Ripponpete

ಮಕ್ಕಳ ವಿದ್ಯಾಭ್ಯಾಸ ಕುಂಠಿತವಾದರೆ ಶಿಕ್ಷಕರಿಗೆ ಆತಂಕ ; ಬಿ.ಎಲ್ ರಾಜು

ರಿಪ್ಪನ್‌ಪೇಟೆ ; ರಾಷ್ಟ್ರೀಯ ಸೇವಾ ಯೋಜನೆಗೆ ಸಹಾಯ ಮತ್ತು ಸಹಕಾರ ಅಗತ್ಯ, ಜತೆಗೂಡಿ ಮಾಡಿದ ಕೆಲಸ ಸಹಾಯವಾದರೆ ಸಹಕಾರ ಎಂಬುದು ಮನುಷ್ಯನ ಗುಣವಾಗಿದೆ ಎಂದು ರಿಪ್ಪನ್‌ಪೇಟೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲ ಬಿ.ಎಲ್ ರಾಜು ಹೇಳಿದರು.

WhatsApp Group Join Now
Telegram Group Join Now
Instagram Group Join Now

ಬಾಳೂರು ಸ.ಹಿ.ಪ್ರಾ. ಶಾಲೆಯಲ್ಲಿ ಕಾಲೇಜು ಶಿಕ್ಷಣ ಇಲಾಖೆ, ಕುವೆಂಪು ವಿಶ್ವವಿದ್ಯಾಲಯ, ಸರ್ಕಾರಿ ಪ್ರಥಮ ದರ್ಜೆ ಕಾಲೇಜು ರಿಪ್ಪನ್‌ಪೇಟೆ, ರಾಷ್ಟ್ರೀಯ ಸೇವಾ ಯೋಜನೆ ಘಟಕ 1 ಮತ್ತು 2 ವಾರ್ಷಿಕ ಸೇವಾ ಶಿಬಿರ 2025-26 ಕಾರ್ಯಕ್ರಮವನ್ನು ಉದ್ಘಾಟಿಸಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳಿಗೆ ಕಷ್ಟ ಸುಖದ ಅರಿವಿನೊಂದಿಗೆ ಹಳ್ಳಿಯ ಜನರ ಜೀವನದ ಬದುಕಿನ ಬಗ್ಗೆ ಅರಿವು ಮೂಡಬೇಕು. ಒಂದೇ ಸೂರಿನಡಿ ಹಲವು ಮಕ್ಕಳ ಭಿನ್ನ ಭಿನ್ನವಾದ‌ ಅಭಿಪ್ರಾಯದೊಂದಿಗೆ ಬದುಕಲು ಮುಕ್ತ ಅವಕಾಶ ನೀಡಿ ಸರಳವಾಗಿ ಬದುಕಲು ಅವಕಾಶ ಮಾಡಿಕೊಡಬೇಕು. ಮಕ್ಕಳಲ್ಲಿ ಸಹಾಯ, ಸಹಕಾರದ ಮನೋಭಾವನೆ ಬೆಳೆಸಬೇಕು. ಮಕ್ಕಳ ವಿದ್ಯಾಭ್ಯಾಸ ಕುಂಠಿತವಾದರೆ ಶಿಕ್ಷಕರಿಗೆ ಆತಂಕವಾಗುತ್ತದೆ. ರಾಷ್ಟ್ರೀಯ ಸೇವಾ ಯೋಜನೆಗೆ ಸಮಾನತೆ, ಸಹೋದರತೆ ಧ್ಯೇಯ ವಾಕ್ಯವಾಗಿದೆ ಎಂದರು.

ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮುಖ್ಯ ಶಿಕ್ಷಕ ದುಗ್ಗಪ್ಪ ಜಿ, ಎಸ್‌ಡಿಎಂಸಿ ಅಧ್ಯಕ್ಷ ದೊಡ್ಡಯ್ಯ, ಘಟಕ 1 ಸಹಾಯಕ ಪ್ರಾಧ್ಯಾಪಕರು ಅಂಜನ್ ಕುಮಾರ್ ಟಿ, ಘಟಕ 2 ಸಹಾಯಕ ಪ್ರಾಧ್ಯಾಪಕಿ
ಕು. ನಯನ ಎಚ್, ಸಂಚಾಲಕ ಕುಮಾರ್,

Malnad Times App ಡೌನ್‌ಲೋಡ್ ಮಾಡಿಶಿವಮೊಗ್ಗ ಮತ್ತು ಮಲೆನಾಡಿನ ಸುದ್ದಿಗಳನ್ನು ತಕ್ಷಣ ಪಡೆಯಿರಿ.
GET IT ONGoogle Play

ಬಾಳೂರು ಗ್ರಾಪಂ ನಿಕಟಪೂರ್ವ ಅಧ್ಯಕ್ಷ ಶ್ರೀನಿವಾಸ್ ಆಚಾರ್, ಎಸ್‌ಡಿಎಂಸಿ ಉಪಾಧ್ಯಕ್ಷೆ ವಾಣಿ ಟೀಕಪ್ಪ, ಲೋಕೇಶ್ ಬಿ ಜೆ, ಗಣೇಶ್ ಬಿ ವೈ, ದೇವರಾಜ್ ಭಂಡಾರಿ, ರಾಘವೇಂದ್ರ ನೇರಲುಮನೆ, ಹರೀಶ್, ಸುಧಾ, ಶಾಂತ ಈಶ್ವರ್, ಭಾಗ್ಯ, ಪೂಜಾ, ವೆಂಕಟೇಶ್ ಮತ್ತಿತರರು ಉಪಸ್ಥಿತರಿದ್ದರು.
ನಂತರ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.

ವರದಿ: ದೇವರಾಜ್ ಭಂಡಾರಿ, ಬಾಳೂರು

ಮಾಹಿತಿ ಮತ್ತು ಮೂಲ: ಈ ವರದಿಯನ್ನು Malnad Times ಸಂಪಾದಕೀಯ ತಂಡವು ಲಭ್ಯ ಮಾಹಿತಿಯ ಆಧಾರದಲ್ಲಿ ಪರಿಶೀಲಿಸಿದೆ.

Mahesha Hindlemane

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್‌ಸೈಟ್‌ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 8 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್‌ಸೈಟ್‌ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ 'ಮಲ್ನಾಡ್ ಟೈಮ್ಸ್' ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ. ಇ-ಮೇಲ್ : [email protected]

error: Content is protected !!