ಕರ್ನಾಟಕ ರಾಜ್ಯದ ತೋಟಗಾರಿಕೆ ಇಲಾಖೆಯು 2025-26ನೇ ಸಾಲಿಗೆ ರೈತರಿಗೆ ತೋಟಗಾರಿಕೆ ಬೆಳೆಗಳನ್ನು ಉತ್ತೇಜಿಸಲು ಮತ್ತು ಕೃಷಿಯಲ್ಲಿ ಆರ್ಥಿಕ ಸಬಲೀಕರಣವನ್ನು ಸಾಧಿಸಲು ವಿವಿಧ ಯೋಜನೆಗಳಡಿ ಸಹಾಯಧನಕ್ಕಾಗಿ ಅರ್ಜಿಗಳನ್ನು ಆಹ್ವಾನಿಸಿದೆ. ಈ ಯೋಜನೆಗಳು ರೈತರಿಗೆ ಉತ್ಪಾದನಕತೆಯನ್ನು ಹೆಚ್ಚಿಸಲು, ಆಧುನಿಕ ಕೃಷಿ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಲು ಮತ್ತು ಆದಾಯವನ್ನು ಸುಧಾರಿಸಲು ಸಹಾಯಕವಾಗಿವೆ. ಸರ್ಕಾರದ ಹಲವು ಸಹಾಯಧನದ ಯೋಜನೆಗಳಿಗೆ ಅರ್ಜಿಯನ್ನು ಸಲ್ಲಿಸಬಹುದು.
ಮೊದಲನೇ ಯೋಜನೆಯಾದ ಕೇಂದ್ರ ಪುರಸ್ಕೃತ ರಾಷ್ಟ್ರೀಯ ಖಾದ್ಯ ತೈಲ ಅಭಿಯಾನ –ತಾಳೆ ಬೆಳೆ ಯೋಜನೆಯಡಿಯಲ್ಲಿ ತಾಳೆ ಬೆಳೆಯನ್ನು ಉತ್ತೇಜಿಸಲು ಈ ಯೋಜನೆಯನ್ನು ರೂಪಿಸಲಾಗಿದೆ. ಈ ಯೋಜನೆಯಡಿ ಹೊಸ ತಾಳೆ ತೋಟ ಸ್ಥಾಪನೆಗೆ ಪ್ರತಿ ಹೆಕ್ಟೇರ್ಗೆ 29000 ರೂ. ಅಂದರೆ ಶೇಕಡಾ 50 ರಷ್ಟನ್ನು ನೀಡಲಾಗುತ್ತದೆ. ಮೊದಲ ನಾಲ್ಕು ವರ್ಷಗಳಿಗೆ ಪ್ರತಿ ವರ್ಷ ರೂ 5250 ಒಂದು ಹೆಕ್ಟೇರ್ ಪ್ರದೇಶಕ್ಕೆ ನೀಡಲಾಗುತ್ತದೆ. ಅದೇ ರೀತಿ ಕಟಾವು ಉಪಕರಣಗಳನ್ನು ಸಹಾಯಧನವನ್ನು ನೀಡಲಾಗುತ್ತದೆ.
ತಾಳೆ ಹಣ್ಣು ಕಟಾವು ಏಣಿಗೆ ರೂ 5000, ಮೊಟೊರೈಸ್ಡ್ಚಿಸೆಲ್ಗೆ 15000ರೂ ಮತ್ತು ಚಾಫ್ ಕಟ್ಟರ್ಗೆ 50000 ರೂ ಅನ್ನು ನೀಡಲಾಗುತ್ತದೆ. ಡೀಸೆಲ್ ಪಂಪ್ಸೆಟ್ಗೆ 8000, ಕೊಳವೆ ಬಾವಿಗೆ 50000, ಟ್ರಾಕ್ಟರ್ ಟ್ರೋಲಿಗೆ 160000 ಅಂದರೆ ಶೇ 50ರಷ್ಟು ನೀಡಲಾಗುತ್ತದೆ. ತಾಳೆ ಕೃಷಿಯಿಂದ ರೈತರಿಗೆ ದೀರ್ಘಾವಧಿಯ ಆಧಾಯ ಸಿಗುತ್ತದೆ ಮತ್ತು ಕೊಯ್ಲು ಮತ್ತು ಸಂಸ್ಕರಣೆಗೆ ಆಧುನಿಕ ಉಪಕರಣಗಳು ಸಿಗುತ್ತವೆ. ತಾಳೆ ಬೆಳೆಯಲು ಆಸಕ್ತಿ ಇರುವ ರೈತರು ಬೇಕಾಗುತ್ತದೆ ಮತ್ತು ಭೂಮಿ ಮತ್ತು ಬ್ಯಾಂಕ್ ಖಾತೆಯನ್ನು ಹೊಂದಿರುವವರಿಗೆ ಈ ಯೋಜನೆಯಿಂದ ಲಾಭ ಸಿಗುತ್ತದೆ.
ಎರಡನೇ ಯೋಜನೆಯಾದ ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆ ಅಂದರೆ ಹನಿ ನೀರಾವರಿ ಯೋಜನೆಯಿಂದ ನೀರಿನ ಸಮರ್ಥ ಬಳಕೆಯನ್ನು ಉತ್ತೇಜಿಸುವ ಗುರಿಯನ್ನು ಹೊಂದಿದ್ದು, ಹನಿ ನೀರಾವರಿ ವ್ಯವಸ್ಥೆಯನ್ನು ಅಳವಡಿಸಿಕೊಳ್ಳುವ ರೈತರಿಗೆ ಆರ್ಥಿಕ ನೆರವು ಒದಗಿಸಲಾಗುತ್ತದೆ. ಪರಿಶಿಷ್ಟ ಜಾತಿ/ಪಂಗಡದ ರೈತರಿಗೆ ಶೇ 90ರಷ್ಟು ಮೀಸಲಾತಿಯನ್ನು ನೀಡಲಾಗುತ್ತದೆ. ಇತರ ರೈತರಿಗೆ ಶೇ 40-50ರಷ್ಟು ಮೀಸಲಾತಿ ಇದೆ. ಈ ಯೋಜನೆಯಿಂದ ನೀರಿನ ಉಳಿತಾಯ ಮತ್ತು ಕೃಷಿಯಲ್ಲಿ ಉತ್ಪಾದಕತೆ ವೃದ್ಧಿಯಾಗುತ್ತದೆ ಮತ್ತು ಆಧುನಿಕ ನೀರಾವರಿ ತಂತ್ರಜ್ಞಾನದ ಅಳವಡಿಕೆಯಾಗುತ್ತದೆ. ರೈತರು ತಮ್ಮ ಜಮೀನಿನಲ್ಲಿ ಹನಿ ನೀರಾವರಿ ವ್ಯವಸ್ಥೆಯನ್ನು ಅಳವಡಿಸಿಕೊಳ್ಳು ಆಸಕ್ತಿ ತೋರಬೇಕು ಮತ್ತು ಕಳೆದ 7 ವರ್ಷಗಳಲ್ಲಿ ಈ ಯೋಜನೆಯ ಲಾಭ ಪಡೆದಿರದ ರೈತರಿಗೆ ಹೆಚ್ಚಿನ ಆದ್ಯತೆಯನ್ನು ನೀಡಲಾಗುತ್ತದೆ.
ಮೂರನೇ ಯೋಜನೆಯಾದ ರಾಷ್ಟ್ರೀಯ ತೋಟಗಾರಿಕೆ ಮಿಷನ್ (ಎನ್ಹೆಚ್ಎಂ) ಯೋಜನೆಯು ತೋಟಗಾರಿಕೆ ಬೆಳೆಗಳ ಉತ್ಪಾದಕತೆಯನ್ನು ಹೆಚ್ಚಿಸಲು ಮತ್ತು ಆಧುನಿಕ ಕೃಷಿ ತಂತ್ರಜ್ಞಾನವನ್ನು ರೈತರಿಗೆ ತಲುಪಿಸಲು ರೂಪಿಸಲಾಗಿದೆ. ಈ ಯೋಜನೆಯಡಿ ಹೊಸ ತೋಟಗಳ ಸ್ಥಾಪನೆ ಮಾಡಲು ಸಹಾಯಧನವನ್ನು ನೀಡಲಾಗುತ್ತದೆ ಅಂದರೆ ಬಾಳೆ, ಅನಾನಸ್, ದಾಳಿಂಬೆ ಮುಂತಾದ ಬೆಳೆಗಳಿಗೆ ಶೇ 50ರಷ್ಟು ಸಬ್ಸಿಡಿಯನ್ನು ಸರ್ಕಾರ ನೀಡುತ್ತದೆ. ತರಕಾರಿ ಮತ್ತು ಹೂವಿನ ಬೆಳೆಗಳಿಗೆ ಶೇ 50ರಷ್ಟು ಆರ್ಥಿಕ ನೆರವನ್ನು ನೀಡಲಾಗುತ್ತದೆ.
ಹೂವು ಮತ್ತು ತರಕಾರಿ ಬೆಳೆಗೆ ನೆರಳು ಪರದೆಗೆ ಶೇ50ರಷ್ಟು ಸಹಾಯಧನವನ್ನು ನೀಡಲಾಗುತ್ತದೆ. (ಪ್ರತಿ ಚ.ಮೀ.ಗೆ ರೂ 197) ಮತ್ತು ಈರುಳ್ಳಿ ಶೇಖರಣ ಘಟಕ, ಪ್ಯಾಕ್ಹೌಸ್ ಗೆ ಎಲ್ಲಾ ವರ್ಗದ ರೈತರಿಗೆ ಶೇ 50ರಷ್ಟು ಸಹಾಯಧನವನ್ನು ನೀಡಲಾಗುತ್ತದೆ. ಈ ಯೋಜನೆಯಿಂದ ಆಧುನಿಕ ಕೃಷಿ ತಂತ್ರಜ್ಞಾನದ ಬಳಕೆಯಿಂದ ಉತ್ಪಾದಕತೆ ಹೆಚ್ಚಿಸಿಕೊಳ್ಳಬಹುದು ಮತ್ತು ರೈತರಿಗೆ ಬೆಳೆ ವೈವಿಧ್ಯೀಕರಣಕ್ಕೆ ಅವಕಾಶವಿರುತ್ತದೆ.ಕನಿಷ್ಟ 2.5 ಎಕರೆ ಜಮೀನು ಹೊಂದಿರುವ ರೈತರು ಕೆಲವು ಘಟಕಗಳಿಗೆ ಅರ್ಹರಾಗಿರುತ್ತಾರೆ. ಎಲ್ಲಾ ವರ್ಗದ ರೈತರು, ವಿಶೇಷವಾಗಿ ಅಲ್ಪಸಂಖ್ಯಾತರಿಗೆ ಶೇ 15ರಷ್ಟು, ವಿಕಲಾಂಗ ಚೇತನರಿಗೆ ಶೇ 5ರಷ್ಟು ಮತ್ತು ರೈತ ಮಹಿಳೆಯರಿಗೆ ಶೇ 33ರಷ್ಟು ಮೀಸಲಾತಿ ಇದೆ.
ನಾಲ್ಕನೇ ಯೋಜನೆಯಾದ ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಗ್ರಾಮೀಣ ರೈತರಿಗೆ ತೋಟಗಾರಿಕೆ ಬೆಳೆಗಳಾದ ಬಾಳೆ, ದಾಳಿಂಬೆ, ಪೇರಲೆ, ತೆಂಗು, ಪಪ್ಪಾಯ, ಸೀತಾಫಲ, ಕರಿವೇವು, ಮಾವು, ಹುಣಸೆ, ಡ್ರಾಗನ್ ಫ್ರೂಟ್, ಗುಲಾಬಿ, ಸಪೋಟ, ನೇರಳೆ ಮುಂತಾದವುಗಳನ್ನು ಬೆಳೆಯಲು ಉತ್ತೇಜನ ನೀಡಲಾಗುತ್ತದೆ. ಈ ಕಾರ್ಯಕ್ರಮವು ಕೃಷಿ ಹೊಂಡ, ಕೊಳವಿ ಬಾವಿಗಳ ಮರುಪೂರಣ, ಬದುಗಳ ನಿರ್ಮಾಣ, ತೆಂಗಿನ ಸಸಿ ನಾಟಿ, ಹೊಸ ತೋಟಗಳ ಸ್ಥಾಪನೆಯಂತಹ ಕಾರ್ಯಗಳಿಗೆ ಆರ್ಥಿಕ ನೆರವು ಸಿಗುತ್ತದೆ. ಗ್ರಾಮೀಣ ರೈತರಿಗೆ ಉದ್ಯೋಗ ಸೃಷ್ಟಿ ಮತ್ತು ಆದಾಯದ ಮೂಲವನ್ನು ಒದಗಿಸುವುದು ದೀರ್ಘಾವಧಿಯ ಬೆಳೆಗಳಾದ ತೆಂಗು, ಮಾವು ಮತ್ತು ಇತರ ಫಲವೃಕ್ಷಗಳ ಸ್ಥಾಪನೆಗೆ ಆರ್ಥಿಕ ಬೆಂಬಲ ಸಿಗುತ್ತದೆ. ಈ ಯೋಜನೆಯ ಮೂಲಕ ನೀರಿನ ಸಂಗ್ರಹಣೆಗೆ ಕೃಷಿ ಹೊಂಡಗಳ ನಿರ್ಮಾಣಕ್ಕೆ ಸಹಾಯ ನೀಡಲಾಗುತ್ತದೆ. ಈ ಯೋಜನೆಯನ್ನು ಗ್ರಾಮೀಣ ಪ್ರದೇಶದ ರೈತರು ಮತ್ತು ಕೃಷಿ ಕಾರ್ಮಿಕರು ಪಡೆಯಬಹುದು ಮತ್ತು ಫಲಾನುಭವಿಗಳು ತಮ್ಮ ಹೆಸರಿನಲ್ಲಿ ಭೂಮಿ ಮತ್ತು ಬ್ಯಾಂಕ್ ಖಾತೆಯನ್ನು ಹೊಂದಿರಬೇಕು.
ರೈತರು ಹೆಚ್ಚಿನ ಮಾಹಿತಿಗಾಗಿ ತಮ್ಮ ತಾಲ್ಲೂಕಿನ ರೈತ ಸಂಪರ್ಕ ಕೇಂದ್ರವನ್ನು ಅಥವಾ ತೋಟಗಾರಿಕೆ ಇಲಾಖೆಯ ಕಚೇರಿಯನ್ನು ಸಂಪರ್ಕಿಸಬಹುದು. ಇದರ ಮೂಲಕ ಕೃಷಿ ಸಂಬಂಧಿತ ಮಾಹಿತಿಯನ್ನು ಪಡೆಯಬಹುದು. ತೋಟಗಾರಿಕೆ ಇಲಾಖೆಯ ಈ ಯೋಜನೆಗಳು ರೈತರಿಗೆ ಆರ್ಥಿಕ ಸ್ಥಿರತೆಯನ್ನು ಒದಗಿಸುವ ಜೊತೆಗೆ, ಕೃಷಿಕರಿಗೆ ಉತ್ತೇಜಿಸುವ ಯೋಜನೆಗಳಾಗಿದ್ದು ಆಸಕ್ತ ರೈತರು ಈ ಅವಕಾಶವನ್ನು ಸದುಪಯೋಗಪಡಿಸಿಕೊಂಡು ಕೃಷಿ ಚಟುವಟಿಕೆಗಳನ್ನು ಆಧುನೀಕರಣಗೊಳಿಸಿ ಕೃಷಿಯಲ್ಲಿ ಅಭಿವೃದ್ಧಿ ಸಾಧಿಸಬಹುದು.
Read More
ಪತ್ರಕರ್ತನ ಮೇಲೆ ಹಲ್ಲೆ ಯತ್ನ, ಜೀವ ಬೆದರಿಕೆ ; ಕ್ರಮಕ್ಕೆ ಒತ್ತಾಯ
ಮೆಟ್ರಿಕ್ ಪೂರ್ವ ಹಾಗೂ ಮೆಟ್ರಿಕ್ ನಂತರದ ವಿದ್ಯಾರ್ಥಿವೇತನಕ್ಕೆ ಅರ್ಜಿ ಆಹ್ವಾನ
MalnadTimes.com ವೆಬ್‌ಸೈಟ್‌ನ ಸ್ಥಾಪಕ ಮತ್ತು ನಿರ್ವಾಹಕರಾಗಿದ್ದಾರೆ. ಅಕ್ಟೋಬರ್ 3 2019 ರಲ್ಲಿ ಈ ತಾಣವನ್ನು ಆರಂಭಿಸಿದ ಅವರು, ಮೊದಲಿಗೆ ಐಟಿ ಕ್ಷೇತ್ರದಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ತಮ್ಮ ತಾಂತ್ರಿಕ ಪರಿಣತಿಯನ್ನು ಮತ್ತು ಸ್ಥಳೀಯ ಸುದ್ದಿಗಳ ಪ್ರೀತಿಯನ್ನು ಒಂದಾಗಿಸಿ, ಮಲ್ನಾಡಿನ ಜನತೆಗೆ ನಿಖರವಾದ, ವಿಶ್ವಾಸಾರ್ಹ ಹಾಗೂ ಸಮಗ್ರ ಸುದ್ದಿಗಳನ್ನು ತಲುಪಿಸುವ ನಿಟ್ಟಿನಲ್ಲಿ ಈ ತಾಣವನ್ನು ರೂಪಿಸಿದ್ದಾರೆ.
Malnad Times ಮೂಲಕ ಶಿವಮೊಗ್ಗ ಮತ್ತು ಮಲ್ನಾಡು ಭಾಗದ ಸಮುದಾಯದ ಧ್ವನಿಯಾಗಿ, ಗ್ರಾಮೀಣ ಬದುಕು, ಪರಿಸರ, ಕೃಷಿ, ಶಿಕ್ಷಣ, ಮತ್ತು ಸಾರ್ವಜನಿಕ ವಿಚಾರಗಳನ್ನು ತಲುಪಿಸುವ ಪ್ರಯತ್ನದಲ್ಲಿ ತೊಡಗಿದ್ದಾರೆ.ಈ ತಾಣದ ನಿರ್ವಹಣೆ, ತಾಂತ್ರಿಕ ಹಾಗೂ ಸಂಪಾದಕೀಯ ಕಾರ್ಯಗಳಲ್ಲಿ ನಿತ್ಯ ಭಾಗವಹಿಸುತ್ತಿದ್ದಾರೆ.