ಶಿಕ್ಷಣ ವ್ಯವಸ್ಥೆಯಲ್ಲಿ ಭಾರತ ದೇಶ ಗಟ್ಟಿತನದಲ್ಲಿದೆ ; ಶಾಸಕ ಬೇಳೂರು ಗೋಪಾಲಕೃಷ್ಣ

Written by malnadtimes.com

Published on:

HOSANAGARA | ಶಿಕ್ಷಣ ವ್ಯವಸ್ಥೆಯು
ಬಲಗೊಂಡಷ್ಟು ದೇಶದ ಪ್ರಗತಿಯ ವೇಗ
ಹೆಚ್ಚುತ್ತದೆ ಅದರಲ್ಲಿ ಭಾರತ ದೇಶ ಶಿಕ್ಷಣ
ವ್ಯವಸ್ಥೆಯಲ್ಲಿ ಗಟ್ಟಿತನದಲ್ಲಿದೆ ಎಂದು ಶಾಸಕ
ಬೇಳೂರು ಗೋಪಾಲಕೃಷ್ಣ (Beluru Gopalkrishna) ತಿಳಿಸಿದರು.

WhatsApp Group Join Now
Telegram Group Join Now
Instagram Group Join Now

ಇಲ್ಲಿನ ಈಡಿಗರ ಭವನದಲ್ಲಿ ಗುರುವಾರ ಏರ್ಪಡಿಸಿದ್ದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿ, ಶಿಕ್ಷಕರು ಆದರ್ಶ ಪ್ರಜೆಗಳನ್ನು ರೂಪಿಸುವ ಗುರುತರ ಜವಾಬ್ದಾರಿಯನ್ನು ಹೊಂದಿದ್ದಾರೆ. ಉತ್ತಮ ವ್ಯಕ್ತಿತ್ವ ನಿರ್ಮಾಣ ಮಾಡುವುದಷ್ಟೇ ಅಲ್ಲ, ಇಡೀ ವ್ಯವಸ್ಥೆಯನ್ನು ಬದಲಾಯಿಸುವ ಶಕ್ತಿ  ಶಿಕ್ಷಕರಿಗೆ ಇದೆ. ಈ ಕಾರಣಕ್ಕೆ ಶಿಕ್ಷಕರು ಜವಾಬ್ದಾರಿಯನ್ನು ಅರಿತು ಕೆಲಸ ಮಾಡಬೇಕು ಎಂದರು.

ಹಿಂದಿನ ಕಾಲದ ಶಿಕ್ಷಣ ವ್ಯವಸ್ಥೆಗೂ ಇಂದಿನ
ವ್ಯವಸ್ಥೆಗೂ ಅಜಗಜಾಂತರ ವ್ಯವಸ್ಥೆಯಿದೆ. ಹಿಂದೆ ಮಕ್ಕಳಿಗೆ ಶಿಕ್ಷೆ ನೀಡುವುದು ಸಾಮಾನ್ಯವಾಗಿತ್ತು. ಈಗ ಹಾಗೆ ಮಾಡುವಂತಿಲ್ಲ. ಶಿಕ್ಷಣದ
ಪರಿಕಲ್ಪನೆಯಲ್ಲಿಯೂ ಸಾಕಷ್ಟು
ಬದಲಾವಣೆಗಳಾಗಿವೆ ಎಂದ ಅವರು ತಮ್ಮ
ಶಾಲಾ ದಿನಗಳನ್ನು ನೆನಪು ಮಾಡಿಕೊಂಡರು.


ಶಾಸಕ ಆರಗ ಜ್ಞಾನೇಂದ್ರ ಮಾತನಾಡಿ,
ಎಸ್.ರಾಧಾಕೃಷ್ಣನ್‌ ಅವರಂತಹ ಮೇರು ವ್ಯಕ್ತಿತ್ವ ಹೊಂದಿದವರು ನಮ್ಮ ದೇಶದಲ್ಲಿದ್ದರು
ಎನ್ನುವುದು ಪ್ರತಿಯೊಬ್ಬರ ಭಾರತೀಯನಿಗೂ
ಹೆಮ್ಮೆಯ ವಿಷಯ. ದೇಶ ಶಿಕ್ಷಣ
ಕ್ಷೇತ್ರದಲ್ಲಿ ಗುರುತರ ಸಾಧನೆ ಮಾಡಿದ್ದು,
ಹಲವು ಕ್ಷೇತ್ರಗಳಲ್ಲಿ ಭಾರತೀಯರು
ಪ್ರಸಿದ್ಧರಾಗಿದ್ದಾರೆ. ಭಾರತದ ಶಿಕ್ಷಣ
ವ್ಯವಸ್ಥೆಯ ಗಟ್ಟಿತನ ಇಡೀ ಪ್ರಪಂಚಕ್ಕೇ ಅರಿವಾಗಿದೆ ಎಂದರು.

ಶಿಕ್ಷಕರ ಸಂಘದ ಅಧ್ಯಕ್ಷ ಹೆಚ್.ಆರ್
ಸುರೇಶ್‌ ಮಾತನಾಡಿ, ಹೊಸನಗರ
ತಾಲ್ಲೂಕಿನಲ್ಲಿ ಶಿಕ್ಷಕರ ಸಭಾಭವನದ
ಅವಶ್ಯಕತೆಯಿದ್ದು ಇಬ್ಬರು ಶಾಸಕರು ಕೈ
ಜೋಡಿಸಬೇಕು. ಒಂದು ವರ್ಷದ ಒಳಗೆ ಸಭಾಭವನ ನಿರ್ಮಿಸಿ ಕೊಡುವುದರ ಜೊತೆಗೆ ತಾವೇ ಬಂದು ಉದ್ಘಾಟಿಸಬೇಕೆಂದು ಹೊಸನಗರ ತಾಲ್ಲೂಕಿನ ಶಿಕ್ಷಕ ವೃಂದ ಉತ್ತಮ ರೀತಿಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆಂಗು ಶಿಕ್ಷಕರ ಬಗ್ಗೆ ಮೆಚ್ಚಿಗೆ ವ್ಯಕ್ತಪಡಿಸಿದರು.

ಉತ್ತಮ ಶಿಕ್ಷಕ ಪ್ರಶಸ್ತಿ, ನಿವೃತ್ತ ಶಿಕ್ಷಕರಿಗೆ
ಬೀಳ್ಕೊಡುಗೆ, ಸೇವಾವಧಿಯಲ್ಲಿ ಮೃತರಾದ
ಶಿಕ್ಷಕರ ಕುಟುಂಬಕ್ಕೆ ಸ್ಮರಣಿಕೆ, ಎಸ್‌ಎಸ್‌ಎಲ್‌ಸಿಯಲ್ಲಿ ಉತ್ತಮ ಸಾಧನೆ ಮಾಡಿ ವಿದ್ಯಾರ್ಥಿಗಳ ಪೋಷಕರಿಗೆ ಅಭಿನಂದನೆ ನಡೆಯಿತು.

ಬಿಇಓ ಎಚ್.ಆರ್.ಕೃಷ್ಣಮೂರ್ತಿ ಸ್ವಾಗತಿಸಿದರು. ತಹಸೀಲ್ದಾರ್ ಎಚ್.ಜೆ.ರಶ್ಮಿ, ತಾ.ಪಂ. ಇಓ ನರೇಂದ್ರಕುಮಾರ್, ರಾಜ್ಯ ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಬಸವಣ್ಯಪ್ಪ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಎಚ್.ಆರ್.ಸುರೇಶ್, ಶಿಕ್ಷಕರ ಪತ್ತಿನ ಸಹಕಾರಿ ಸಂಘದ ಕಾರ್ಯದರ್ಶಿ ಧರ್ಮಪ್ಪ, ತಿರುಪತಿ ನಾಯ್ಕ್, ರೇಣುಕೇಶ್, ಕಾರ್ಯದರ್ಶಿ ಕೆ.ಜಿ.ಪುಟ್ಟಸ್ವಾಮಿ ಸೇರಿದಂತೆ  ಶಿಕ್ಷಕರ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.

Leave a Comment