ಕಡವೆ ಶಿಕಾರಿ, ನಾಲ್ವರು ಅರಣ್ಯ ಇಲಾಖೆ ವಶಕ್ಕೆ !

Written by malnadtimes.com

Published on:

BHADRAVATHI ; ಶಿವಮೊಗ್ಗ (Shivamogga) ಜಿಲ್ಲೆಯ ಭದ್ರಾವತಿ ತಾಲೂಕು ಉಂಬ್ಳೆಬೈಲು ವಲಯದ ಚೌಡಿಕಟ್ಟೆಯ ಬಳಿ ಕಡವೆ ಬೇಟೆಯಾಡಿದ್ದ (Hunter) ನಾಲ್ವರು ಆರೋಪಿಗಳನ್ನು ಅರಣ್ಯಾಧಿಕಾರಿಗಳು (Forest Departments) ಬಂಧಿಸಿದ ಘಟನೆ ನಡೆದಿದೆ.

WhatsApp Group Join Now
Telegram Group Join Now
Instagram Group Join Now

ಪತ್ತೆಯಾಯ್ತು ತಲೆ !

ಆರೋಪಿಗಳು ಶನಿವಾರ ಚೌಡಿಕಟ್ಟೆಯ ಬಳಿ ಕಡವೆ ಬೇಟೆಯಾಡಿ ಮಾಂಸವನ್ನು ಕೊಂಡೊಯ್ದು ಅದರ ತಲೆಯನ್ನ ಕೆರೆಗೆ ಬಿಸಾಕಿ ಹೋಗಿದ್ದರು. ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಅರಣ್ಯಾಧಿಕಾರಿಗಳು ವನ್ಯಜೀವಿ ಕಾಯ್ದೆಯಡಿ ನಾಲ್ವರು ಆರೋಪಿಗಳನ್ನ ಬಂಧಿಸಿದ್ದಾರೆ.

ಭದ್ರಾವತಿಯ ಗೊಂದಿ ಗ್ರಾಮದ ನಿವಾಸಿಗಳಾದ ಶಿವ ಬಿನ್ ರಾಜಪ್ಪ (28) ಮತ್ತು ವೆಂಕಟೇಶ ಬಿನ್ ಮುನಿಯಪ್ಪ (60) ಹಾಗೂ ಎನ್.ಆರ್. ಪುರದ ಭೈರಾಪುರ ಗ್ರಾಮದ ಚೌಡಿಕಟ್ಟೆ ನಿವಾಸಿಗಳಾದ ಮಂಜಪ್ಪ ಬಿನ್ ನಾಗಪ್ಪ (45) ಮತ್ತು ವಿನೋದ ಬಿನ್ ಮಂಜಪ್ಪ ಸಿ (19) ಬಂಧಿತ ಆರೋಪಿಗಳಾಗಿದ್ದಾರೆ. ಬಂಧಿತರಿಂದ ಕಡವೆ ಮಾಂಸ, ಅಡುಗೆಗೆ ಸಿದ್ಧಪಡಿಸಿಕೊಂಡಿದ್ದ ಸಾಮಾಗ್ರಿಗಳು ಹಾಗೂ ಒಂದು ಬೈಕ್ ಅನ್ನು ಜಪ್ತಿ ಮಾಡಲಾಗಿದ್ದು, ಆರೋಪಿಗಳನ್ನು ಅರಣ್ಯಾಧಿಕಾರಿಗಳು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ಭದ್ರಾವತಿಯ ಡಿಸಿಎಫ್ ಆಶೀಶ್ ರೆಡ್ಡಿ, ಚನ್ನಗಿರಿ ವಿಭಾಗದ ಎಸಿಎಫ್ ರತ್ನಪ್ರಭಾ ಅವರ ಮಾರ್ಗದರ್ಶನದಲ್ಲಿ ಉಂಬ್ಳೆಬೈಲ್ ಆರ್‌ಎಫ್‌ಒ ಗಿಡ್ಡಸ್ವಾಮಿ, ಡಿವೈಆರ್‌ಎಫ್ ಪವನ್, ಬಿ.ಎಫ್.ಸಂಜು ಹಾಗೂ ಅರಣ್ಯ ಇಲಾಖೆ ಸಿಬ್ಬಂದಿಗಳು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

Leave a Comment