ರಿಪ್ಪನ್ಪೇಟೆ: ಇಲ್ಲಿನ ಐತಿಹಾಸಿಕ ಹಿನ್ನೆಲೆಯುಳ್ಳ ಜಂಬಳ್ಳಿ ಗ್ರಾಮದ ಶ್ರೀ ಬಂಡಿಯಮ್ಮ ದೇವಿಯ ವಾರ್ಷಿಕ ಕಾರ್ತೀಕ ಮಹೋತ್ಸವವು ಅತ್ಯಂತ ಭಕ್ತಿ ಹಾಗೂ ಸಡಗರದ ವಾತಾವರಣದಲ್ಲಿ ಯಶಸ್ವಿಯಾಗಿ ಜರುಗಿತು.
ಉತ್ಸವದ ಅಂಗವಾಗಿ ಎರಡು ಕಲ್ಲಿನ ಚಕ್ರಗಳ ವಿಶೇಷ ಬಂಡಿಯನ್ನು ಬಾಳೆಕಂಬ, ಕಬ್ಬಿನ ಜಲ್ಲೆ ಹಾಗೂ ಮಾವಿನ ತೋರಣಗಳಿಂದ ಸಾಂಪ್ರದಾಯಿಕವಾಗಿ ಸಿಂಗರಿಸಲಾಗಿತ್ತು. ವಿದ್ಯುತ್ ದೀಪಗಳು ಮತ್ತು ಬಗೆಬಗೆಯ ಹೂವುಗಳಿಂದ ಅಲಂಕೃತಗೊಂಡ ಈ ಬಂಡಿಯಲ್ಲಿ ದೇವಿಯನ್ನು ಪ್ರತಿಷ್ಠಾಪಿಸಲಾಯಿತು. ಹುಂಚದ ವೇ.ಶಾಂತಯ್ಯ ಅವರ ಪೌರೋಹಿತ್ಯದಲ್ಲಿ ದೇವಿಗೆ ವಿಶೇಷ ಪೂಜಾ ವಿಧಿವಿಧಾನಗಳನ್ನು ನೆರವೇರಿಸಲಾಯಿತು.
ಪೂಜೆಯ ಬಳಿಕ ನೆರೆದಿದ್ದ ಭಕ್ತರಿಗೆ ಮಹಾಮಂಗಳಾರತಿ ಹಾಗೂ ತೀರ್ಥ-ಪ್ರಸಾದ ವಿತರಣೆ ಮಾಡಲಾಯಿತು. ಇದೇ ವೇಳೆ, ಕಳೆದ ವರ್ಷ ತಮ್ಮ ಇಷ್ಟಾರ್ಥ ಸಿದ್ಧಿಗಾಗಿ ಹರಕೆ ಹೊತ್ತಿದ್ದ ಅನೇಕ ಮಹಿಳೆಯರು, ಈ ಬಾರಿಯ ಉತ್ಸವದಲ್ಲಿ ತಮ್ಮ ಹರಕೆಗಳನ್ನು ತೀರಿಸಿ, ಕುಟುಂಬದ ಸುಖ-ಶಾಂತಿ ಹಾಗೂ ಶ್ರೇಯಸ್ಸಿಗಾಗಿ ದೇವಿಯಲ್ಲಿ ಪ್ರಾರ್ಥನೆ ಸಲ್ಲಿಸಿದರು.
ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಜೆ.ಎಂ.ಶಾಂತಕುಮಾರ್, ಜೆ.ನಾಗಭೂಷಣಗೌಡ, ಶಿವಾನಂದಪ್ಪಗೌಡ, ಗಾಯಿತ್ರಿ ಮುರುಗೇಂದ್ರಪ್ಪಗೌಡ, ಜಯಪ್ಪಗೌಡ ಸಂಪಳ್ಳಿ, ಸುಮಿತ್ರಮ್ಮ, ಜಗದೀಶಗೌಡರು, ಜೆ.ಸದಾನಂದ, ಮಿತ್ರ ಸದಾನಂದ, ನಾಗವೇಣಮ್ಮ, ಸಹನಾ ಶಾಂತಕುಮಾರ್, ಕಮಲಾಕ್ಷ, ನಾಗೇಂದ್ರಗೌಡ, ಶಿವಣ್ಣ, ಶರತ್, ಅರ್ಚನಾ ವೀರಣ್ಣಗೌಡ, ವಿರೇಂದ್ರಗೌಡ, ಜೆ.ವಿ.ಸದಾನಂದಗೌಡ, ಶಿವಲಿಂಗೇಶ, ಶಶಿಕುಮಾರ್, ಜ್ಞಾನೇಂದ್ರ, ವಸಂತಮ್ಮ, ಮೈತ್ರಿ, ಗೌರಮ್ಮ, ನಟರಾಜ, ಸುಮ ಲಾಲ್ಬಹದ್ದೂರು, ಸುಮ ಶಿವಲಿಂಗೇಶ್, ಯಶೋಧಮ್ಮ ಈಶ್ವರಪ್ಪ, ಶಾಂತಮ್ಮ, ನಾಗಭೂಷಣ, ದಾಕ್ಷಾಯಿಣಿ ಶಶಿಕುಮಾರ್, ಈಶ್ವರಪ್ಪಗೌಡ ಜಂಬಳ್ಳಿ, ರೇಖಾ ನಟರಾಜ್, ಬಿ.ಎನ್.ರವಿ, ಆರ್.ಈ.ಭುವನೇಂದ್ರ ಹಾಗೂ ಕೆ.ಬಿ.ರಮೇಶ ಸೇರಿದಂತೆ ಗ್ರಾಮಸ್ಥರು ಪಾಲ್ಗೊಂಡಿದ್ದರು.

