ಶಾಸಕ ಬೇಳೂರು ಗೋಪಾಲಕೃಷ್ಣ ದೇವಸ್ಥಾನ ಅಭಿವೃದ್ಧಿಗೂ ಅಡ್ಡಗಾಲು ಹಾಕಿದ್ದಾರೆ  ; ಹರತಾಳು ಹಾಲಪ್ಪ

Written by Mahesh Hindlemane

Updated on:

ರಿಪ್ಪನ್‌ಪೇಟೆ ; ಇತಿಹಾಸ ಪ್ರಸಿದ್ದ ಹೆಬ್ಬಂಡೆ ಆಲಯ ಅಮ್ಮನಘಟ್ಟ ಶ್ರೀ ಜೇನುಕಲ್ಲಮ್ಮ ದೇವಸ್ಥಾನದ ಅಭಿವೃದ್ದಿಗೂ ಶಾಸಕ ಬೇಳೂರು ಗೋಪಾಲಕೃಷ್ಣ ಅಡ್ಡಗಾಲು ಹಾಕಿದ್ದಾರೆ ಎಂದು ಮಾಜಿ ಸಚಿವ ಹರತಾಳು ಹಾಲಪ್ಪ ಗಂಭೀರ ಆರೋಪ ಮಾಡಿದರು.

WhatsApp Group Join Now
Telegram Group Join Now
Instagram Group Join Now

ಕೋಡೂರು ಸಮೀಪದ ಅಮ್ಮನಘಟ್ಟ ಜೇನುಕಲ್ಲಮ್ಮ ದೇವಸ್ಥಾನದಲ್ಲಿ ಶುಕ್ರವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನಮ್ಮ ಸರ್ಕಾರದ ಅಧಿಕಾರದ ಅವಧಿಯಲ್ಲಿ 1 ಕೋಟಿ ರೂ. ಜೇನುಕಲ್ಲಮ್ಮ ದೇವಸ್ಥಾನದ ಸಮಗ್ರ ಅಭಿವೃದ್ದಿಗೆ ರಾಜ್ಯ ನೀರಾವರಿ ನಿಗಮದ ಮೂಲಕ ಅನುದಾನವನ್ನು ಬಿಡುಗಡೆ ಮಾಡಲಾಗಿದ್ದು ಜಿಲ್ಲಾಧಿಕಾರಿಗಳ ಉಸ್ತುವಾರಿಯಲ್ಲಿ ನಿರ್ಮಿತಿ ಕೇಂದ್ರಕ್ಕೆ ಕಾಮಗಾರಿ ನಿರ್ವಹಿಸಲು ಅನುಮತಿ ನೀಡಿತು. ಬದಲಾದ ಸರ್ಕಾರ, ಸ್ಥಳೀಯ ಶಾಸಕರು ಈ ಹಣ ಬಿಡುಗಡೆಗೆ ಅಡ್ಡಿಪಡಿಸಿ ಬಿಡುಗಡೆಯಾದ ಒಂದು ಕೋಟಿ ಹಣ ವಾಪಾಸ್ ಸರ್ಕಾರಕ್ಕೆ ಹೋಗುವಂತಾಗಿದೆ ಎಂದು ದಾಖಲೆ ಬಿಡುಗಡೆ ಮಾಡಿ ವಿವರಿಸಿದರು.

ವಿಡಿಯೋ ವೀಕ್ಷಿಸಲು ಈ ಲಿಂಕ್ ಮೇಲೆ ಕ್ಲಿಕ್ ಮಾಡಿ

ಕೇಂದ್ರ ಸರ್ಕಾರದ ಪ್ರವಾಸೋದ್ಯಮ ಇಲಾಖೆ ಮತ್ತು ರಾಜ್ಯ ಸರ್ಕಾರದ ಸಹಯೋಗದಲ್ಲಿ ಕ್ಷೇತ್ರವನ್ನು ಪ್ರವಾಸಿ ಹಾಗೂ ಧಾರ್ಮಿಕ ತಾಣವನ್ನಾಗಿ ಮಾಡುವ ಸಂಕಲ್ಪ ನಮ್ಮದಾಗಿತು. ಬದಲಾದ ಕಾಲಘಟ್ಟದಲ್ಲಿ ಕ್ಷೇತ್ರದ ಅಭಿವೃದ್ದಿ ಕಾರ್ಯ ಕುಂಠಿತಗೊಳ್ಳುವಂತಾದರೂ ಕೂಡಾ ಜೇನುಕಲ್ಲಮ್ಮ ದೇವಿಯ ಕೃಪೆಯಿಂದಾಗಿ ಮತ್ತು ಸಮರ್ಥ ಆಡಳಿತ ಮಂಡಳಿಯ ಕಾರ್ಯಕ್ಷಮತೆಯನ್ನು ಕಂಡು ಭಕ್ತ ಸಮೂಹ ದೇಣಿಗೆ ನೀಡುವುದರೊಂದಿಗೆ ಸುಸಜ್ಜಿತ ಶಿಲಾಮಯ ದೇವಸ್ಥಾನ ನಿರ್ಮಾಣಗೊಂಡು ಕಳೆದ ಜೂನ್ ತಿಂಗಳಲ್ಲಿ ಲೋಕಾರ್ಪಣೆಗೊಂಡು ಭಕ್ತರಿಗೆ ದರ್ಶನ ಭಾಗ್ಯ ಪಡೆಯುವಂತೆ ಮಾಡಲಾಗಿದೆ ಎಂದು ದೇವಸ್ಥಾನ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಬಿ.ಸ್ವಾಮಿರಾವ್ ಮತ್ತು ಇತರ ಪದಾಧಿಕಾರಿಗಳ ಸೇವೆಯನ್ನು ಪ್ರಶಂಸಿ ಈ ದೇವಸ್ಥಾನಕ್ಕೆ ಸುಮಾರು 26 ಎಕರೆ ಜಮೀನು ಹೊಂದಿದೆ. ಇದು ಅರಣ್ಯ, ಕಂದಾಯ ಇಲಾಖೆಯ ಜಂಟಿ ವ್ಯಾಪ್ತಿಗೆ ಒಳಪಡುವುದರಿಂದ ಜಮೀನು ಗಡಿ ಗುರುತಿಸಿಕೊಳ್ಳುವುದು ಕಷ್ಟಕರವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಅಭಿವೃದ್ಧಿ ಕಾರ್ಯಕ್ಕೆ ಬಿಡದಿರುವುದರ ಬಗ್ಗೆ ಪ್ರಸ್ತಾಪಿಸಿ ಮುಂದಿನ ದಿನಗಳಲ್ಲಿ ಬರುವ ವ್ಯವಸ್ಥಾಪನಾ ಸಮಿತಿಯವರು ಅಭಿವೃದ್ದಿಯಲ್ಲಿ ರಾಜಕೀಯ ಮಾಡದೆ ಕ್ಷೇತ್ರದ ಆಭಿವೃದ್ದಿಯೊಂದಿಗೆ ಪ್ರವಾಸಿ ಕೇಂದ್ರವನ್ನಾಗಿಸಲು ಶ್ರಮಿಸುವಂತಾಗಲಿ ಎಂದರು.

ಸರ್ಕಾರದಿಂದ ಅಮ್ಮನಘಟ್ಟ ದೇವಸ್ಥಾನದ ಅಭಿವೃದ್ದಿಗೆ ನೀರಾವರಿ ನಿಗಮದಿಂದ 1 ಕೋಟಿ ರೂ. ಹಣವನ್ನು ಬಿಡುಗಡೆ ಮಾಡಿ ನಿರ್ಮಿತಿ ಕೇಂದ್ರಕ್ಕೆ ಕಾಮಗಾರಿಯ ನಿರ್ವಹಣೆಯ ಹೊಣೆ ನೀಡಲಾದರೂ ಕೂಡಾ ಅಧಿಕಾರಿ ವರ್ಗ ಗಂಟು ಹೊಡೆಯಲು ಮುಂದಾಗಿದ್ದು ಈ ಬಗ್ಗೆ ನಾನು ಕಛೇರಿಯ ಮುಂದೆ ಅಧಿಕಾರಿಗಳ ವರ್ತನೆ ವಿರೋಧಿಸಿ ಪ್ರತಿಭಟನೆ ಸಹ ನಡೆಸಿರುವೆ.
– ಬಿ. ಸ್ವಾಮಿರಾವ್, ಅಮ್ಮನಘಟ್ಟ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ

ಬಿಜೆಪಿ ತಾಲ್ಲೂಕು ಅಧ್ಯಕ್ಷ ಮತ್ತಿಮನೆ ಸುಬ್ರಹ್ಮಣ್ಯ, ಬಿಜೆಪಿ ಮಹಾಶಕ್ತಿಕೇಂದ್ರ ಅಧ್ಯಕ್ಷ ಎನ್.ಸತೀಶ್, ಮುಖಂಡರಾದ ಆರ್.ಟಿ.ಗೋಪಾಲ, ಮನೋಧರ, ಅಬ್ಬಿ ಕಿರಣ್‌ಕುಮಾರ್, ಹಾಲಗದ್ದೆ ಉಮೇಶ್, ನಗರ ನಿತಿನ್, ಸುಧೀರ್‌ಭಟ್ ಕೋಡೂರು, ವಿಜೇಂದ್ರರಾವ್ ಕೋಡೂರು, ಜ್ಯೋತಿ, ಸುಮಾ, ಅಭಿಲಾಶ್, ಮಂಡಾನಿ ಮೋಹನ್, ಕೆ.ಬಿ.ಹೂವಪ್ಪ, ಮೆಣಸೆ ಆನಂದ್, ಇನ್ನಿತರ ಮುಖಂಡರು ಹಾಜರಿದ್ದರು.

Leave a Comment