ರಿಪ್ಪನ್‌ಪೇಟೆ ; ಕಲೆ ಎಲ್ಲರಿಗೂ ಒಲಿಯುವುದಿಲ್ಲ ಆಂತಹ ಕಲೆಯ ಕಲಾವಿದರನ್ನು ಉತ್ತೇಜಿಸಿ ಪ್ರೋತ್ಸಾಹಿಸುವುದರಿಂದ ಕಲಾವಿದರ ಬದುಕು ಸುಗಮವಾಗುವುದೆಂದು ತಾಲ್ಲೂಕು ಪಂಚಾಯ್ತಿ ಮಾಜಿ ಅಧ್ಯಕ್ಷ ವೀರೇಶ್ ಆಲವಳ್ಳಿ ಹೇಳಿದರು.

ರಿಪ್ಪನ್‌ಪೇಟೆ ಕರ್ನಾಟಕ ಪ್ರಾಂತೀಯ ಹಿಂದೂ ರಾಷ್ಟ್ರ ಸೇನಾ ಸಭಾಭವನದಲ್ಲಿ ಕರ್ನಾಟಕ ಪ್ರಾಂತೀಯ ಹಿಂದೂ ರಾಷ್ಟ್ರ ಸೇನಾ ಸಭಾಭವನದಲ್ಲಿ ದಿ.ಪುನೀತ್ ರಾಜ್‌ಕುಮಾರ್ ಜನ್ಮದಿನಾಚರಣೆಯ ಅಂಗವಾಗಿ ಏರ್ಪಡಿಸಲಾದ ಗ್ರ್ಯಾಂಡ್ ಫಿನಾಲೆ ಸಮಾರೋಪ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿ, ಗ್ರಾಮೀಣ ಭಾಗದ ಹೆಣ್ಣು ಮಗಳು ರಾಜ್ಯಮಟ್ಟದ ಗಾಯನ ಸ್ಪರ್ಧೆಯನ್ನು ಏರ್ಪಡಿಸುವ ಧೈರ್ಯ ಮಾಡಿರುವುದು ಸುಲಭದ ಮಾತಲ್ಲ. ಒಂದು ಹೆಣ್ಣು ಮನಸು ಮಾಡಿದರೆ ಏನು ಮಾಡಲು ಸಾಧ್ಯವೆನ್ನುವುದಕ್ಕೆ ಇದೇ ಸಾಕ್ಷಿಯೆಂದು ಹೇಳಿ, ಕಲೆ ಯಾರಪ್ಪನ ಸೋತ್ತು ಅಲ್ಲ ಕಲಾವಿದನ ಸೊತ್ತು ಎಂದು ಹೇಳಿ, ಗ್ರಾಮೀಣ ಪ್ರದೇಶದ ಹಾಸುಹೊಕ್ಕಾಗಿರುವ ಜಾನಪದ ಕಲೆಯ ಸೊಗಡನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಇಂತಹ ಕಾರ್ಯಕ್ರಮಗಳು ಪೂರಕ ಪ್ರೇರಕವಾಗಿವೆ. ಆ ನಿಟ್ಟಿನಲ್ಲಿ ಪ್ರೇಕ್ಷಕರ ಮತ್ತು ಸರ್ಕಾರದ ಪ್ರೋತ್ಸಾಹ ಅಗತ್ಯವೆಂದರು.

ಸಮಾರಂಭದ ಅಧ್ಯಕ್ಷತೆಯನ್ನು ಸುಧಾಗೌಡ ವಹಿಸಿದ್ದರು. ನೇರಲಮನೆ ಕಮಲಮ್ಮ ಮುತ್ತಪ್ಪ, ಬೆಂಗಳೂರು ಹ್ಯೂಮನ್ ರೈಟ್ಸ್ ಸ್ಟೇಟ್ ಡೆಪ್ಯುಟಿ ಡೈರೆಕ್ಟರ್ ಹೆಚ್.ಸಿ.ಪುಪ್ಪಾವತಿ, ಹುಂಚದಕಟ್ಟೆ ರಾಮನಸರ ಕ್ಷೇತ್ರ ನಾಗದೇವತೆ ಸುನಂದಮ್ಮ, ಬಿಎಸ್ಎನ್‌ಡಿಪಿ ರಾಜ್ಯ ಪ್ರಧಾನ ಮಹಿಳಾ ಕಾರ್ಯದರ್ಶಿ ಲೇಖನಾ ಚಂದ್ರನಾಯ್ಕ್, ಜನಪರ ಹೋರಾಟ ವೇದಿಕೆ ಅಧ್ಯಕ್ಷ ಆರ್.ಎನ್. ಮಂಜುನಾಥ, ಗ್ರಾಮ ಪಂಚಾಯ್ತಿ ಸದಸ್ಯ ಪ್ರಕಾಶ್ ಪಾಲೇಕರ್ ಹಾಗೂ ಸಾಗರ ಸಮಾಜ ಸೇವಕ ಅರವಿಂದ, ಸದ್ಗುರು ಹೋಟೆಲ್ ಸಂತೋಷ, ಪ್ರೀತಿ ರಾಘವೇಂದ್ರ ಇನ್ನಿತರರು ಹಾಜರಿದ್ದರು.