Ripponpete

ಮಾ.25 ರಂದು ಬಿ.ಕೆ. ಪಾರ್ವತಮ್ಮ ಪುಣ್ಯಸ್ಮರಣೆ ಹಾಗೂ ಧರ್ಮ ಸಮಾರಂಭ

ರಿಪ್ಪನ್‌ಪೇಟೆ ; ತೀರ್ಥಹಳ್ಳಿ ತಾಲ್ಲೂಕಿನ ಕೋಣಂದೂರು ಅಡಿಕೆ ವ್ಯಾಪಾರೋದ್ಯಮಿ ಕೆ.ಆರ್.ಪ್ರಕಾಶ ಮತ್ತು ಸಹೋದರರ ಮಾತೃ ಶ್ರೀ ಮಾತೆ ಶರಣೆ ಲಿಂ. ಬಿ.ಕೆ.ಪಾರ್ವತಮ್ಮರ ಪುಣ್ಯಸ್ಮರಣೆ ಅಂಗವಾಗಿ ಧರ್ಮ ಸಮಾರಂಭವನ್ನು ಮಾರ್ಚ್ 25 ರ ಬುಧವಾರ ಕೋಣಂದೂರಿನ ಪಾರ್ವತಿ ನಿಲಯದಲ್ಲಿ ಬೆಳಗ್ಗೆ 10-30 ಕ್ಕೆ ಪಂಚಪೀಠಾಧೀಶ್ವರರ ದಿವ್ಯ ಸಾನ್ನಿಧ್ಯದಲ್ಲಿ ಏರ್ಪಡಿಸಲಾಗಿದೆ ಎಂದು ಕೆ.ಆರ್.ಪ್ರಕಾಶ ತಿಳಿಸಿದ್ದಾರೆ.

WhatsApp Group Join Now
Telegram Group Join Now
Instagram Group Join Now

ಈ ಧರ್ಮ ಸಮಾರಂಭದ ದಿವ್ಯಸಾನ್ನಿಧ್ಯವನ್ನು ರಂಭಾಪುರಿ ಪೀಠದ 1008 ಜಗದ್ಗುರು ಪ್ರಸನ್ನ ರೇಣುಕಾ ಡಾ.ವೀರಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯ ಭಗವತ್ಪದರು, ಉಜ್ಜಯನಿ ಸದ್ದರ್ಮ ಸಿಂಹಾಸನಾಧಿಶ್ವರ 1008 ಜಗದ್ಗುರು ಸಿದ್ದಲಿಂಗರಾಜದೇಶಿ ಕೇಂದ್ರ ಶಿವಾಚಾರ್ಯ ಭಗವತ್ಪಾದರು, ಶ್ರೀಶೈಲ ಶ್ರೀಮತ್ ಗಿರಿರಾಜ ಸೂರ್ಯ ಸಿಂಹಾಸನಾಧಿಶ್ವರ 1008 ಜಗದ್ಗುರು ಡಾ.ಚನ್ನಸಿದ್ದರಾಮಪಂಡಿತಾರಾಧ್ಯ ಶಿವಾಚಾರ್ಯ ಭಗವತ್ಪಾದರು, ಕಾಶಿ ಜ್ಞಾನ ಸಿಂಹಾಸನಾಧಿಶ್ವರ 1008 ಜಗದ್ಗುರು ಡಾ.ಚಂದ್ರಶೇಖರ ಶಿವಾಚಾರ್ಯ ಭಗವತ್ಪಾದರು, ಕಾಶಿ ಜ್ಞಾನ ಸಿಂಹಾಸನಾಧಿಶ್ವರ 1008 ಜಗದ್ಗುರು ಡಾ.ಮಲ್ಲಿಕಾರ್ಜುನ ವಿಶ್ವಾರಾಧ್ಯ ಶಿವಾಚಾರ್ಯ ಭಗವತ್ಪಾದರು ವಹಿಸಿ ಆಶೀರ್ವಚನ ನೀಡುವರು.

ಈ ಧರ್ಮ ಸಮಾರಂಭದ ನೇತೃತ್ವವನ್ನು ಕವಲೇದುರ್ಗ ಕೆಳದಿರಾಜಗುರು ಮಹಾಮಹತ್ತಿನ ಭುವನಗಿರಿ ಸಂಸ್ಥಾನ ಮಠದ ಮರುಳಸಿದ್ದ ಶಿವಾಚಾರ್ಯ ಸ್ವಾಮಿಗಳು, ಮಳಲಿಮಠದ ಡಾ.ಗುರುನಾಗಭೂಷಣ ಶಿವಾಚಾರ್ಯ ಸ್ವಾಮೀಜಿ, ಕೋಣಂದೂರು ಬೃಹನ್ಮಠದ ಶ್ರೀಪತಿ ಪಂಡಿತರಾಧ್ಯ ಶಿವಾಚಾರ್ಯ ಸ್ವಾಮೀಜಿ ಹಾಗೂ ಅವಧೂತ ಸದ್ಗರು ವಿನಯ್‌ಗುರೂಜಿ ವಹಿಸುವರು.

Malnad Times App ಡೌನ್‌ಲೋಡ್ ಮಾಡಿಶಿವಮೊಗ್ಗ ಮತ್ತು ಮಲೆನಾಡಿನ ಸುದ್ದಿಗಳನ್ನು ತಕ್ಷಣ ಪಡೆಯಿರಿ.
GET IT ONGoogle Play

ಇದೇ ಸಂದರ್ಭದಲ್ಲಿ ಲಿಂ. ಶರಣೆ ಬಿ.ಕೆ. ಪಾರ್ವತಮ್ಮರ ಭಾವಚಿತ್ರಕ್ಕೆ ಪುಪ್ಪನಮನ ಮತ್ತು ಸಂಸ್ಮರಣ ಗ್ರಂಥ ಧರ್ಮಧುರಂಧರೆ ಎಂಬ ಜೀವನ ಚರಿತ್ರೆಯ ಪುಸ್ತಕ ಲೋಕಾರ್ಪಣೆ ಮಾಡಲಾಗುವುದು.

ಮುಖ್ಯಅತಿಥಿಗಳಾಗಿ ಸಂಸದ ಬಿ.ವೈ.ರಾಘವೇಂದ್ರ, ಶಾಸಕ ಆರಗ ಜ್ಞಾನೇಂದ್ರ ಮಾಜಿ ಸಚಿವ ಹರತಾಳು ಹಾಲಪ್ಪ, ಕಿಮ್ಮನೆ ರತ್ನಾಕರ, ಡಿಸಿಸಿ ಬ್ಯಾಂಕ್ ಆರ್.ಎಂ. ಮಂಜುನಾಥಗೌಡ, ಡಿಸಿಸಿ ಬ್ಯಾಂಕ್ ನಿರ್ದೇಶಕ ಮಹಾಲಿಂಗಯ್ಯ ಶಾಸ್ತ್ರಿ, ಶಿವಮೊಗ್ಗ ಜಿಲ್ಲಾ ಲಿಂಗಾಯಿತ ಸೇವಾ ಸಮಾಜ ಜ್ಯೋತಿಪ್ರಕಾಶ ಇನ್ನಿತರರು ಭಾಗವಹಿಸಲಿದ್ದಾರೆಂದು ಕೆ.ಆರ್.ಪ್ರಕಾಶ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮಾಹಿತಿ ಮತ್ತು ಮೂಲ: ಈ ವರದಿಯನ್ನು Malnad Times ಸಂಪಾದಕೀಯ ತಂಡವು ಲಭ್ಯ ಮಾಹಿತಿಯ ಆಧಾರದಲ್ಲಿ ಪರಿಶೀಲಿಸಿದೆ.

Mahesha Hindlemane

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್‌ಸೈಟ್‌ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 8 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್‌ಸೈಟ್‌ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ 'ಮಲ್ನಾಡ್ ಟೈಮ್ಸ್' ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ. ಇ-ಮೇಲ್ : [email protected]

error: Content is protected !!