ಪಕ್ಷ ಸಂಘಟನೆಗೆ ಮುಂದಾಗಿ ; ಹೊಸನಗರದಲ್ಲಿ ನೂತನ ಜೆಡಿಎಸ್ ಜಿಲ್ಲಾಧ್ಯಕ್ಷ ರಾಮಕೃಷ್ಣ ಸಲಹೆ

Written by Mahesha Hindlemane

Published on:

ಹೊಸನಗರ ; ಗ್ರಾ.ಪಂ., ಪ.ಪಂ., ತಾ.ಪಂ ಮತ್ತು ಜಿ.ಪಂ. ಚುನಾವಣೆಗಳು ಸಮೀಪಿಸಲಿದ್ದು ಹೊಸನಗರ ತಾಲ್ಲೂಕಿನಲ್ಲಿ ಜೆಡಿಎಸ್ ಪಕ್ಷದ ಕಾರ್ಯಕರ್ತರು ಹಗಲಿರುಳು ದುಡಿದು ಜೆಡಿಎಸ್ ಪಕ್ಷವನ್ನು ಬಲಪಡಿಸುವುದರ ಜೊತೆಗೆ ಚುನಾವಣೆಯಲ್ಲಿ ಜಯಭೇರಿ ಬಾರಿಸುವಂತಾಗಲಿ ಎಂದು ಹೊಸನಗರ ತಾಲ್ಲೂಕು ಜೆಡಿಎಸ್ ಪಕ್ಷದ ಅಧ್ಯಕ್ಷ ರಿಪ್ಪನ್‌ಪೇಟೆ ವರ್ತೇಶ್‌ ಎನ್ ಹೇಳಿದರು.

WhatsApp Group Join Now
Telegram Group Join Now
Instagram Group Join Now
📢 Stay Updated! Join our WhatsApp Channel Now →

ಇಲ್ಲಿನ ಗಾಯತ್ರಿ ಮಂದಿರದಲ್ಲಿ ಕಾರ್ಯಕರ್ತರ ಸಭೆ ಹೊಸ ಪದಾಧಿಕಾರಿಗಳ ಆಯ್ಕೆ ಹಾಗೂ ನೂತನ ಜಿಲ್ಲಾಧ್ಯಕ್ಷ ರಾಮಕೃಷ್ಣರಿಗೆ ಸನ್ಮಾನ ಸಮಾರಂಭವನ್ನು ಏರ್ಪಡಿಸಲಾಗಿದ್ದು ಈ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜೆಡಿಎಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತರಾಗಿದ್ದು ಅವರು ಎಂದಿಗೂ ಜೆಡಿಎಸ್ ಪಕ್ಷ ತೊರೆಯುವರಲ್ಲ. ಕೆಲವು ಪಕ್ಷಗಳಲ್ಲಿ ಕೆಲವು ಕಾರ್ಯಕರ್ತರು ಚುನಾವಣೆಯ ಸಂದರ್ಭದಲ್ಲಿ ಒಂದು ಪಕ್ಷ ಚುನಾವಣೆಯ ನಂತರ ಗೆದ್ದವರಿಗೆ ಜೈ ಎನ್ನುವವರು. ಆದರೆ ಜೆಡಿಎಸ್ ಪಕ್ಷದ ಕಾರ್ಯಕರ್ತರು ಸೋತರು, ಗೆದ್ದರೂ ಒಂದೇ ಪಕ್ಷದಲ್ಲಿದ್ದು ಕಷ್ಟ-ಸುಖಗಳಲ್ಲಿ ಎಲ್ಲರೂ ಒಟ್ಟಾಗುತ್ತಾರೆ. ಇಂಥಹ ಪಕ್ಷದಲ್ಲಿ ದುಡಿಯುವುತ್ತಿರುವುದಕ್ಕೆ ಹೆಮ್ಮೆಯಾಗುತ್ತದೆ. ಇಂದಿನಿಂದಲೇ ನಮ್ಮ ಜೆಡಿಎಸ್ ಪಕ್ಷದ ಕಾರ್ಯಕರ್ತರು ಒಟ್ಟಾಗಿ ಹೊಂದಾಣಿಕೆಯಿಂದ ಬಡವರ, ದೀನ ದಲಿತರ, ಶೋಷಿತರ ಪರವಾಗಿ ಧ್ವನಿಯಾಗಿ ಕೆಲಸ ಮಾಡೋಣ ಎಂದರು.

ಪಕ್ಷ ಸಂಘಟನೆಗೆ ಮುಂದಾಗಿ ; ರಾಮಕೃಷ್ಣ ಸಲಹೆ

ಶಿವಮೊಗ್ಗ ಜಿಲ್ಲಾ ನೂತವಾಗಿ ಜೆಡಿಎಸ್ ಪಕ್ಷದ ಅಧ್ಯಕ್ಷ ರಾಮಕೃಷ್ಣ ಸನ್ಮಾನ ಸ್ವೀಕರಿಸಿ ಮಾತನಾಡಿ, ರಾಜ್ಯದ ರೈತರ ಹಿತ ಕಾಪಾಡುವುದು, ಬಡವರ ಶೋಷಣೆ ತಪ್ಪಿಸುವುದು ಹಾಗೂ ಗ್ರಾಮಾಭಿವೃದ್ಧಿಗೆ ಸಂಪೂರ್ಣ ಸಹಕಾರ ನೀಡುವ ದೇಶದ ಏಕೈಕ ರಾಜಕೀಯ ಪಕ್ಷ ಎಂದರೆ ಅದು ಜಾತ್ಯತೀತ ಜನತಾದಳ. ಮುಂಬರುವ ಗ್ರಾ.ಪಂ., ತಾಲ್ಲೂಕು ಮತ್ತು ಜಿಲ್ಲಾ ಪಂಚಾಯಿತಿ ಹಾಗೂ ಸ್ಥಳೀಯ ಚುನಾವಣೆಗಳಲ್ಲಿ ಪಕ್ಷಗಳಲ್ಲಿ ಹಾಗೂ ಸ್ಥಳೀಯ ಚುನಾವಣೆಗಳಲ್ಲಿ ಪಕ್ಷವನ್ನು ಬೂತ್ ಮಟ್ಟದಲ್ಲಿ ಸಂಘಟಿಸುವ ಮೂಲಕ ಪಕ್ಷಕ್ಕೆ ಶಕ್ತಿ ತುಂಬುವ ಕೆಲಸವನ್ನು ಕಾರ್ಯಕರ್ತರು ಮಾಡಬೇಕಾಗಿದೆ ಈ ಬಾರಿ ಪಕ್ಷ ಎಲ್ಲಾ ಸ್ಥಳೀಯ ಚುನಾವಣೆಯಲ್ಲಿ ಏಕಾಂಗಿ ಹೋರಾಟ ನಡೆಸಲಿದ್ದು ರಾಜ್ಯದಲ್ಲಿ ಮತ್ತೊಮ್ಮೆ ಜೆಡಿಎಸ್ ಪಕ್ಷ ಅಧಿಕಾರದ ಗದ್ದುಗೆ ಏರುವಲ್ಲಿ ಯಾವ ಸಂದೇಹ ಬೇಡವೆಂದರು.

ಜೆಡಿಎಸ್ ಪಕ್ಷದ ಹಿರಿಯರು ಹಾಗೂ ಪ್ರಧಾನ ಕಾರ್ಯದರ್ಶಿ ಚಾಬುಸಾಬ್‌ ಮಾತನಾಡಿ, ಜೆಡಿಎಸ್ ಪಕ್ಷದ ಕಾರ್ಯಕರ್ತರು ಯಾರು ಸುಮ್ಮನೆ ಕುಳಿತುಕೊಂಡಿಲ್ಲ. ಬಿಜೆಪಿ ಹಾಗೂ ಜೆಡಿಎಸ್ ಹೊಂದಾಣಿಕೆಯಿಂದ ಪಕ್ಷದ ಕಾರ್ಯಕರ್ತರು ಗಲಿಬಿಲಿಗೊಂಡಿದ್ದಾರೆ. ಯಾವ ಪಕ್ಷದೊಂದಿಗೆ ಹೊಂದಾಣಿಕೆ ಮಾಡಿಕೊಂಡರು ಜೆಡಿಎಸ್ ಪಕ್ಷದ ಕಾರ್ಯಕರ್ತರು ಜೆಡಿಎಸ್ ಪಕ್ಷದ ಕಾರ್ಯಕರ್ತರಾಗಿ ಉಳಿಯುತ್ತಾರೆ. ಪಕ್ಷಕ್ಕಾಗಿ ದುಡಿಯುತ್ತಾರೆ. ಜೆಡಿಎಸ್ ಪಕ್ಷದ ಮಾಜಿ ಪ್ರಧಾನಿ ದೇವೇಗೌಡ, ಸಚಿವ ಕುಮಾರಸ್ವಾಮಿಯವರಿಗೆ ಬೆನ್ನೆಲುಬಾಗಿ ಕೆಲಸ ಮಾಡುವುದರ ಜೊತೆಗೆ ಕುಮಾರಸ್ವಾಮಿಯವರನ್ನು ಮುಂದಿನ ಮುಖ್ಯಮಂತ್ರಿ ಮಾಡುವವರೆಗೆ ಹಗಲಿರುಳು ದುಡಿಯುತ್ತಾರೆಂದರು.

ಈ ಕಾರ್ಯಕ್ರಮದಲ್ಲಿ ಜೆಡಿಎಸ್ ಪಕ್ಷದ ರಾಜ್ಯ ಮುಖಂಡ ಮಾಜಿ ಶಾಸಕ ಪ್ರಸನ್ನಕುಮಾರ್, ಜಿಲ್ಲಾ ಮಾಜಿ ಅಧ್ಯಕ್ಷ ಕಡಿದಾಳು ಗೋಪಾಲ್, ತಾಲ್ಲೂಕು ಜೆಡಿಸ್ ನಿಕಟಪೂರ್ವ ಅಧ್ಯಕ್ಷ ಎಂ.ವಿ. ಜಯರಾಮ್, ಜಿಲ್ಲಾ ಉಪಾಧ್ಯಕ್ಷ ವರದರಾಜ್, ಜಿಲ್ಲಾ ಮಹಿಳಾ ಅಧ್ಯಕ್ಷೆ ಗೀತಾ ಸತೀಶ್, ಉಪಾಧ್ಯಕ್ಷೆ ಜಿ.ವಿ ಮಂಜುಳ, ರಿಪ್ಪನ್‌ಪೇಟೆ ಚಾಬುಸಾಬ್, ಜಯನಗರ ಸುಮತಿಪೂಜಾರ್, ಮಾಡಬಾಗಿಲು ರಮಾನಂದ, ಜಯನಗರ ಷಣ್ಮುಖ, ನರಸಿಂಹ, ರಮೇಶ್ ನಾಯಕ್, ಕಾಯಿ ನಾಗೇಶ್, ಹರೀಶ್, ಜಬಗೋಡು ಹಾಲಪ್ಪ ಗೌಡ, ವೀಣಾ ಇನ್ನೂ ಮುಂತಾದವರು ಉಪಸ್ಥಿತರಿದ್ದರು.

Leave a Comment