RIPPONPETE ; ಸಿನಿಮಾ ಇನ್ನಿತರ ಡಿಜಿಟಲ್ ಮಾಧ್ಯಮದ ಭರಾಟೆಯಿಂದಾಗಿ ನಮ್ಮ ಗ್ರಾಮೀಣ ಜಾನಪದ ಮೂಲೆಗುಂಪಾಗುವ ಹಂತ ತಲುಪುವಂತಾದರೂ ಕೂಡಾ ಇನ್ನೂ ಗ್ರಾಮೀಣ ಪ್ರದೇಶದಲ್ಲಿ ಯುವಕರು ತಮ್ಮ ಗ್ರಾಮದಲ್ಲಿ ಸಂಘಟಿತರಾಗಿ ಅಳಿವಿನಂಚಿನಲ್ಲಿರುವ ಗ್ರಾಮೀಣ ಸೊಗಡಿನ ಬಳೆ ಕೋಲಾಟವನ್ನು ಜೀವಂತವಾಗಿ ಉಳಿಸಿಕೊಂಡು ಬಂದಿರುವುದರ ಬಗ್ಗೆ ಪ್ರೇಕ್ಷಕರ ಮನಸೂರೆಗೊಳಿಸಿದ ಕೋಲಾಟ ಪ್ರದರ್ಶನವೇ ಸಾಕ್ಷಿಕರಿಸುವಂತಾಯಿತು.
ಇಲ್ಲಿನ ಕರ್ನಾಟಕ ಪ್ರಾಂತೀಯ ಹಿಂದೂ ರಾಷ್ಟ ಸೇನಾ ಸಮಿತಿಯ 57ನೇ ವರ್ಷದ ಗಣೇಶೋತ್ಸವ ವೇದಿಕೆಯಲ್ಲಿ ಆಯೋಜಿಸಲಾದ ಹೆಸರಾಂತ ಜಾನಪದ ಆಯ್ದ ಆಹ್ವಾನಿತ ತಂಡಗಳ ಬಳೆಕೋಲಾಟ ಪ್ರದರ್ಶನ ಪ್ರೇಕ್ಷಕರನ್ನು ಜಾನಪದ ಲೋಕದಲ್ಲಿ ಮಂತ್ರಮಗ್ನರನ್ನಾಗಿ ಮಾಡಿತು.
ಸೆ.12 ರಂದು ರಾತ್ರಿ ಗಣಪತಿ ಮಂಟಪದಲ್ಲಿ ಮನೋರಂಜನಾ ಕಾರ್ಯಕ್ರಮದಲ್ಲಿ “ಬಳೆಕೋಲಾಟ’’ ಸ್ಪರ್ಧೆಯಲ್ಲಿ ತಮ್ಮ ಕಲಾ ಪ್ರದರ್ಶನವನ್ನು ನೀಡಿದರು.
ಇದೇ ಸಂದರ್ಭದಲ್ಲಿ ಕಳೆದ 50 ವರ್ಷಗಳಿಂದ ಧ್ವನಿವರ್ಧಕವನ್ನು ಅಳವಡಿಸುತ್ತಾ ದೇವರ ಸೇವೆಯನ್ನು ನಿರ್ವಿಘ್ನವಾಗಿ ನಿರ್ವಹಿಸಿಕೊಂಡು ಬರುತ್ತಿರುವ ಎಸ್.ದಾನಪ್ಪ ಮತ್ತು ಪುರೋಹಿತ ಸೇವೆಯನ್ನು ಮಾಡುತ್ತಾ ಬರುತ್ತಿರುವ ಆರ್ಚಕ ವೇ.ವಿ.ರಘುನಾತ ಭಟ್ (ರವಿಭಟ್) ಇವರನ್ನು ಸೇವಾ ಸಮಿತಿಯವರು ಸನ್ಮಾನಿಸಿ ಸತ್ಕರಿಸಿದರು.
ಗಣೇಶೋತ್ಸವ ಸೇವ ಸಮಿತಿಯ ಅಧ್ಯಕ್ಷ ರಾಮಚಂದ್ರ ಬಳೆಗಾರ್, ಎಂ.ಬಿ.ಮಂಜುನಾಥ, ಎಂ.ಸುರೇಶ್‌ಸಿಂಗ್, ಸುಧೀಂದ್ರ ಪೂಜಾರಿ, ಮುರುಳಿಧರ್ ಕೆರೆಹಳ್ಳಿ, ರವೀಂದ್ರ ಕೆರೆಹಳ್ಳಿ, ಹೆಚ್.ಎನ್.ಉಮೇಶ್, ವೈ.ಜೆ.ಕೃಷ್ಣ, ಈಶ್ವರ ಮಳಕೊಪ್ಪ, ನಾಗರಾಜ ಪವಾರ್, ರಾಘವೇಂದ್ರ ಚಿಪ್ಪಳಿ, ರಾಘವೇಂದ್ರ, ಪಿ.ಸುಧೀರ್, ಡಿ.ಈ. ರವಿಭೂಷಣ, ಆರ್.ರಾಘವೇಂದ್ರ, ಲಕ್ಷ್ಮಣ ಬಳ್ಳಾರಿ, ನಾಗರಾಜ ಕೆದಲುಗುಡ್ಡೆ, ಹೆಚ್.ಎನ್.ಚೋಳರಾಜ್, ಯೋಗೀಶ, ತೀರ್ಥೇಶ ಅಡಿಕಟ್ಟು, ಲಿಂಗಪ್ಪ, ಶ್ರೀನಿವಾಸ ಅಚಾರ್, ಬೇಕರಿ ನಾರಾಯಣ, ಲಕ್ಷ್ಮಣ ಆಟೋ, ಭೀಮರಾಜ್, ನವೀನ್, ಭಾಸ್ಕರ್, ಅಶೋಕ ಇನ್ನಿತರರು ಹಾಜರಿದ್ದರು.