ಹೊಸನಗರ ; ಫೆ. 8 ಮತ್ತು 9ರಂದು ಪಟ್ಟಣದ ನೆಹರು ಮೈದಾನದಲ್ಲಿ ಕೊರಗ ಹಾಗೂ ಕೊರರ್ ಸಮಾಜ ಭಾಂದವರಿಗಾಗಿ 90 ಗಜಗಳ ಟೆನ್ನಿಸ್ ಬಾಲ್ ‘ಅಂಬೇಡ್ಕರ್ ಟ್ರೋಫಿ’ ಕ್ರಿಕೆಟ್ ಪಂದ್ಯಾವಳಿಯನ್ನು ಏರ್ಪಡಿಸಲಾಗಿದೆ ಎಂದು ಹೊಸನಗರ ಪಟ್ಟಣ ಪಂಚಾಯತಿ ಪೌರ ನೌಕರ ಹಾಗೂ ಈ ಕ್ರಿಕೆಟ್ ಪಂದ್ಯಾವಳಿಯ ಆಯೋಜಕರ ಅಧ್ಯಕ್ಷ ಚಂದ್ರಪ್ಪ ತಿಳಿಸಿದರು.
ಇಲ್ಲಿನ ಅಂಬೇಡ್ಕರ್ ಭವನದಲ್ಲಿ ಸುದ್ಧಿಗೋಷ್ಠಿ ನಡೆಸಿ ಮಾತನಾಡಿದ ಅವರು, ಹೊಸನಗರದ ಇತಿಹಾಸದಲ್ಲಿಯೇ ಪ್ರಪ್ರಥಮವಾಗಿ ನಮ್ಮ ಸಮಾಜ ಭಾಂದವರಿಗಾಗಿ ಹಾಗೂ ನಮ್ಮ ಜನಾಂಗದವರು ಒಟ್ಟಿನಿಂದ ಈ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ ಎಂದರು.
ಅಂದು ಬೆಳಿಗ್ಗೆ 10 ಗಂಟೆಗೆ ನೆಹರು ಮೈದಾನದಲ್ಲಿ ಈ ಕ್ರಿಕೆಟ್ ಪಂದ್ಯಾವಳಿಯ ಉದ್ಘಾಟನೆಯನ್ನು ತೀರ್ಥಹಳ್ಳಿ-ಹೊಸನಗರ ಕ್ಷೇತ್ರದ ಶಾಸಕರಾದ ಆರಗ ಜ್ಞಾನೇಂದ್ರರವರು ಉದ್ಘಾಟಿಸಲಿದ್ದು ಪಟ್ಟಣ ಪಂಚಾಯತಿಯ ಎಲ್ಲ ಚುನಾಯಿತ ಅಧ್ಯಕ್ಷ, ಸದಸ್ಯರು ಆಗಮಿಸಲಿದ್ದಾರೆ ಇವರ ಜೊತೆಗೆ ಪಟ್ಟಣ ಪಂಚಾಯತಿಯ ನೌಕರರು ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಸಹಕರಿಸಲಿದ್ದಾರೆ ಎಂದರು.
ಫೆ. 9ರ ಭಾನುವಾರ ಸಂಜೆ 5ಗಂಟೆಗೆ ಈ ಕ್ರಿಕೆಟ್ ಪಂದ್ಯಾವಳಿಯ ಮುಕ್ತಾಯ ಸಮಾರಂಭ ನಡೆಯಲಿದ್ದು ಹೊಸನಗರ-ಸಾಗರ ಕ್ಷೇತ್ರದ ಶಾಸಕ ಬೇಳೂರು ಗೋಪಾಲಕೃಷ್ಣ ಗೆದ್ದ ತಂಡಕ್ಕೆ ಪ್ರಶಸ್ತಿ ಪತ್ರ ಹಾಗೂ ಬಹುಮಾನವನ್ನು ವಿತರಿಸಲಿದ್ದಾರೆ ಎಂದರು.
ಹೊಸನಗರ ತಾಲ್ಲೂಕಿನ ಎಲ್ಲ ರಾಜಕೀಯ ನಾಯಕರುಗಳು ಸಾರ್ವಜನಿಕರು ಹಾಗೂ ಜನಾಂಗದವರು ಆಗಮಿಸಿ ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿಕೊಡಬೇಕೆಂದು ಕೇಳಿಕೊಂಡರು.
ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಪಂಚಾಯತಿ ಮಾಜಿ ಸದಸ್ಯ ಉಮೇಶ್, ಅಣ್ಣಪ್ಪ, ಪೃಥ್ವಿ, ಹೊಸನಗರದ ಪೌರ ನೌಕರರಾದ ನಾಗರಾಜ್, ನಾಗಪ್ಪ, ಕಾರ್ತಿಕ, ಕಿರಣ, ಹರೀಶ್ ಇನ್ನೂ ಮುಂತಾದವರು ಉಪಸ್ಥಿತರಿದ್ದರು.