ಮಾತೃಭಾಷೆ ಕನ್ನಡದ ಜೊತೆ ಇಂಗ್ಲಿಷ್ ಕಲಿಕೆ ಅತ್ಯಗತ್ಯ: ಶಾಸಕ ಆರಗ ಜ್ಞಾನೇಂದ್ರ

Written by Koushik G K

Published on:

ತೀರ್ಥಹಳ್ಳಿ: ಇಂದಿನ ತಂತ್ರಜ್ಞಾನದ ಯುಗದಲ್ಲಿ ನಮ್ಮ ಹಳ್ಳಿ ಶಾಲೆಯ ಮಕ್ಕಳಿಗೂ ಮಾತೃಭಾಷೆ ಕನ್ನಡದ ಜೊತೆ ಇಂಗ್ಲಿಷ್ ಕಲಿಕೆ ಅತ್ಯಗತ್ಯ ಎಂದು ಶಾಸಕ ಆರಗ ಜ್ಞಾನೇಂದ್ರ ಹೇಳಿದರು.

WhatsApp Group Join Now
Telegram Group Join Now
Instagram Group Join Now

ತಾಲೂಕಿನ ಹೊದಲ- ಅರಳಾಪುರ ಗ್ರಾ.ಪಂ.ವ್ಯಾಪ್ತಿಯ ಹೊದಲ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಂಗ್ಲ ಮಾಧ್ಯಮದ ತರಗತಿಯನ್ನು ಉದ್ಘಾಟಿಸಿ ಮಾತನಾಡಿದರು.

ತೀರ್ಥಹಳ್ಳಿ ತಾಲ್ಲೂಕಿನ ಮೂವತ್ತಕ್ಕೂ ಹೆಚ್ಚು ಶಾಲೆಗಳಲ್ಲಿ ಆಂಗ್ಲ ಮಾದ್ಯಮ ತರಗತಿಗಳ ಪ್ರಾರಂಭಕ್ಕೆ ಶಿಕ್ಷಣ ಇಲಾಖೆಯ ಪ್ರಿನ್ಸಿಪಲ್ ಸೆಕ್ರೆಟರಿ ಬಳಿ ನಿರಂತರ ಸಂಪರ್ಕಿಸಿದ ಪ್ರತಿಫಲವೇ ಇಂದು ಹೊದಲದಲ್ಲಿ ಆಂಗ್ಲ ಮಾದ್ಯಮ ಪ್ರಾರಂಭವಾಗಿದೆ.ಮಕ್ಕಳ ಉಜ್ವಲ ಭವಿಷ್ಯಕ್ಕೆ ಗ್ರಾಮೀಣ ಪ್ರದೇಶಗಳಲ್ಲೂ ಉತ್ತಮ ಶಿಕ್ಷಣ ಸಿಗುವಂತಹ ಕಾಲ ಬಂದಿದೆ ಎಂದರು.

ಕ್ಷೇತ್ರ ಶಿಕ್ಷಣಾಧಿಕಾರಿ ವೈ. ಗಣೇಶ್  ಮಾತನಾಡಿ ಶಾಸಕರ ವಿಶೇಷವಾದ ಪ್ರಯತ್ನದ ಫಲವೇ ಇಂದು ಹೊದಲದಂತಹ ಹಳ್ಳಿಯ ಶಾಲೆಗಳಲ್ಲಿ ಆಂಗ್ಲ ಮಾದ್ಯಮ ಶಾಲೆಗಳು ಪ್ರಾರಂಭವಾಗುತ್ತಿವೆ. ಇದಕ್ಕೆ ಅಗತ್ಯವಾದ ಇಂಗ್ಲಿಷ್ ಶಿಕ್ಷಕರನ್ನೂ ಇನ್ನು ಕೆಲವೇ ದಿನಗಳಲ್ಲಿ ನೇಮಕ ಮಾಡಲಾಗುವುದು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್ ಡಿ ಎಂ ಸಿ ಅದ್ಯಕ್ಷರಾದ ಹೊದಲ ಸುನೀಲ್ ನಮ್ಮ ಶಾಲೆಯಲ್ಲಿ ಇಂಗ್ಲಿಷ್ ಮಾದ್ಯಮ ತರಗತಿ ಬಗ್ಗೆ,ಶಾಸಕರ ಕಾಳಜಿ ಬಗ್ಗೆ ಶ್ಲಾಘಿಸಿದರು.

ಇದೇ ಸಂದರ್ಭದಲ್ಲ ಶಾಲೆಗೆ ಅಗತ್ಯವಾದ ಪೋಡಿಯಂ, ಗುರುತಿನ ಚೀಟಿ ಹಾಗೂ ನಲಿಕಲಿ ಮಕ್ಕಳಿಗೆ ಕುರ್ಚಿಗಳನ್ನು ಉಚಿತವಾಗಿ ನೀಡಿದ ಹೊದಲ ಉಪೇಂದ್ರ ಆಚಾರ್ಯ, ನಾಗಶ್ರೀ ನಾಗೇಶ್ , ಅಕ್ಷಯ್ ಹಾಗೂ ಅತಿಥಿ ಶಿಕ್ಷಕರಾಗಿ ಸೇವೆ ಸಲ್ಲಿಸಿದ ಪವಿತ್ರಾ ಅವರನ್ನು ಸನ್ಮಾನಿಸಲಾಯಿತು.

 ಶಿಕ್ಷಕಿ ಪವಿತ್ರ ಸ್ವಾಗತಿಸಿ,ಶಿಕ್ಷಕಿ ಮಮತಾ ನಿರೂಪಿಸಿ,ಶಿಕ್ಷಕ ಸುದರ್ಶನ್ ವಂದಿಸಿದರು.ಕಾರ್ಯಕ್ರಮದಲ್ಲಿ ಹೊದಲ ಗ್ರಾಮ ಪಂಚಾಯತಿ ಅದ್ಯಕ್ಷರಾದ ಮಲ್ಲಿಕಾ ರಾಘವೇಂದ್ರ, ಸದಸ್ಯರಾದ ಹೊದಲ ದಿನೇಶ್, ಅಂಬಿಕಾ ಸಂತೋಷ್, ಮಂಜುನಾಥ್, ನಿಶ್ಚಿತಾ, ಪಿಡಿಓ ಅಂಬಿಕಾ, ಕುಡುಮಲ್ಲಿಗೆ ಸೊಸೈಟಿ ಉಪಾದ್ಯಕ್ಷ ಅನಂತಮೂರ್ತಿ, ವಿಶ್ವನಾಥ ಪ್ರಭು, ಎಸ್ ಡಿಎಂಸಿ ಸದಸ್ಯರು, ಪೋಷಕರು ಉಪಸ್ಥಿತರಿದ್ದರು.

ರೈತರೇ ಗಮನಿಸಿ ಬೆಳೆ ಸಮೀಕ್ಷೆ ಮಾಡದಿದ್ದರೆ ಈ ಸೌಲಭ್ಯಗಳು ಸಿಗಲ್ಲ !

Leave a Comment