ರಿಪ್ಪನ್‌ಪೇಟೆ ; ಅಟಲ್ ಬಿಹಾರಿ ವಾಜಪೇಯಿಯವರು ಮೌಲ್ಯಾಧಾರಿತವಾದ ರಾಜಕಾರಣಿಯಾಗಿದ್ದಾರೆ. ಅಧಿಕಾರಕ್ಕಾಗಿ ಎಂದೂ ವಾಮಮಾರ್ಗವನ್ನು ಅನುಸರಿಸದೇ ದೇಶದ ಸಮಗ್ರಾಭಿವೃದ್ದಿಯಲ್ಲಿ ತಮ್ಮದೆ ಅದ ಮಹತ್ತರವಾದ ಕೊಡುಗೆಯನ್ನು ನೀಡಿದ ದೀಮಂತ ವ್ಯಕ್ತಿತ್ವದ ವ್ಯಕ್ತಿ ಎಂದು ಮಾಜಿ ಎಂ.ಎಲ್.ಸಿ. ಆರ್.ಕೆ.ಸಿದ್ದರಾಮಣ್ಣ ಮಾಜಿ ಪ್ರಧಾನಿ ವಾಜಪೇಯರವರನ್ನು ಬಣ್ಣಿಸಿದರು.
ರಿಪ್ಪನ್‌ಪೇಟೆಯ ಶ್ರೀರಾಮಮಂದಿರದಲ್ಲಿ ಬಿಜೆಪಿ ಮಹಾಶಕ್ತಿ ಕೇಂದ್ರದವರು ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯರವರ 101ನೇ ಜನ್ಮದಿನಾಚರಣೆಯ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸಕರಾಗಿ ಭಾಗವಹಿಸಿ ಮಾತನಾಡಿ, ಸಂವೇದನಾಶೀಲಾ ಹೃದಯದ ಕವಿಗಳಾಗಿ ನಿರ್ಭೀತ ಪತ್ರಕರ್ತರಾಗಿ ತತ್ವ ನಿಷ್ಟೆ ಅತ್ಯುತ್ತಮ ಸಂಸದೀಯ ಪಟುವಾಗಿ ಆಶಾಧಾರಣ ಸಂಘಟಿಕನಾಗಿ ಜಾಗತಿಕವಾಗಿ ಗೌರವಗಳಿಸಿದ ರಾಜನೀತಿಜ್ಞನಾಗಿ ದೇಶದ ಅಧಿಕಾರದ ಚುಕ್ಕಾಣಿ ಹಿಡಿದ ಅಟಲ್ ಜೀ ಅವರ ಬದುಕೇ ಭಾರತದ ಪ್ರಜಾಪ್ರಭುತ್ವ ಮತ್ತು ರಾಷ್ಟ್ರೀಯ ಪ್ರಜ್ಞೆಗೆ ಆದರ್ಶಪ್ರಾಯ ಬೆಳಕಾಗಿದೆ. ಅವರ ತತ್ವಸಿದ್ದಾಂತಗಳು ನಮಗೆ ರಾಜಕೀಯ ಪ್ರೇರಣಾ ಶಕ್ತಿಯಾಗಿ ಸ್ಪೂರ್ತಿಯ ಸೆಲೆಯಾಗಿವೆ.

ವಾಜಪೇಯರವರು ದೇಶಭಕ್ತಿ-ದೇಶ ಸೇವೆಯ ಮೂಲಕ ಅಂತರರಾಷ್ಟ್ರೀಯ ಮಟ್ಟದಲ್ಲಿ ಧ್ವನಿ ಬಲಿಷ್ಟ ರಾಷ್ಟ್ರದ ಜೊತೆಗೆ ಶಾಂತಿಯ ಹಾದಿ ಪ್ರಜಾಪ್ರಭುತ್ವ ಗೌರವ ಸಂವಿಧಾನ ಮತ್ತು ಸಂಸ್ಥೆಗಳ ಮೇಲಿನ ನಂಬಿಕೆ ಮೈತ್ರಿ ರಾಜಕೀಯಕ್ಕೆ ದಿಕ್ಕು ಎನ್.ಡಿ.ಎ ಮೂಲಕ ಸರ್ಕಾರದ ಮಾದರಿ ಸಹಮತ ಮತ್ತು ಸಂಯಮ ವೀರೋಧ ಪಕ್ಷಗಳಿಗೂ ಗೌರವ ಕಠಿಣ ವಿಷಯಗಳಲ್ಲೂ ಮಿತಭಾಷೆ. ಹೀಗೆ ಹಲವು ವಿಷಯಗಳಲ್ಲಿ ಸಾಕಷ್ಟು ಅನುಭವಿಗಳಾಗಿದ್ದವರು ಆಟಲ್ ಬಿಹಾರಿ ವಾಜಪೇಯ ಅವರ ಸಾಮಾನ್ಯ ಕಾರ್ಯಕರ್ತರಂತೆ ಪಕ್ಷದಲ್ಲಿ ದುಡಿದವರಾಗಿದ್ದು ಕೇವಲ ಸಂಸತ್‌ನಲ್ಲಿ 2 ಸ್ಥಾನಗಳಿಸಿ ನಂತರದಲ್ಲಿ ಎಷ್ಟೇ ಬಾರಿ ಪಕ್ಷ ಚುನಾವಣೆಯಲ್ಲಿ ಸೋತರೂ ಕೂಡಾ ಧೃತಿಗೆಡದೆ ಧೈರ್ಯವಾಗಿ ಎದುರಿಸಿದ ಮೇರು ವ್ಯಕ್ತಿತ್ವದ ವಾಜಪೇಯ ಅಜಾತಶತ್ರುವಾಗಿ ಮತದಾರರ ಮನಸ್ಸಿನಲ್ಲಿ ಶಾಶ್ವತವಾಗಿ ಉಳಿಯುವಂತಾಗಿದ್ದಾರೆಂದ ಅವರು ಸೋಲು ಗೆಲುವಿನ ಮೆಟ್ಟಿಲು ಎಂದು ಅರಿತವರಾಗಿದ್ದರು.

ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೆರೆಹಳ್ಳಿ-ಹುಂಚ ಹೋಬಳಿ ಬಿಜೆಪಿ ಮಹಾಶಕ್ತಿ ಕೇಂದ್ರದ ಆಧ್ಯಕ್ಷ ಎನ್.ಸತೀಶ್ ವಹಿಸಿ ಮಾತನಾಡಿದರು. ಆರ್.ಟಿ.ಗೋಪಾಲ, ಬೆಳ್ಳೂರು ತಿಮ್ಮಪ್ಪ, ಗಣಪತಿ ಬೆಳಗೋಡು, ಎ.ವಿ.ಮಲ್ಲಿಕಾರ್ಜುನ, ಎ.ಟಿ.ನಾಗರತ್ನಮ್ಮ, ವಿನಾಯಕ, ಶ್ಯಾಮಸುಂದರ್, ಇನ್ನಿತರರಿದ್ದರು.
ಇದೇ ಸಂದರ್ಭದಲ್ಲಿ ಮಾಜಿ ಪ್ರಧಾನಿ ಅಟಲ್‌ಜೀಯವರ ಭಾವಚಿತ್ರಕ್ಕೆ ಪುಷ್ಪಾನಮನ ಮಾಡಿ 101 ದೀಪಗಳನ್ನು ಹಚ್ಚಿ ಬೆಳಗಿಸಿದ ದೃಶ್ಯ ಕಣ್ಮುನ ಸೆಳೆಯಿತು. ನಾಗರತ್ನ ದೇವರಾಜ್ ಪ್ರಾರ್ಥಿಸಿದರು. ನಾಗಾರ್ಜುನಸ್ವಾಮಿ ಸ್ವಾಗತಿಸಿದರು.

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್ಸೈಟ್ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 7 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್ಸೈಟ್ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ ‘ಮಲ್ನಾಡ್ ಟೈಮ್ಸ್’ ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ.





