ಪ್ರತಿ ಮನೆಯಲ್ಲೂ ಭಗವದ್ಗೀತೆ ಪಠಣ ಮಾಡಬೇಕು ; ವಿಜೇಂದ್ರ ಶೇಟ್

Written by Mahesh Hindlemane

Published on:

ಹೊಸನಗರ : ಭಾರತ ಅನೇಕ ಧರ್ಮದವರನ್ನು ಹೊಂದಿದ ದೇಶ. ಅವರೆಲ್ಲರೂ ಅವರವರಿಗೆ ಸಂಬಂಧಿಸಿದ ಧರ್ಮ ಗ್ರಂಥಗಳನ್ನು ಅವರವರ ಮನೆಯಲ್ಲಿಯೇ ಓದುತ್ತಾರೆ. ಅದೇ ರೀತಿ ಹಿಂದು ಧರ್ಮದ ಗ್ರಂಥವಾದ ಭಗವದ್ಗೀತೆ ಪುಸ್ತಕವನ್ನು ಪ್ರತಿಯೊಬ್ಬರ ಮನೆಯಲ್ಲಿಯೇ ಓದುವಂತೆ ಪ್ರೇರೇಪಿಸಬೇಕೆಂದು ವರ್ತಕರ ಸಂಘದ ಅಧ್ಯಕ್ಷ ಹಾಗೂ ಭಗವದ್ಗೀತೆ ಅಭಿಯಾನದ ಅಧ್ಯಕ್ಷ ವಿಜೆಂದ್ರ ಶೇಟ್‌ ಹೇಳಿದರು.

WhatsApp Group Join Now
Telegram Group Join Now
Instagram Group Join Now

ತಾಲ್ಲೂಕಿನ ಕಾರಣಗಿರಿ ದೇವಸ್ಥಾನದ ಆವರಣದಲ್ಲಿ ಶ್ರೀ ಸೋಂದಾ ಸ್ವರ್ಣವಲ್ಲಿ ಮಹಾ ಸಂಸ್ಥಾನ ಇವರ ಆಶ್ರಯದಲ್ಲಿ ಹೊಸನಗರ ತಾಲ್ಲೂಕು ಭಗವದ್ಗೀತಾ ಅಭಿಯಾನ ಸಮಿತಿಯ ವತಿಯಿಂದ ಪ್ರಶಿಕ್ಷಣ ಸಮಾರಂಭವನ್ನು ಏರ್ಪಡಿಸಲಾಗಿದ್ದು ಈ ಕಾರ್ಯಕ್ರಮದಲ್ಲಿ ಮಾತನಾಡಿದರು.

ಈ ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಹನಿಯ ರವಿ, ಭಗವದ್ಗೀತೆಯನ್ನು ಮಕ್ಕಳು ಹೆಚ್ಚು ಕಲಿಯುವಂತೆ ಆಗಬೇಕು ಆಗ ಮಾತ್ರ ದೇಶದ ದೇವರ ಬಗ್ಗೆ ಗೌರವ ಹೊಂದಲು ಸಾಧ್ಯ ಎಂದರು.

ಈ ಕಾರ್ಯಕ್ರಮವನ್ನು ಬ್ರಾಹ್ಮಣ ಮಹಾ ಸಭಾ ತಾಲ್ಲೂಕು ಅಧ್ಯಕ್ಷ ಡಾ. ರಾಮಚಂದ್ರರಾವ್‌ ಕಾರ್ಯಕ್ರಮ ಉದ್ಘಾಟಿಸಿದರು.

ಈ ಕಾರ್ಯಕ್ರಮದಲ್ಲಿ ಅಭಿಯಾನ ಸಮಿತಿಯ ಸಂಚಾಲಕಿ ಅನುಪಮ ಸುರೇಶ್, ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಶಿವರಾಮ್ ಭಟ್, ಗೀತಾ ಭಾಗವತ್, ಶಾಂತಲಾ ರಾಮಚಂದ್ರ, ಲಕ್ಷ್ಮಿ ಶ್ರೀಪತಿರಾವ್, ಗಾಯಿತ್ರಿ ಅರಣ್ ಸದಾಶಿವ ಶ್ರೇಷ್ಠಿ, ಇನ್ನೂ ಮುಂತಾದವರು ಆಗಮಿಸಿ ಭಗವದ್ಗೀತೆ ಪಠಣದ ಬಗ್ಗೆ ಮಾತನಾಡಿದರು.

Leave a Comment