Ripponpete

ಕಾರ್ಯಕರ್ತರ ಆಧಾರಿತ ಪಕ್ಷ ಬಿಜೆಪಿ ; ಡಾ. ಧನಂಜಯ ಸರ್ಜಿ

ರಿಪ್ಪನ್‌ಪೇಟೆ ; ಹಿಂದೂಗಳಿಗೆ 12 ಜ್ಯೋತಿರ್ಲಿಂಗ 12 ರಾಶಿ ಹಾಗೂ 12 ಮಾಸಗಳಂತೆ ನಮ್ಮ ನರೇಂದ್ರ ಮೋದಿಜಿಯವರ ನೇತೃತ್ವದ ಕೇಂದ್ರ ಸರ್ಕಾರಕ್ಕೆ 12 ವರ್ಷ ವಿಶ್ವಾಸ ಮತ್ತು ಅಭಿವೃದ್ದಿಯ ಯುಗದಲ್ಲಿನ ಶುಭಸಂದರ್ಭದಲ್ಲಿ ನಮ್ಮ ಕಾರ್ಯಕರ್ತರನ್ನು ಶ್ರಮದ ಪ್ರತಿಫಲದ ಪ್ರತೀಕವಾಗಿದೆ ಎಂದು ವಿಧಾನಪರಿಷತ್ ಸದಸ್ಯ ಡಾ.ಧನಂಜಯ ಸರ್ಜಿ ಹೇಳಿದರು.

WhatsApp Group Join Now
Telegram Group Join Now
Instagram Group Join Now
📢 Stay Updated! Join our WhatsApp Channel Now →

ರಿಪ್ಪನ್‌ಪೇಟೆಯ ಮಹಾಶಕ್ತಿಕೇಂದ್ರದ ವ್ಯಾಪ್ತಿಯ ಗವಟೂರು ಗ್ರಾಮದ ಸುಂದರೇಶ್ ಮನೆಯಲ್ಲಿ ಏರ್ಪಡಿಸಲಾಗಿದ್ದ ಬೂತ್ ಮಟ್ಟದ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ವ್ಯಕ್ತಿಗಿಂತ ಪಕ್ಷ ಮುಖ್ಯ. ಪಕ್ಷಕ್ಕಿಂತ ದೇಶ ಮುಖ್ಯ ಎಂದು ಹೇಳಿಕೊಂಡು ಬಂದಂತಹ ಪಕ್ಷ ಬಿಜೆಪಿ. ಸೋತಾಗಲು ಸಿಹಿ ಹಂಚಿ ಕಾರ್ಯಕರ್ತರನ್ನು ಕ್ರೀಯಾಶೀಲರನ್ನಾಗಿ ಬೆಳೆಸಿದ ಪಕ್ಷವೆಂದರೆ ಅದು ಬಿಜೆಪಿ. ಸಾಮಾನ್ಯ ಹಿಂದೂಳಿದ ಜನಾಂಗದ ಮಹಿಳೆಯನ್ನು ರಾಷ್ಟ್ರಪತಿಯನ್ನಾಗಿ ಮಾಡಿದ ಕೀರ್ತಿ ಪಕ್ಷಕ್ಕೆ ಸಲ್ಲುತ್ತದೆ. ಆರ್.ಎಸ್.ಎಸ್ ಮತ್ತು ಜನಸಂಘದ ಹಾಗೂ ಮಂಡಲ ಕಾರ್ಯಕರ್ತರ ಪ್ರಾಮಾಣಿಕ ಪ್ರಯತ್ನದ ಫಲದಿಂದಾಗಿ ದೇಶದಲ್ಲಿ ಬಿಜೆಪಿ ಅಧಿಕಾರ ನಡೆಸುವಂತಾಗಿರುವುದನ್ನು ಸ್ಮರಿಸಿ ಹಿರಿಯರನ್ನು ಸನ್ಮಾನಿಸಿ ಗೌರವಿಸಲಾಗುತ್ತಿದೆ ಎಂದ ಅವರು, ಕಾರ್ಯಕರ್ತರ ನಿಷ್ಟೆ ಶ್ರಮ ಮತ್ತು ಜನರ ವಿಶ್ವಸವೇ ನಮ್ಮ ಶಕ್ತಿಯಾಗಿದೆ. ಪಕ್ಷದ ತತ್ವ ಸಿದ್ದಾಂತಗಳನ್ನು ಪ್ರಚಾರ ಮಾಡಲು ಕ್ರಿಯಾಶೀಲ ಚಟುವಟಿಕೆ ರೂಪಿಸಬೇಕು. ಪ್ರತಿ ಬೂತ್‌ಗಳಲ್ಲೂ ಸೇವಾ ಮತ್ತು ಸಂಪರ್ಕದ ಕಾರ್ಯಕ್ರಮಗಳನ್ನು ಏರ್ಪಡಿಸಬೇಕು. ಇಂದಿನಿಂದಲೇ ಮುಂದಿನ 2028ರ ಸಾರ್ವತ್ರಿಕ ಚುನಾವಣೆಗೆ ಕಾರ್ಯಕರ್ತರು ಸಜ್ಜಾಗಬೇಕು ಎಂದು ಕರೆ ನೀಡಿ, ಮುಂದೆ ಬರುವಂತಹ ಗ್ರಾಮ ಪಂಚಾಯಿತ್, ತಾಲ್ಲೂಕು, ಜಿಲ್ಲಾ ಪಂಚಾಯಿತ್ ಚುನಾವಣೆಯಲ್ಲಿ ಬಿಜೆಪಿ ಗೆಲುವಿಗೆ ಬೂತ್ ಮಟ್ಟದ ಕಾರ್ಯಕರ್ತರು ಶ್ರಮವಹಿಸುವಂತಾಗಬೇಕು ಎಂದು ಕರೆ ನೀಡಿದರು.

ಅಸಮದಾನ ಹೊರಹಾಕಿದ ಕಾರ್ಯಕರ್ತರು !

ಪಕ್ಷ ನಿಷ್ಟೆ ಮತ್ತು ಬೂತ್ ಮಟ್ಟದಲ್ಲಿ ಸಾಮಾನ್ಯ ಜನರೊಂದಿಗೆ ಮತದಾರರೊಂದಿಗೆ ಸಕ್ರಿಯವಾಗಿ ತೊಡಗಿಸಿಕೊಂಡು ಗ್ರಾಮೀಣ ಪ್ರದೇಶದಲ್ಲಿ ಪಕ್ಷದ ಮತ್ತು ಸರ್ಕಾರದ ಜನಪರ ಯೋಜನೆಗಳ ಕುರಿತು ಜಾಗೃತಿ ಮೂಡಿಸುವ ಕಾರ್ಯಕರ್ತರನ್ನು ಕಡೆಗಣಿಸಲಾಗುತ್ತಿದೆ ಎಂದು ಬುಕ್ಕಿವರೆ ರಾಜೇಶ್ ಸಭೆಯಲ್ಲಿ ಅಸಮದಾನ ವ್ಯಕ್ತಪಡಿಸಿದ ಘಟನೆ ನಡೆಯಿತು.

ಈ ಸಭೆಯಲ್ಲಿ ಬಿಜೆಪಿ ಮಂಡಲ ಘಟಕದ ಅಧ್ಯಕ್ಷ ಎನ್.ಸತೀಶ್, ಬಿಜೆಪಿ ಮಹಾಶಕ್ತಿಕೇಂದ್ರದ ಅಧ್ಯಕ್ಷ ಸುಂದರೇಶ್, ಗವಟೂರು ಬೂತ್ ಅಧ್ಯಕ್ಷ ಸುಧೀರ್, ಜಿಲ್ಲಾ ಬಿಜೆಪಿ ಮುಖಂಡರಾದ ಪದ್ಮಿನಿ, ಸುಧಾಕರ್, ಆರ್.ಟಿ.ಗೋಪಾಲ, ವೀರೇಶ್ ಆಲವಳ್ಳಿ, ಎಂ.ಸುರೇಶ ಸಿಂಗ್, ನಾಗಾರ್ಜುನಸ್ವಾಮಿ, ಎ.ಟಿ.ನಾಗರತ್ನಮ್ಮ, ಮಂಜುಳಾ
ಕೇತಾರ್ಜಿರಾವ್, ವನಮಾಲ ಕೃಷ್ಣಪ್ಪ, ಲಕ್ಷ್ಮಮ್ಮ ಲಕ್ಷ್ಮಣ, ಜಿ.ಡಿ.ಮಲ್ಲಿಕಾರ್ಜುನ, ದೀಪಾ ಸುಧೀರ್, ಪಕ್ಷದ ಕಾರ್ಯಕರ್ತರು ಹಾಜರಿದ್ದರು.

ಮಾಹಿತಿ ಮತ್ತು ಮೂಲ: ಈ ವರದಿಯ ಮಾಹಿತಿ ವರದಿಗಾರರು, ಅಧಿಕೃತ ಪ್ರಕಟಣೆಗಳು ಅಥವಾ ಸ್ಥಳದಲ್ಲಿನ ವಿಶ್ವಾಸಾರ್ಹ ಮೂಲಗಳಿಂದ ಪರಿಶೀಲಿಸಲಾಗಿದೆ.

Mahesh Hindlemane

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್‌ಸೈಟ್‌ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 8 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್‌ಸೈಟ್‌ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ <strong>'ಮಲ್ನಾಡ್ ಟೈಮ್ಸ್'</strong> ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ. <a href="mailto:[email protected]">[email protected]</a>