Ripponpete

ನಿರ್ವಹಣೆ ಇಲ್ಲದೆ ಶಿಥಿಲಾವಸ್ಥೆಗೆ ತಲುಪಿದ ಬಾಳೂರು ಪ್ರಾಥಮಿಕ ಆರೋಗ್ಯ ಉಪಕೇಂದ್ರ !

ರಿಪ್ಪನ್‌ಪೇಟೆ ; ಬಾಳೂರು ಗ್ರಾಮದಲ್ಲಿ ನಿರ್ಮಿಸಲಾಗಿರುವ ಪ್ರಾಥಮಿಕ ಆರೋಗ್ಯ ಉಪಕೇಂದ್ರದ ಕಟ್ಟದ ನಿರ್ವಹಣೆಯಿಲ್ಲದೆ ಕಿಟಕಿ, ಬಾಗಿಲುಗಳು ಮುರಿದು ಉದುರಿ ಬೀಳುತ್ತಿವೆ.

WhatsApp Group Join Now
Telegram Group Join Now
Instagram Group Join Now
📢 Stay Updated! Join our WhatsApp Channel Now →

ಹೌದು, ಪ್ರಾಥಮಿಕ ಆರೋಗ್ಯ ಉಪಕೇಂದ್ರ ಕಟ್ಟಡದ ಒಳಭಾಗದಲ್ಲಿನ ಒಳರೂಪ್ ಮರದ ಹಲಗೆಗಳು ಮತ್ತು ಹಿಂಬಾಗಿಲು ಮತ್ತು ನೀರಿನ ತೋಟಿ ಸಹ ಸಂಪೂರ್ಣವಾಗಿ ನಿರ್ವಹಣೆಯಿಲ್ಲದೆ ಉದುರಿ ಬೀಳುತ್ತಿವೆ. ಇನ್ನೂ ಈ ಪ್ರಾಥಮಿಕ ಉಪಕೇಂದ್ರ ವ್ಯಾಪ್ತಿಗೆ ಬಾಳೂರು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ನೆವಟೂರು, ಕಾಳೇಶ್ವರ, ಹಾಲುಗುಡ್ಡೆ ಮಾದ್ಲಾರದಿಂಬ, ಬಾಳೂರು, ಕುಕ್ಕಳಲೆ, ನೇರಲುಮನೆ ಸೇರಿದಂತೆ ಮಜರೆ ಗ್ರಾಮಗಳ ಸುಮಾರು 8 ರಿಂದ 10 ಸಹಸ್ರ ಜನಸಂಖ್ಯೆ ಹೊಂದಿದ್ದು ಇಲ್ಲಿನ ಆರೋಗ್ಯ ಉಪಕೇಂದ್ರದಲ್ಲಿ ಸಮುದಾಯ ಆರೋಗ್ಯಾಧಿಕಾರಿ ಇಲ್ಲದೆ ರೋಗಿಗಳು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.

ಈ ಉಪಕೇಂದ್ರದಲ್ಲಿ ಕರ್ತವ್ಯದಲ್ಲಿದ್ದ ಆರೋಗ್ಯಾಧಿಕಾರಿ ಹೇಳದ ಕೇಳದೆ ಹೋಗಿದ್ದು ಇದರಿಂದಾಗಿ ಆರೋಗ್ಯ ಕಾರ್ಯಕರ್ತೆಯೊಬ್ಬರೆ ನಿರ್ವಹಣೆ ಮಾಡುವುದೇ ಕಷ್ಟಕರವಾಗಿದೆ. ಒಂದು ಕಡೆ ರಿಪ್ಪನ್‌ಪೇಟೆ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೂ ನಿಯೋಜಿಸುತ್ತಾರೆ ಮತ್ತು ಸರ್ಕಾರ ಇಲಾಖೆಯ ಮಾಹಿತಿಯನ್ನು ಪ್ರತಿ ಹಳ್ಳಿ-ಹಳ್ಳಿ ಸುತ್ತಿ ಪಡೆದು ಮಾಹಿತಿ ನೀಡುವುದು ಈ ಎಲ್ಲಾ ಕೆಸಲವನ್ನು ಮಾಡಿ ಸಾರ್ವಜನಿಕರಿಂದಲೂ ದೂರು ಬಾರದಂತೆ ಕರ್ತವ್ಯವನ್ನು ನಿರ್ವಿಘ್ನದಿಂದ ನಿರ್ವಹಿಸಿದರೂ ಕೂಡಾ ಗ್ರಾಮಸ್ಥರು, ಸಾರ್ವಜನಿಕರಿಂದ ಆರೋಪ ಕೇಳಿ ಬಂದ ಕಾರಣ ತೀವ್ರ ಆಸಮದಾನಕ್ಕೆ ಎಡೆಮಾಡಿಕೊಟ್ಟಂತಾಗಿದೆ.

Malnad Times App ಡೌನ್‌ಲೋಡ್ ಮಾಡಿಶಿವಮೊಗ್ಗ ಮತ್ತು ಮಲೆನಾಡಿನ ಸುದ್ದಿಗಳನ್ನು ತಕ್ಷಣ ಪಡೆಯಿರಿ.
GET IT ONGoogle Play
ಮಾಹಿತಿ ಮತ್ತು ಮೂಲ: ಈ ವರದಿಯನ್ನು Malnad Times ಸಂಪಾದಕೀಯ ತಂಡವು ಲಭ್ಯ ಮಾಹಿತಿಯ ಆಧಾರದಲ್ಲಿ ಪರಿಶೀಲಿಸಿದೆ.

Mahesh Hindlemane

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್‌ಸೈಟ್‌ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 8 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್‌ಸೈಟ್‌ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ <strong>'ಮಲ್ನಾಡ್ ಟೈಮ್ಸ್'</strong> ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ. <a href="mailto:[email protected]">[email protected]</a>