ಇಂಡಿಯಾ ಬುಕ್ ಆಫ್ ರೆಕಾರ್ಡ್‌ಗೆ ಆರ್ಯನ್

Written by Mahesha Hindlemane

Published on:

ರಿಪ್ಪನ್‌ಪೇಟೆ ; ಹುಂಚ ಗ್ರಾ.ಪಂ. ವ್ಯಾಪ್ತಿಯ ನಾಗರಹಳ್ಳಿ ನಿವಾಸಿ ಚೇತನ್ ಕುಮಾರ್ ಮತ್ತು ದಿವ್ಯ ಅವರ ಪುತ್ರ 1.11 ವರ್ಷದ ಪುಟಾಣಿ ಆರ್ಯನ್ ಎನ್.ಸಿ. 38 ವಿವಿಧ ಬಗೆಯ ವಿಷಯಗಳನ್ನು ಗುರುತಿಸಿ ಜ್ಞಾಪಕ ಶಕ್ತಿಯಲ್ಲಿ ಇಂಡಿಯಾ ಬುಕ್ ಆಫ್ ರೆಕಾರ್ಡ್‌ಗೆ ಸೇರ್ಪಡೆ ಆಗಿದ್ದಾನೆ.

WhatsApp Group Join Now
Telegram Group Join Now
Instagram Group Join Now
📢 Stay Updated! Join our WhatsApp Channel Now →

25 ತರಕಾರಿಗಳನ್ನು ಗುರುತಿಸುತ್ತಾನೆ. 8 ಗ್ರಹಗಳು, 23 ದೇಶಗಳ ಧ್ವಜಗಳು 11 ಬಣ್ಣಗಳು, 21 ವೃತ್ತಿಪರರು, 8 ಕೀಟಗಳು, 8 ಪುಸ್ತಕಗಳು, 9 ಸಮುದ್ರ ಪ್ರಾಣಿಗಳು, 10 ಸಂಗೀತ ವಾದ್ಯಗಳು, 24 ಕಾರು ಲೋಗೋಗಳು, 11 ದೇಹದ ಆಂತರಿಕ ಭಾಗಗಳು, 24 ಸ್ವಾತಂತ್ರ್ಯ ಹೋರಾಟಗಾರರು, 25 ಹಣ್ಣು, 30 ವಾಹನಗಳು, 7 ದೇವತೆಗಳು, 14 ಗಣಿತ ಚಿಹ್ನೆಗಳು ಹೀಗೆ 38 ವಿವಿಧ ಬಗೆಯ ವಿಷಯಗಳನ್ನು ಗುರುತಿಸಿ ಅದನ್ನೂ ಹೇಳುವುದರ ಮೂಲಕ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್‌ನ ದಾಖಲೆ ಮಾಡಿ ವಿಶಿಷ್ಟವಾದ ಕಿರಿಯ ಮಗು ಅನ್ನೋ ಸಾಧನೆ ಮಾಡಿ ಐಬಿಆರ್ ಸಾಧಕ ಬಿರುದು ಪಡೆದಿದ್ದಾನೆ‌.

Leave a Comment