RIPPONPETE ; 2025-26ನೇ ಸಾಲಿನ ಎನ್.ಆರ್.ಈ.ಜಿ ಯೋಜನೆಯಡಿ ಇಂದು ಗ್ರಾಮ ಪಂಚಾಯ್ತಿ ಗ್ರಾಮ ಕ್ರಿಯಾ ಯೋಜನೆಯನ್ನು ತಯಾರಿಸುವ ವಿಶೇಷ ಗ್ರಾಮ ಸಭೆಯು ಗ್ರಾಮಾಧ್ಯಕ್ಷೆ ಧನಲಕ್ಷ್ಮಿ ಅಧ್ಯಕ್ಷತೆಯಲ್ಲಿ ನಡೆಯುವ ವೇಳೆ ಹಲವು ಬಿಜೆಪಿ ಬೆಂಬಲಿತ ಸದಸ್ಯರು ಕಪ್ಪುಪಟ್ಟಿ ಧರಿಸಿ ಸಭೆಗೆ ಹಾಜರಾದ ಪ್ರಸಂಗ ಮುಜಗರಕ್ಕೆ ಕಾರಣವಾಯಿತು.
ಗ್ರಾಮಾಧ್ಯಕ್ಷೆ ಧನಲಕ್ಷ್ಮಿ ಮತ್ತು ಸದಸ್ಯ ಗಣಪತಿಯವರ ಪಂಚಾಯಿತ್ ಅಭಿವೃದ್ದಿಯನ್ನು ವರ್ಗಾವಣೆ ಮಾಡಿಸಿಕೊಂಡು ಬರುವುದಾಗಿ ಲಂಚದ ಬೇಡಿಕೆ ಇಟ್ಟಿರುವುದು ಮತ್ತು ಅಶ್ಲೀಲ ಪದಬಳಸಿ ಸಾರ್ವಜನಿಕನೋರ್ವನನ್ನು ನಿಂಧಿಸಿರುವ ಆಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಮೂಲಕ ಸಾರ್ವಜನಿಕವಾಗಿ ಅಪಹಾಸ್ಯಕ್ಕೆ ಒಳಗಾಗಿದ್ದಾರೆ. ಅಲ್ಲದೆ ಪಂಚಾಯ್ತಿ ಗೌರವಕ್ಕೆ ಧಕ್ಕೆ ತರುವ ಮೂಲಕ ಬೀದಿಯಲ್ಲಿ ಹರಾಜ್ ಮಾಡಿದ್ದಾರೆಂದು ಆರೋಪಿ ಕಳೆದ ಸೋಮವಾರದೊಂದು ಮಾಜಿ ಸಚಿವ ಹರತಾಳು ಹಾಲಪ್ಪನವರ ನೇತೃತ್ವದಲ್ಲಿ ಪ್ರತಿಭಟನೆ ನಡೆದು ರಾಜೀನಾಮೆಗೆ ಆಗ್ರಹಿಸಲಾಗಿತು. ಈಗ ಅವರ ಅಧ್ಯಕ್ಷತೆಯಲ್ಲಿ ಉದ್ಯೋಗ ಖಾತ್ರಿ ಕ್ರಿಯಾ ಯೋಜನೆಯ 2025-26ನೇ ಸಾಲಿನ ವಿಶೇಷ ಗ್ರಾಮಸಭೆಗೆ ಹಾಜರಾಗುವಾಗ ಬಿಜೆಪಿ ಬೆಂಬಲಿತ ಗ್ರಾಮ ಪಂಚಾಯ್ತಿ ಉಪಾಧ್ಯಕ್ಷ ಸುಧೀಂದ್ರ ಪೂಜಾರಿ ಸದಸ್ಯರಾದ ಜಿ.ಡಿ.ಮಲ್ಲಿಕಾರ್ಜುನ, ಮಂಜುಳ, ವನಮಾಲ, ಪಿ.ರಮೇಶ್, ದಾನಮ್ಮ ಕಪ್ಪುಪಟ್ಟಿ ಕೈಗೆ ಕಟ್ಟಿಕೊಂಡು ಸಭೆಗೆ ಹಾಜರಾದರು.
ಈ ಸಭೆಯ ನೋಡಲ್ ಆಧಿಕಾರಿಯಾಗಿ ಹೊಸನಗರ ತಾಲ್ಲೂಕು ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಶೇಷಾಚಲ ಭಾಗವಹಿಸಿ ಸರ್ಕಾರದ ಯೋಜನೆಯ ಕುರಿತು ನಾಗರೀಕರಿಗೆ ಜಾಗೃತಿ ಮೂಡಿಸಿ ಸೌಲಭ್ಯದ ಸದ್ಬಳಕೆಗೆ ಕರೆ ನೀಡಿದರು.
ಸಾಮಾಜಿಕ ಅರಣ್ಯ ಇಲಾಖೆಯವರು ಗ್ರಾಮ ಸಭೆಗೆ ಗೈರು ಹಾಜರಾಗಿರುವ ಬಗ್ಗೆ ಆವರಿಗೆ ನೋಟಿಸ್ ನೀಡುವಂತೆ ಸಭೆ ಒಕ್ಕೊರಲ ನಿರ್ಧಾರ ಮಾಡಿದರು.
ಗ್ರಾಮ ಪಂಚಾಯ್ತಿ ಸದಸ್ಯರಾದ ಡಿ.ಈ.ಮಧುಸೂದನ್, ಆಸಿಫ್, ಗಣಪತಿ, ಪ್ರಕಾಶ ಪಾಲೇಕರ್, ಎನ್.ಚಂದ್ರೇಶ್, ಆರ್.ವಿ.ನಿರೂಪ್, ವೇದಾವತಿ, ಸಾರಾಭಿ, ಅನುಪಮಾ ರಾಕೇಶ್, ತೋಟಗಾರಿಕಾ ಇಲಾಖೆಯ ಅಧಿಕಾರಿ ಚಂದ್ರಶೇಖರ್, ಕೃಷಿ ಇಲಾಖೆಯ ಮತ್ತು ಕಿರಿಯ ಅಭಿಯಂತರರು ಹಾಜರಿದ್ದರು.
ಪಂಚಾಯ್ತಿ ಅಭಿವೃದ್ದಿ ಅಧಿಕಾರಿ ನಾಗರಾಜ್ ಸ್ವಾಗತಿಸಿದರು. ಲಕ್ಷ್ಮಿ ನಾಗರಾಜ್ ನಿರೂಪಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು.
ಕೋಣಂದೂರು ; ನ. 30 ರಂದು ಶಿವಲಿಂಗೇಶ್ವರ ಕರ್ತೃಗದ್ದುಗೆಯ ಕಾರ್ತಿಕ ದೀಪೋತ್ಸವ
RIPPONPETE ; ತೀರ್ಥಹಳ್ಳಿ ತಾಲ್ಲೂಕಿನ ಕೋಣಂದೂರು ಶ್ರೀಶಿವಲಿಂಗೇಶ್ವರ ಬೃಹನ್ಮಠದಲ್ಲಿ ನವೆಂಬರ್ 30 ರಂದು ಶನಿವಾರ ಸಂಜೆ ಲಿಂಗೈಕ್ಯ ಶ್ರೀಶಿವಲಿಂಗೇಶ್ವರ ಕರ್ತೃಗದ್ದುಗೆಯ ಕಾರ್ತಿಕ ದೀಪೋತ್ಸವ ಹಾಗೂ ಧಾರ್ಮಿಕ ಪೂಜಾ ಕಾರ್ಯಗಳು ಜರುಗಲಿದೆ.
ಬೃಹನ್ಮಠದ ಶ್ರೀಪತಿ ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮಿಜಿಗಳ ದಿವ್ಯಸಾನಿಧ್ಯದಲ್ಲಿ ಕಾರ್ತಿಕ ದೀಪೋತ್ಸವ ಮತ್ತು ಧರ್ಮ ಸಮಾರಂಭ ಜರುಗಲಿದ್ದು ಸಕಲ ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ದರ್ಶನಾರ್ಶೀವಾದ ಪಡೆಯಲು ಮಠದ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.