಡಲಾಗಿದ್ದು, ಜನಸಾಮಾನ್ಯರಿಗೂ  ಆಡಳಿತದಲ್ಲಿನ ಪಾರದರ್ಶಿಕತೆ ತಿಳಿಯುವಂತೆ ಕರ್ತವ್ಯ ಪಾಲನೆಗೆ ಒತ್ತು ನೀಡಲಾಗಿದೆ. ಆನ್‌ಲೈನ್ ಮೂಲಕ ಸಾಮಾನ್ಯ ಸಭೆ ನಡೆಸಿ ಜನಮನ ತಲುಪುವಂತೆ ಕ್ರಮ ಕೈಗೊಳ್ಳಲಾಗಿದೆ. ಸರ್ಕಾರದ ವಿವಿಧ ಸೌಲಭ್ಯಗಳ ಜನರಿಗೆ ಮಧ್ಯವರ್ತಿ ರಹಿತವಾಗಿ ಜನರಿಗೆ ತಲುಪಲು ಅಗತ್ಯ ಕಾರ್ಯ ಕೈಗೊಂಡಿದ್ದೇನೆ. ಆದರೂ, ಕೆಲ ಸದಸ್ಯರು, ಅಭಿವೃದ್ಧಿ ಕಾರ್ಯಗಳಿಗೆ ಕೈ ಜೋಡಿಸದೆ ವಿನಃಕಾರಣ ನನ್ನ ವಿರುದ್ಧ ಪಿತೂರಿ ನಡೆಸಲು ಮುಂದ್ದಾಗಿದ್ದಾರೆ. ಅಲ್ಲದೆ, ಭ್ರಷ್ಟಾಚಾರದ ಆರೋಪ ಹೊರಿಸಿ ತನಿಖೆ ನಡೆಸುವಂತೆ ತಾಲೂಕು ಪಂಚಾಯತ್ ಇ.ಒ.ರಿಗೆ ಮನವಿ ನೀಡಿದ್ದಾರೆ. 

ತಾವು ಯಾವುದೇ ತರಹದ ತನಿಖೆಗೆ ಸದಾ ಸಿದ್ದವಿದ್ದು, ಕಳೆದ ಹತ್ತು ವರ್ಷಗಳಲ್ಲಿ ಈ ಗ್ರಾಮ ಪಂಚಾಯತಿಯಲ್ಲಿ ನಡೆದಿರುವ ಎಲ್ಲಾ ಆಡಳಿತ ವಿರೋಧಿ ಕ್ರಮಗಳನ್ನು ಲೋಕಾಯುಕ್ತ ಪೊಲೀಸರಿಂದ ಸೂಕ್ತ ತನಿಖೆ ನಡೆಸಿದಲ್ಲಿ ಬಹಳಷ್ಟು ಅಕ್ರಮಗಳ ಸರಮಾಲೆಯೇ ಸಾರ್ವಜನಿಕವಾಗಿ ಬಹಿರಂಗಗೊಳ್ಳುವ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದರು. 

ಈ ಸಂಬಂಧ ತಾವು ಅಗತ್ಯ ದಾಖಲೆ ಸಂಗ್ರಹಕ್ಕೆ ಮುಂದಾಗಿದ್ದು, ಶೀಘ್ರದಲ್ಲೇ ಲೋಕಾಯುಕ್ತಕ್ಕೆ ದೂರು ನೀಡಲು ತಯಾರಿ ನಡೆದಿದೆ ಎಂದರು.

Leave a Comment